ಕುಕನೂರ್

ಸಮುದಾಯ ಆಸ್ತಿಗಳ ಸಂರಕ್ಷಣೆಗೆ ಗ್ರಾಮ ಮಟ್ಟದಲ್ಲಿ ಸಮಿತಿ ರಚನೆ ಮಾಡಿ : ಶರಣಪ್ಪ ಕೆಳಗಿನಮನಿ

ಸಮುದಾಯ ಆಸ್ತಿಗಳ ಸಂರಕ್ಷಣೆಗೆ ಗ್ರಾಮ ಮಟ್ಟದಲ್ಲಿ ಸಮಿತಿ ರಚನೆ ಮಾಡಿ :  ಶರಣಪ್ಪ ಕೆಳಗಿನಮನಿ

ಕುಕನೂರ 20 : ಗ್ರಾಮ ಪಂಚಾಯತಿ ಸಮುದಾಯ ಆಸ್ತಿಗಳ ಸಂರಕ್ಷಣೆಗೆ ಗ್ರಾಮ ಮಟ್ಟದಲ್ಲಿ ಸಮಿತಿ ರಚನೆ ಮಾಡಿ ಸಹಾಯಕ ನಿರ್ದೇಶಕ ಶರಣಪ್ಪ ಕೆಳಗಿನಮನಿ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಅನುಷ್ಠಾನ ಮಾಡಿ ನೈಸರ್ಗಿಕ ಸಂಪನ್ಮೂಲ ಅಭಿವೃದ್ಧಿಪಡಿಸಿ ಕುಕನೂರ ತಾಲೂಕ ಪಂಚಾಯತ ಕಛೇರಿಯಲ್ಲಿ ಇಂದು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಳ್ಳುವ ಕಾಮಗಾರಿಗಳನ್ನು ಆಯಾ ಗ್ರಾಮಗಳ ಸಮುದಾಯಗಳಿಗೆ ಉಪಯೋಗವಾಗುವಂತೆ ನೋಡಿಕೊಳ್ಳಬೇಕು, ಅನುಷ್ಠಾನದ ಪ್ರತೀ ಹಂತದಲ್ಲಿ ಎಲ್ಲಾ ಅನುಷ್ಠಾನ ಇಲಾಖೆಗಳು ಸಮುದಾಯದವರನ್ನು  ಭಾಗವಹಿಸುವುಂತೆ ಪ್ರೇರೇಪಣೆ ಮಾಡುವುದರಿಂದ ಸೃಜನೆಯಾದ ಆಸ್ತಿಗಳು ಜಾಗೃತೆಯಿಂದ ನೋಡಿಕೊಳ್ಳುತ್ತಾರೆ, ಕಾಮಗಾರಿಗಳು ನಮ್ಮದೆಂಬ ಭಾವನೆ ಬೆಳೆದು ಕಾಮಗಾರಿಗಳ ಗುಣಮಟ್ಟವೂ ಅಧಿಕವಾಗುತ್ತದೆ. 

ಗ್ರಾಮ ಮಟ್ಟದಲ್ಲಿ  ಗ್ರಾಮ ಪಂಚಾಯತಿ ಸದಸ್ಯರು, ಆಡಳಿತಾಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ನರೇಗಾ ಅಭಿಯಂತರರು, ಶಾಲಾ ಮುಖ್ಯೋಪಾಧ್ಯಾಯರು/ವಿಜ್ಞಾನ ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸ್ವ ಸಹಾಯ ಸಂಘದ ಸದಸ್ಯರು, ಅನುಷ್ಠಾನ ಇಲಾಖೆ ಅಧಿಕಾರಿಗಳು ಸದಸ್ಯ ಕಾರ್ಯದರ್ಶಿಗಳಾಗಿ ಗ್ರಾಮ ಪಂಚಾಯತಿ ಕಾರ್ಯದರ್ಶಿಗಳು ಕಾರ್ಯ ನಿರ್ವಹಣೆ ಜವಬ್ದಾರಿ ಇರುತ್ತದೆ, ಅದರಂತೆ ಗ್ರಾಮ ಪರಿಸರ ಅಭಿವೃದ್ಧಿ ಸಮಿತಿ ಮಾಡುವುದರಿಂದ ಮುಂದಿನ ದಿನಗಳಲ್ಲಿ ಸಮುದಾಯ ಆಸ್ತಿಗಳ ನಿರ್ವಹಣೆ ಸಮರ​‍್ಕ ನಿರ್ವಹಣೆ ಆಗುತ್ತವೆ ಎಂದರು. ನಂತರ ಈ ಸಂಸ್ಥೆಯ ಅಧಿಕಾರಿಗಳಾದ ವಾಸುದೇವ್ ಮೂರ್ತಿ ರವರು ಗ್ರಾಮ ಪರಿಸರಾಭಿವೃದ್ಧಿ ಕಾರ್ಯ ನಿರ್ವಹಣೆಯ ಜವಬ್ದಾರಿ ಹಾಗೂ ಸಭೆಗಳನ್ನು ಯಾವ ರೀತಿ ಮಾಡಬೇಕು ಎಂದು ತಿಳಿಸಿದರು. ಸ್ಥಳದಲ್ಲಿ ಮಾನ್ಯ ಯೋಜನಾ ನಿರ್ದೇಶಕರಾದ ಆನಂದ ಗರೂರ, ಎಲ್ಲಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ತಾಲೂಕ ಐ.ಇ.ಸಿ ಸಂಯೋಜಕರು, ನರೇಗಾ ಅಡ್ಮಿನ್ ರವರು ಭಾಗವಹಿಸಿದ್ದರು. 


ಸುದ್ದಿ ಓದಿ