ರಾಷ್ಟ್ರೀಯ

ಭಾರತದ ಮಾಜಿ ಫುಟ್ಬಾಲ್ ಆಟಗಾರ ನಿಖಿಲ್ ನಂದಿ ನಿಧನ

ಭಾರತದ ಮಾಜಿ ಫುಟ್ಬಾಲ್ ಆಟಗಾರ ನಿಖಿಲ್ ನಂದಿ ನಿಧನ

ನವದೆಹಲಿ, ಡಿಸೆಂಬರ್ 30: ಮಂಗಳವಾರ ರಾತ್ರಿ ತಮ್ಮ ಕೊನೆಯುಸೆಳೆದ ಒಲಿಂಪಿಯನ್ ಭಾರತ ಫುಟ್ಬಾಲ್ ತಂಡದ ಮಾಜಿ ಆಟಗಾರ ನಿಖಿಲ್ ನಂದಿ ಅವರಿಗೆ ಅಖಿಲ ಭಾರತ ಫುಟ್ಬಾಲ್ ಒಕ್ಕೂಟ ಬುಧವಾರ ಸಂತಾಪ ವ್ಯಕ್ತಪಡಿಸಿದೆ.

1956 ಮೆಲ್ಬೋರ್ನ್ ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡಿದ್ದ  ಭಾರತ  ತಂಡ ಫುಟ್ಬಾಲ್ ಟೂರ್ನಿಯಲ್ಲಿ ನಾಲ್ಕನೇ ಸ್ಥಾನ ಗಳಿಸುವಲ್ಲಿ ನಿರ್ಣಾಯಕ ಅಖಿಲ್ ಮುಖ್ಯ ಪಾತ್ರವಹಿಸಿದ್ದರು. ಜಪಾನ್ ನ ಟೋಕಿಯೊದಲ್ಲಿ ನಡೆದ 1958ರ ಏಷ್ಯನ್ ಗೇಮ್ಸ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಭಾರತ ತಂಡದಲ್ಲೂ ಅಖಿಲ್ ನಂದಿ ಬ್ಲೂ ಟೈಗರ್ಸ್ ನ ಸದಸ್ಯರಾಗಿದ್ದರು.

1955ರಲ್ಲಿ ಸಂತೋಷ್ ಟ್ರೋಫಿ ಜಯಿಸಿದ ಬಂಗಾಲ್ ತಂಡದಲ್ಲಿದ್ದ ನಂದಿ, 1958ರಲ್ಲಿ ಈಸ್ಟರ್ನ್ ರೈಲ್ವೆ ಪರ ಕೋಲ್ಕೊತಾ ಫುಟ್ಬಾಲ್ ಲೀಗ್ ಜಯಿಸಿದ್ದರು.

ಸುದ್ದಿ ಓದಿ