ಯರಗಟ್ಟಿ

ದಿ. 30ರಂದು ಯರಗಟ್ಟಿಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಭೇಟಿ

ದಿ. 30ರಂದು ಯರಗಟ್ಟಿಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಭೇಟಿ

ಯರಗಟ್ಟಿ 29: ಭಾರತೀಯ ಜನತಾ ಪಾರ್ಟಿ ಕಾರ್ಯಾಲಯ ಯರಗಟ್ಟಿಗೆ ಮಾಜಿ ಮುಖ್ಯಮಂತ್ರಿ ಮತ್ತು ಬೆಳಗಾವಿ ಲೋಕಸಭೆ ಬಿ.ಜೆ.ಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಭೇಟಿ ನೀಡಲಿದ್ದಾರೆ. 

ಸವದತ್ತಿ ಕ್ಷೇತ್ರದ ಪ್ರವಾಸದ ವಿವರ: ದಿ. 30ರಂದು ಬೆಳಿಗ್ಗೆ 9. 30 ಗಂಟೆಗೆ  ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಭೇಟೀನೀಡಿ ದರ್ಶನ. 10 ಗಂಟೆಗೆಯಿಂದ 11 ರ ವರೆಗೆ ಸವದತ್ತಿಯಲ್ಲಿ ಸ್ಥಳೀಯ ನಾಯಕ ವೀರೂಪಾಕ್ಷ ಮಾಮನಿ ಹಾಗೂ ರತ್ನಾ ಆನಂದ ಮಾಮನಿ, ಸೌರಭ ಚೋಪ್ರಾ, ಮನೆಗೆ ಭೇಟಿ ಮಾಡುವರು.ಮಧ್ಯಾಹ್ನ 12ಕ್ಕೆ ಹೂಲಿ ಅಜ್ಜನವರ ಮಠಕ್ಕೆ ಭೇಟಿ ನೀಡುವರು. 12. 30 ಕ್ಕೆ ಶಿರಸಂಗಿಯ ಕಾಳಿಕಾದೇವಿ ದೇವಸ್ಥಾನಕ್ಕೆ ಭೇಟಿ ಮತ್ತು ದರ್ಶನ. 

2.30ಕ್ಕೆ ಮುನವಳ್ಳಿಯ ಸೋಮಶೇಖರ ಮಠಕ್ಕೆ ಭೇಟಿ ನೀಡುವರು. 3ಗಂಟೆಗೆ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವರು. 3.30 ಗಂಟೆಗೆ ಮುನವಳ್ಳಿಯ ಪಂಚನಗೌಡ ದ್ಯಾಮನಗೌಡ್ರ ಮನೆಗೆ ಭೇಟಿಯಾಗುವರು. 

4 ಗಂಟೆಗೆ ಬೆನಕಟ್ಟಿ ಗ್ರಾಮದ ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ದರ್ಶನ. ಸಾಯಂಕಾಲ 5 ಗಂಟೆಗೆ ಯರಗಟ್ಟಿಯ ಸ್ಥಳೀಯ ನಾಯಕ ಅಜೀತಕುಮಾರ ದೇಸಾಯಿಯವರ ಮನೆಗೆ ಭೇಟಿಮಾಡುವರು. 


ಸುದ್ದಿ ಓದಿ