ಗಂಗಾವತಿ

ಮಳೆಯ ಅಭಾವದಿಂದ ಉಂಟಾಗಿರುವ ಬರಗಾಲದ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರ ವಿಫಲ ಮಾಜಿ ಶಾಸಕ ಮುನವಳ್ಳಿ ಆರೋಪ

ಮಳೆಯ ಅಭಾವದಿಂದ ಉಂಟಾಗಿರುವ ಬರಗಾಲದ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರ ವಿಫಲ ಮಾಜಿ ಶಾಸಕ ಮುನವಳ್ಳಿ ಆರೋಪ

ಗಂಗಾವತಿ: ಗಂಗಾವತಿ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ  ಬಿಜೆಪಿ ಕಾರ್ಯಾಲಯದಲ್ಲಿ ರೈತ ಮೋಚರ್ಾ ವತಿಯಿಂದ ಸರ್ಕಾರದ ವಿವಿಧ ಯೋಜನೆಯ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ನಂತರ ಮಾತನಾಡಿದ ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರುಮಳೆಯ ಅಭಾವದಿಂದ ಉಂಟಾಗಿರುವ ಬರಗಾಲದ ಸಮಸ್ಯೆ ಮಳೆಯ ರಾಜ್ಯದಲ್ಲಿ ಉಂಟಾಗುವ ಬರಗಾಲದ ಸಮಸ್ಯೆ ಮತ್ತು ರೈತರಿಗೆ ವಿದ್ಯುತ್ ಅಭಾವದಿಂದ ರೈತರಿಗೆ ಪಂಪಸೆಟ್ ಗಳಿಗೆ ಅನಿಯಮಿತ ಲೋಡ್ ಶೆಡ್ಡಿಂಗ್  ರೈತರ ಜಮೀನುಗಳಲ್ಲಿ ಇರುವ ತೆರದ ಬಾವಿಯ ನೀರನ್ನು ಕೃಷಿ ಚಟುವಟಿಕೆಗಳಿಗೆ  ಉಪಯೋಗಿಸಿಕೊಳ್ಳಲು ನಿತ್ಯ ಹಗಲು ಹೊತ್ತಿನಲ್ಲಿ ಸತತವಾಗಿ 7 ಗಂಟೆಗಳ ವಿದ್ಯುತ್ ಪೂರೈಕೆ ಮಾಡುತ್ತಿರುವುದನ್ನು ಲೋಡ್ ಶೆಡಿಂಗ್ ಮೂಲಕ  ತಡೆಹಿಡದಿರುವ ಕಾರಣ ರೈತರಿಗೆ ತುಂಬಾ ತೊಂದರೆ ನಷ್ಟಆದಕಾರಣ ರೈತರಿಗೆ ಏಳು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದಮೇಲೆ ರಾಜ್ಯದಲ್ಲಿ 42 ಜನ ರೈತರು ಆತ್ಮಹತ್ಯೆ  ಮಾಡಿಕೊಡ್ಡಿದ್ದಾರೆ ಆದಕಾರಣ ರೈತರಿಗೆ ಯಾವುದೇ ರೀತಿಯಲ್ಲಿ ರೈತ ವರ್ಗಕ್ಕೆ ಧೈರ್ಯ ತುಂಬುವ ಮತ್ತು ಅವರ ಅರ್ಥಿಕವಾಗಿ  ಸಶಕ್ತರನ್ನಾಗಿ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಗಿದೆ ರೈತ ವಿದ್ಯಾನಿಧಿ ಯೋಜನೆ ಹಾಗೂ ರೈತರ ಮಕ್ಕಳು ವಿದ್ಯಾವಂತರಾಗಬೇಕು ಉನ್ನತ ಶಿಕ್ಷಣವನ್ನು ಪಡೆಯಬೇಕು ಎನ್ನುವ ಹಿತದೃಷ್ಟಿಯಿಂದ ರಾಜ್ಯದ 11 ಲಕ್ಷ ರೈತರ ಕುಟುಂಬದ ವಿದ್ಯಾರ್ಥಿ ಗಳಿಗೆ ಪ್ರತಿವರ್ಷ 438.69, ಕೋಟಿ ರೂಪಾಯಿಗಳ ರೈತ ವಿದ್ಯಾನಿಧಿಯನ್ನು ನೀಡಲಾಗುತ್ತಿದ್ದು ಈ ಸರ್ಕರ ರದ್ದು ಪಡಿಸುವ ಮೂಲಕ ಬಡ ರೈತರ ಮಕ್ಕಳಿಗೆ ಅನ್ಯಾಯವಾಗಿದೆ   ಹಾಗೂ ಜಿಲ್ಲೆಗೊಂದು ಗೋಶಾಲೆ  ಜಾನುವಾರು  ಸಂರಕ್ಷಿಸಲು ಪ್ರತಿ ಜಿಲ್ಲೆಗೊಂದು ಗೋ ಶಾಲೆಯನ್ನು ಸ್ಥಾಪಿಸಲು ಬಿಜೆಪಿ ಸರ್ಕಾರ ತೀರ್ಮಾನಿಸಿತ್ತು  ಈ ಸರ್ಕಾರ ಈ ಯೋಜನೆಯನ್ನು ಹಿಂಪಡೆಯಲು ನಿರ್ಧರಿಸಿದೆ ಇದು ಯಾವ ನ್ಯಾಯ ಆದಕಾರಣ ಇನ್ನೂ ಹಲವಾರು ರೈತರ ಪರ ಯೋಜನೆಯನ್ನು  ಕೈ ಬಿಡುವ ಪ್ರಯತ್ನ ಮಾಡುತ್ತದೆ  ಎಂದು  ಸರ್ಕಾರದ ವಿರುದ್ಧ ಕಿಡಿ ಕಾರಿದರು.ಗಂಗಾವತಿ ವಿಧಾನ ಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಬೇಕಾಗಿದೆ ಗಂಗಾವತಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅನೈತಿಕ ಚಟುವಟಿಕೆಗಳಿಗೆ ಮಟ್ಕಾ ಇಸ್ಪೀಟು  ಇನ್ನೂ ಹೆಚ್ಚು ಹೆಚ್ಚು ಗಂಗಾವತಿ ವಿಧಾನ ಸಭಾ ಕ್ಷೇತ್ರದಲ್ಲಿ ನಡೆಯುತ್ತದೆ  ಪೊಲೀಸ್ ಇಲಾಖೆ ಕಣ್ಮುಚ್ಚಿ ಇದೆ ಗಂಗಾವತಿ ಶಾಸಕರಾದ ಗಾಲಿ ಜನಾರ್ಧನರೆಡ್ಡಿ ಅವರು ಮಂಥನ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ಕರೆದು ಯಾವುದೇ ರೀತಿಯಲ್ಲಿ ಇಸ್ಪೀಟು ಮಟ್ಕಾ  ಇನ್ನಿತರ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂದು ಹೇಳಿದ್ರು ಯಾಕೆ ನಿಲ್ಲಾಲೀಲಾ ಎಂದು ಆರೋಪಿಸಿದರು  ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷರಾದ ಕಾಶಿನಾಥ ಚಿತ್ರಗಾರ, ಜಿಲ್ಲಾ ರೈತ ಮೋರ್ಚಾ  ಅಧ್ಯಕ್ಷರಾದ ಲಂಕೇಶ ಗುಳದಾಳ, ವಕ್ತಾರರಾದ ಜೋಗದ ವೀರಭದ್ರಪ್ಪ ನಾಯಕ, ಜಿಲ್ಲಾ ಒಬಿಸಿ ಮೋಚರ್ಾ ಅಧ್ಯಕ್ಷರಾದ ವೆಂಕಟೇಶ ಅಮರಜ್ಯೋತಿ, ಮಾಜಿ ನಗರಸಭೆ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ, ಪ್ರಮುಖರಾದ ಜಿ. ಶ್ರೀಧರ, ಜೋಗದ ಹನುಮಂತಪ್ಪ ನಾಯಕ, ದೇವಾನಂದ ದಾಸನಾಳ, ವೆಂಕಟೇಶ ಕೆ, ಬಸವರಾಜ ಎಚ್ ಇದ್ದರು 

ಸುದ್ದಿ ಓದಿ