ಕಾರವಾರ

ಜನಪ್ರತಿನಿಧಿ ಜನಸಾಮಾನ್ಯರ ಪ್ರಶ್ನೆಗಳಿಗೆ ಸ್ಪಂದಿಸುವುದು ರೂಢಿ ಮಾಡಿಕೊಳ್ಳಬೇಕು - ಮಾಜಿ ಶಾಸಕ ಸತೀಶ್ ಸೈಲ್

ಜನಪ್ರತಿನಿಧಿ ಜನಸಾಮಾನ್ಯರ ಪ್ರಶ್ನೆಗಳಿಗೆ ಸ್ಪಂದಿಸುವುದು ರೂಢಿ ಮಾಡಿಕೊಳ್ಳಬೇಕು - ಮಾಜಿ ಶಾಸಕ ಸತೀಶ್ ಸೈಲ್

ಕಾರವಾರ 27: ನೆರೆ ಹಾವಳಿ ಯಿಂದ ತುತ್ತಾದ ಸಂತ್ರಸ್ತರ ಮತ್ತು ಅಲ್ಲಿಯ ಗ್ರಾಪಂ ಜನಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸುವುದು ಬಿಟ್ಟು, : ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ, ರಾಜಕೀಯ ಮಾಡುತ್ತಿದ್ದೀರಿ ಎಂದು ವಿರೋಧಿ ನಾಯಕರ ಮೇಲೆ ಆರೋಪಿಸುವುದು ಶೋಭೆ ತರುವ ಕೆಲಸ ಅಲ್ಲ ಎಂದು ಮಾಜಿ ಶಾಸಕ ಸೈಲ್ ಹೇಳಿದ್ದಾರೆ. ಸೋಮವಾರ  ಮಲ್ಲಾಪುರದಲ್ಲಿ ನೆರೆ ಸಂತ್ರಸ್ತರು  ಕಳೆದ ಎರಡು ವರ್ಷ ಗಳಿಂದ ಬಾಕಿ ಇದ್ದ ನೆರೆ ಪರಿಹಾರ ಇನ್ನುವರೆಗೂ ಪಾವತಿಸದಿರಲು ಕಾರಣ ಕೇಳಿದಾಗ ಶಾಸಕಿ  ಸಮರ್ಪಕ ಉತ್ತರ ಕೊಡುವುದು ಬಿಟ್ಟು ‘ಮಾಜಿ ಶಾಸಕ ಸತೀಶ್ ಸೈಲ್ ಗಲಾಟೆ ಮಾಡಲು ಜನ ಬಿಟ್ಟಿದ್ದಾರೆ ' ಎಂದು ಆಪಾದನೆ ಮಾಡುವುದು ಶಾಸಕರ ಪಲಾಯನ ಸೂತ್ರ ಎಂಬುವುದು ಎಲ್ಲರಿಗೂ ಗೊತ್ತಾಗುತ್ತದೆ ಎಂದು ಸೈಲ್ ಅಪಾದಿಸಿದ್ದಾರೆ. 

ಜನರನ್ನು ಎದುರಿಸಿ ಸಮಸ್ಯೆ ಬಗೆಹರಿಸಿ ಜನರ ವಿಶ್ವಾಸ ಗಳಿಸಿದ್ದರೆ ಅದೊಂದು ಮಾತು ಬೇರೆ. ಇದರ ಬದಲಾಗಿ ಪಂಚಾಯತ್ ಕೇಂದ್ರಕ್ಕೆ ಮುತ್ತಿಗೆ ಹಾಕಿ ಜನಪ್ರತಿನಿಧಿ ಗಳಿಗೆ ದಿಕ್ಕಾರ ಹಾಕುವುದರ ಜೊತೆಗೆ ಪರಿಹಾರ ಸಾಮಗ್ರಿ ವಿತರಿಸುವುದಕ್ಕೆ ತಡೆ ಒಡ್ಡಿದರು ಎಂದು ಅಪಾದಿಸುವುದು ಕೇವಲ ಹಾರಿಕೆಯ ಉತ್ತರ. ಕಳೆದ ಎರಡು ವರ್ಷ ಗಳಲ್ಲಿ  ಶಾಸಕಿಯಾಗಿ ಇಲ್ಲಿ ನಡೆದ ನೆರೆ ಪರಿಸ್ತಿತಿಯನ್ನು ನಿಭಾಯಿಸಿದ ಅನುಭವದ ಹಿನ್ನೆಲೆಯಲ್ಲಿ ಈ ವರ್ಷ ಯಾವ ಯಾವ ಮುನ್ನೆಚ್ಚರಿಕೆ ಕ್ರಮ ತಗೊಂಡಿದ್ದೀರಿ ಎಂದು ಜನತೆಯ ಮುಂದಿಡಬೇಕು. ಹವಾಮಾನ ಇಲಾಖೆಯ ಮುನ್ಸೂಚನೆ ಪಡೆದು ಜಿಲ್ಲಾ ಅಧಿಕಾರಿಗಳೊಡನೆ ಏಷ್ಟು ಸಭೆ ನಡೆಸಿದ್ದೀರಿ, ಅಲ್ಲದೆ ಕೆ. ಪಿ. ಸಿ. ಮತ್ತು  ಎನ್‌. ಪಿ. ಸಿ. ಅಧಿಕಾರಿ ಗಳೊಡನೆ ಮುನ್ನೆಚ್ಚರಿಕೆ ಯಾಗಿ ಯಾವ ಯಾವ ಸಲಹೆ ಸೂಚನೆ ನೀಡಿರುವಿರಿ, ಮತ್ತು ಬೇಕಾದ ಯಾವುದೇ ಜೀವ ರಕ್ಷಕ ಸಮಾಗ್ರಿಗಳು ಎಲ್ಲಿಯೂ ಇರದಿರಲು ಕಾರಣ ಏನು ಎಂದು ಜನ ಕೇಳಿದರೆ ಅದರಲ್ಲಿ ತಪ್ಪೇನಿದೆ .  ಮಲ್ಲಾಪುರಕ್ಕೆ ಬರುವ ಮೊದಲು ಕದ್ರಾ ಭಾಗದಲ್ಲಿ ತಾವು ನಡೆಸಿದ ಸಭೆಯಲ್ಲಿ ಕೂಡಾ ಈ ವಿಷಯದಲ್ಲಿ ತಾವು ಮೌನ ವಹಿಸಿ , ಮಲ್ಲಾಪುರಕ್ಕೆ ನಿಮ್ಮ ಕದ್ರಾ ಅದ್ಯಕ್ಸ್ಯನನ್ನು ಕರೆತಂದು ಅವರ ಮುಖಾಂತರ ಮಲ್ಲಾಪುರ ಜನಪ್ರತಿನಿಧಿಗಳನ್ನು ಹೀಯಾಲಿಸಿದ್ದು ಏಷ್ಟು ನ್ಯಾಯ ಸಮ್ಮತ. ಅದೂ ಅಲ್ಲದೆ ನೆರೆ ಪೀಡಿತರನ್ನು ರಕ್ಷಿಸುವುದು ಪಂಚಾಯತ್ ಕೆಲಸ ಶಾಸಕರ ಕೆಲಸ ಆಲ್ಲ ಎಂದು ನೀವು ಮಲ್ಲಾಪುರ ದಲ್ಲಿ ಆಪಾದನೆ ಮಾಡಿದ್ದೀರಿ, ಹಾಗಾದರೆ ಬಿಜೆಪಿ ಪಕ್ಷದ ಅಧ್ಯಕ್ಷರಿರುವ ಕದ್ರಾದಲ್ಲಿ ಇಷ್ಟೆಲ್ಲಾ  ಕಷ್ಟ ನಷ್ಟ ಹೇಗಾಯಿತು  ಎಂದು ಶಾಸಕಿ ರೂಪಾಲಿ ಉತ್ತರಿಸಲಿ ಎಂದಿದ್ದಾರೆ. 

ಕೆ. ಪಿ.ಸಿ. ಒಂದೇ ದಿನದಲ್ಲಿ ಎರಡು ಲಕ್ಷ ಐವತ್ತು ಸಾವಿರ ಕ್ಯೂಸೆಕ್ ನೀರು ಬಿಟ್ಟಾಗ ಕೆ. ಪಿ. ಸಿ. ಸಂಬಂಧಿತ ಪಂಚಾಯತ ಗಳಿಗೆ ಲಿಖಿತ ವಾಗಿ ನೋಟಿಸ ನೀಡದಿರಲು ಕಾರಣವೇನು, ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸುವ ಸಮಯದಲ್ಲಿ ಪೊಲೀಸರು ಪೊಲೀಸ್ ಭಾಷೆ ಬಳಸಿದ್ದು ನಿಮ್ಮ ಗಮನಕ್ಕೇ ಬಂದಿರುವುದೇ, ನೊಂದ ಜನರು ಈ ಎಲ್ಲ ಅಂಶ ಗಳನ್ನು ಶಾಸಕರಲ್ಲಿ ಕೇಳದೆ ಮತ್ತೆಲ್ಲಿ ಕೇಳುವುದು. ಜನರ ಪ್ರಶ್ನೆಗಳಿಗೆ  ಉತ್ತರಿಸದೆ , ಮಲ್ಲಾಪುರದಲ್ಲೇ  ಪರಿಹಾರ ಸಾಮಾಗ್ರಿ ವಿತರಿಸಲು ಕಾಂಗ್ರೆಸ್ಸಿನ ಕಾರ್ಯಕರ್ತರು ತಡೆದರು ಎಂದು ಪಂಚಾಯತ್‌ಗೆ ಶಾಸಕರು ತನ್ನ ಜನರಿಂದ ಮುತ್ತಿಗೆ ಹಾಕಿಸುವುದು ಎಷ್ಟರ ಮಟ್ಟಿಗೆ ನ್ಯಾಯ ಸಮ್ಮತ ಎಂದು ಮುಂದಿನ ದಿನಗಳಲ್ಲಿ  ಜನರೇ ಉತ್ತರ ನೀಡಲಿದ್ದಾರೆಂದು ಮಾಜಿ ಶಾಸಕ ಸೈಲ್ ಹೇಳಿದ್ದಾರೆ.  


ಸುದ್ದಿ ಓದಿ