ಯರಗಟ್ಟಿ

ಶಾಲಾ ಸಂಸತ್ ರಚನೆ: ಮಕ್ಕಳಿಗೆ ಚುನಾವಣೆ ಅರಿವು

ಶಾಲಾ ಸಂಸತ್ ರಚನೆ: ಮಕ್ಕಳಿಗೆ ಚುನಾವಣೆ ಅರಿವು

ಯರಗಟ್ಟಿ 11: ಪಟ್ಟಣದ ವಿಶ್ವಕರ್ಮ ಕನ್ನಡ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024/25 ನೇ ಸಾಲಿನ ಶಾಲಾ ಸಂಸತ್ ರಚನೆ ಮಾಡಲಾಯಿತು. 

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಮೂಲಕ ಜನಪ್ರತಿನಿಧಿ ಆಯ್ಕೆ ಮಾಡುವ ಪ್ರಕ್ರಿಯೆ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲಾಯಿತು, ಅಧಿಸೂಚನೆ ಪ್ರಕಟಣೆ, ನಾಮಪತ್ರ ಸಲ್ಲಿಕೆ, ಚಿನ್ಹೆ ನೀಡುವದು, ನಾಮ ಪತ್ರ ಹಿಂಪಡೆಯುವಿಕೆ, ಚುನಾವಣೆ ಪ್ರಚಾರ. ಮತದಾನ, ಫಲಿತಾಂಶ ಪ್ರಕಟಣೆ, ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆಗಳು ವ್ಯವಸ್ಥಿತವಾಗಿ ನಡೆದವು. 

ಒಟ್ಟು 8 ಸ್ಥಾನಗಳಿದ್ದ ಶಾಲಾ  ಸಂಸತ್ ನಲ್ಲಿ 11 ವಿದ್ಯಾರ್ಥಿ ಸ್ಪರ್ಧಾಳುಗಳು ಭಾಗವಹಿಸಿ ಚುನಾವಣಾ ಕಣದಲ್ಲಿ ಉಳಿದು ಚುನಾವಣೆಯ ಅನುಭವ ಪಡೆದು ಖುಷಿಪಟ್ಟರು, ಶಾಲೆಯ ಮುಖ್ಯ ಶಿಕ್ಷಕ ಆರ್ ಎಸ್ ಕಲ್ಲಣ್ಣವರ ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಮತದಾನ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳಾದ ಅರ​‍್ಿತಾ ದೊಡ್ಡಮನಿ, ಇಂದುಶ್ರೀ ಸುರಪುರ, ಶಿಫಾ ಹೆಬ್ಬಳ್ಳಿ, ಮುಂತಾದವರು ಚುನಾವಣಾ ಸಿಬ್ಬಂದಿಗಳಾಗಿ ಕಾರ್ಯ ನಿರ್ವಹಿಸಿದರು. 

ಶಿಕ್ಷಕ ಎಸ.್ ಪಿ. ತಳವಾರ ಹಾಗೂ ಸಹ ಶಿಕ್ಷಕರು ಆಧುನಿಕ ತಂತ್ರಜ್ಞಾನ ಬಳಸಿ ಇ ವಿ ಎಮ್ ಮೂಲಕ ಬ್ಯಾಲೆಟ್ ಯೂನಿಟ್, ಕಂಟ್ರೋಲ್ ಯೂನಿಟ್ ಬಳಸಲು  ಸುವ್ಯವಸ್ಥಿತ ಮತ್ತು ಸರಳ ಮತದಾನ ಪ್ರಕ್ರಿಯೆಗೆ ಅನುವು ಮಾಡಿ ಕೊಟ್ಟರು. ಸಂಸ್ಥೆಯ ಅಧ್ಯಕ್ಷ ಆನಂದ ವ ಸತ್ತಿಗೇರಿ ಮೊದಲು ಮತದಾನ ಮಾಡುವ ಮೂಲಕ ಮತದಾನ ಪ್ರಕ್ರಿಯೆಗೆ ಚಾಲನೆ ನೀಡಿದರು. 

ಶಾಲೆಯ ಎಲ್ಲ ವಿದ್ಯಾರ್ಥಿಗಳು ಕುತೂಹಲ ಹಾಗೂ ಹರ್ಷದಿಂದ ಮತದಾನ ಮಾಡಿ ಖುಷಿ ಪಟ್ಟರು. ಶಾಲೆಯ ಎಲ್ಲ ಶಿಕ್ಷಕ ಸಿಬ್ಬಂದಿಗಳು ಮತದಾನ ಮಾಡುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸುವದರೊಂದಿಗೆ ಇತರ ಪ್ರಕ್ರಿಯೆಗಳನ್ನು ನಡೆಸಿಕೊಟ್ಟರು. ಚುನಾಯಿತ ಪ್ರತಿನಿಧಿಗಳಾದ 7 ನೇ ವರ್ಗದ ಮಲಿಕರೇಹಾನ್ ಶಾಲಾ ಮುಖ್ಯ ಮಂತ್ರಿಯಾಗಿ ಮತ್ತು ಮಹಾಲಕ್ಷ್ಮೀ ಸರದಾರ ಉಪ ಮುಖ್ಯಮಂತ್ರಿಯಾಗಿ ಆಯ್ಕೆಯಾದರು, ಇನ್ನುಳಿದವರಿಗೆ ಬೇರೆ ಬೇರೆ ಖಾತೆಗಳನ್ನು ಹಂಚಿಕೆ ಮಾಡಿ ಮಂತ್ರಿ ಮಂಡಳ ರಚಿಸಿ ಪ್ರಮಾಣ ವಚನ ಭೋದಿಸಲಾಯಿತು. 

ಪ್ರಧಾನ ಗುರುಗಳಾದ ಆರ್ ಎಸ್ ಕಲ್ಲಣ್ಣವರ, ಸಂಸ್ಥೆಯ ನಿರ್ದೇಶಕ ಸಚಿನ ಬಡಿಗೇರ, ಪಿ ವಾಯ್ ಬಾಳೋಜಿ, ಪಿ ಕೆ ಗುಡ್ಡಾಕಾಯು, ಎಸ್ ಪಿ ತಳವಾರ, ಎಸ್ ಬಿ ಯರಗುದ್ರಿ, ಎ ವ್ಹಿ ವಿಭೂತಿ, ಬಿ ಎಸ್ ಗುಳ ಗಂದಿ. ಎಸ್ ಬಿ ಹಿರೇಮಠ, ವ್ಹಿ ಎಸ್ ವಿರಕ್ತಮಠ.ಎಸ್ ಎ ಕರ್ಜಗಿಮಠ. ರಾಧಾ ದಾಸರ ಮತ್ತು ಶಾನೂರ ಜಮಾದಾರ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ