ಶಿಗ್ಗಾವ್

ಮಾಜಿ ಸಿಎಂ ಸಿದ್ದರಾಮಯ್ಯ ಹಡಪದ ಸಮಾಜದ ಅಭಿವೃದ್ಧಿಗೆ ಪ್ರಯತ್ನಿಸಿದ್ದಾರೆ: ಷಣ್ಮೂಖಪ್ಪ

ಮಾಜಿ ಸಿಎಂ ಸಿದ್ದರಾಮಯ್ಯ ಹಡಪದ ಸಮಾಜದ ಅಭಿವೃದ್ಧಿಗೆ ಪ್ರಯತ್ನಿಸಿದ್ದಾರೆ: ಷಣ್ಮೂಖಪ್ಪ

ಶಿಗ್ಗಾವಿ 18: ಶರಣ ಹಡಪದ ಅಪ್ಪಣ್ಣನವರ ಜಯಂತಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಕಾರಿ ಜಯಂತಿಯೆಂದು ಘೋಷಣೆ ಮಾಡುವ ಮೂಲಕ ಹಿಂದುಳಿದ ಹಡಪದ (ಕ್ಷೌರಿಕ) ಸಮಾಜವನ್ನು ಮೇಲೆತ್ತುವ ಕಾರ್ಯ ಮಾಡಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಹಾಗೂ ಕಾಂಗ್ರೇಸ್ ಮುಖಂಡ ಷಣ್ಮೂಖಪ್ಪ ಶಿವಳ್ಳಿ ಹೇಳಿದರು.

ತಾಲೂಕಿನ ಕುನ್ನೂರ ಗ್ರಾಮದಲ್ಲಿ ಹಡಪದ (ಕ್ಷೌರಿಕ) ಅಪ್ಪಣ್ಣ ಸಮಾಜ ತಾಲೂಕಾ ಘಟಕ ಹಾಗೂ ಕುನ್ನೂರ ಗ್ರಾಮ ಘಟಕದ ಸಂಯುಕ್ತಾಶ್ರಯದಲ್ಲಿ ನೂತನವಾಗಿ ಹಡಪದ ಸಮಾಜದ ಮತ್ತು ಕುನ್ನೂರ ಗ್ರಾಮ ಪಂಚಾಯತನ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಯೊಂದು ಗ್ರಾಮಗಳಲ್ಲಿ ಎರಡು ಹಾಗೂ ಮೂರು ಮನೆಗಳನ್ನು ಹೊಂದಿ ಸ್ವ-ಉದ್ಯೋಗದಿಂದ ಪ್ರತಿನಿತ್ಯವೂ ಕ್ಷೌರಿಕ ಕಾಯಕವನ್ನು ಮಾಡುತ್ತಾ ಬಂದಿದ್ದು ಇದೊಂದು ಸ್ವಾಭಿಮಾನ ಸಮಾಜವಾಗಿದೆ ಎಂದರು.  

ಮುಖ್ಯ ಅತಿಥಿಗಳಾಗಿ ತಾ,ಪಂ ಸದಸ್ಯ ಮಲ್ಲಪ್ಪ ದೊಡ್ಡಮನಿ ಮಾತನಾಡಿ ಕ್ಷೇತ್ರದ ಶಾಸಕ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿವರು ಹಲವಾರು ಅಭಿವೃದ್ಧಿ ಕಾರ್ಯದಲ್ಲಿ ಹಡಪದ ಸಮಾಜದ ಈ ನೂತನ ಸಭಾಭವನ ತಲೆ ಎತ್ತಿ ನಿಂತಿದೆ ಎಂದರು. 

ಸಾನಿದ್ಯವನ್ನು ಸೋಮಯ್ಯನವರು ಹಿರೇಮಠ ವಹಿಸಿದ್ದರು, ಕುನ್ನೂರ ಗ್ರಾಪಂನ ಅಧ್ಯಕ್ಷ ಮಹೇಶ ರಾಜಶೇಖರಯ್ಯ ಚಿಕ್ಕವೀರಮಠ, ಉಪಾಧ್ಯಕ್ಷೆ ಹಸೀನಾಬೀ ಮಹಬೂಬಸಾಬ ಬಂಕಾಪೂರ, ಸದಸ್ಯ ಪಿ.ಎಫ್.ಪಾಟೀಲ, ಡಿ ಆರ್.ಬೋಮ್ಮನಹಳ್ಳಿ, ರಾಮಣ್ಣಾ ಇಂದೂರ, ಬಿ.ಡಿ.ಬ್ಯಾಹಟ್ಟಿ, ಶ್ರೀಕಾಂತವ್ವ ಮೋರಭದ, ಮಲ್ಲವ್ವ ಮಮದಾಪೂರ. ಮರೆವ್ವ ಬಸಪ್ಪ ಬಸರಿಕಟ್ಟಿ, ಲಕ್ಷ್ಮಣ್ಣ ಬೆಂಡಲಗಟ್ಟಿ, ಗಂಗವ್ವ  ಲಮಾಣಿ, ಮಹಾದೇವಿ ಬಡಿಗೇರ, ಮಂಜವ್ವ ಉಪ್ಪಾರ ಮೈಲಾರೆಪ್ಪ ಮಮದಾಪೂರ, ಈರವ್ವ ಹಡಪದ, ವೇದಾ ಮಾಲತೇಶ ಹಡಪದ, ಶೇಖವ್ವ ಹಡಪದ, ರುದ್ರಮ್ಮ ಹಡಪದ, ರೇಣುಕಾ ಬುದಿಹಾಳ, ಚಿಕ್ಕಪ್ಪ ಹಡಪದ, ಉಮಾ ಹಡಪದ, ಯಶೋಧಾ ಕ್ಷೌರದ, ಲಲಿತಾ ಕ್ಷೌರದ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಯುವ ಮುಖಂಡ ಶಿವರಾಜ ರಾಯಣ್ಣವರ, ಕಾಶಿನಾಥ ಕಳ್ಳಿಮನಿ, ತಾಲೂಕಾ ಹಡಪದ ಅಪ್ಪಣ್ಣಾ ಸಮಾಜದ ಅಧ್ಯಕ್ಷ ಬಸವರಾಜ ಹಡಪದ, ಹಡಪದ ಅಪ್ಪಣ್ಣಾ ಕೋ-ಆಪ್ ಕ್ರೀಡೆಟ್ ಸೋಸಾಯಿಟಿ ಅಧ್ಯಕ್ಷ ಮುತ್ತುರಾಜ ಕ್ಷೌರದ, ಮಹಾಲಿಂಗಪ್ಪ ಹಡಪದ, ಮಲ್ಲಿಕಾರ್ಜುನ ಹಡಪದ, ಶಿವರಾಜ ಕ್ಷೌರದ, ವೀರೇಶ ಹಡಪದ, ರುದ್ರಪ್ಪ ಹಡಪದ, ಗಂಗಪ್ಪ ಹಡಪದ ಸೇರಿದಂತೆ ಸಮಾಜದ ಮುಖಂಡರು, ಕುನ್ನೂರ ಗ್ರಾಮದ ಮುಖಂಡರು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿದ್ದರು.

ಸುದ್ದಿ ಓದಿ