ಶಿಗ್ಗಾವ್

ಬಿಸಿಯೂಟ ನೌಕರರ ಸಂಬಳ ಹೆಚ್ಚಳಕ್ಕೆ ಒತ್ತಾಯ

ಬಿಸಿಯೂಟ ನೌಕರರ ಸಂಬಳ ಹೆಚ್ಚಳಕ್ಕೆ ಒತ್ತಾಯ

ಶಿಗ್ಗಾವಿ : ಮೂರು ಲಕ್ಷ ಕೋಟಿಗೂ ಹೆಚ್ಚು ಶ್ರೀಮಂತರ ತೆರಿಗೆ ಮನ್ನಾ ಮಾಡುವ ಸರಕಾರಗಳು ಬಿಸಿಯೂಟ ನೌಕರರ ಸಂಬಳ ಹೆಚ್ಚಿಸುವ ಕಾರ್ಯ ಏಕೆ ಮಾಡುತ್ತಿಲ್ಲ? ಎಂದು ರಾಜ್ಯ ಎಐಸಿಟಿಯುನ ರಾಜ್ಯಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಉಚಿತವಾಗಿ ಗ್ಯಾಸ ವಿತರಣೆ ಮಾಡಿದ ಕೇಂದ್ರ ಸರಕಾರ ಈಗ ಸಿಲಿಂಡರ್ ಬೆಲೆಯನ್ನು ಗಗನಕ್ಕೆ ಏರಿಸಿ, ಇತ್ತ ಉಚಿತ ಸಿಲಿಂಡರ್ ನೀಡಿ ಪ್ರತಿ ತಿಂಗಳೂ ನಮ್ಮ ತಾಯಂದಿರು ಸಿಲಿಂಡರ್‍ಗೆ ಸಾವಿರ ರೂಪಾಯಿ ತೆರಬೇಕಾಗಿದೆ ಎಂದರು.ಸರಕಾರ ಎಲ್ಲದ್ದಕ್ಕೂ ಕೋಟಿ ಕೋಟಿ ಖರ್ಚು ಮಾಡುತ್ತಿದೆ ಆದರೆ ಈ ಅಂಗನವಾಡಿ ಮತ್ತು ಬಿಸಿಯೂಟ ತಯಾರಕರ ಬಗ್ಗೆ ಮಾತ್ರ ಸ್ಪಂದಿಸದೇ ಇರುವುದು ವಿಷಾದಕರ. ಆದ್ದರಿಂದ ಶೀಘ್ರದಲ್ಲಿಯೇ ರಾಜ್ಯಾದ್ಯಂತ ಹೋರಾಟ ಅನಿವಾರ್ಯವಾಗಿದೆ ಎಂದರು.ಬಿಸಿಯೂಟ ನೌಕರರಿಗೆ ಮಾಸಿಕ ವೇತನ 750 ರೂ ನೀಡುತ್ತಿದ್ದುದನ್ನು  ಕೇಂದ್ರ ಸರಕಾರ  ಕಡಿತಗೊಳಿಸಿ 600 ರೂ ನೀಡುತ್ತಿದ್ದಾರೆ,   ಪ್ರತಿ ಹೋರಾಟ ಮಾಡಿದ್ದಾಗಲೂ ಸಹಿತ ಕನಿಷ್ಟ 100, 200 ಮತ್ತು 300 ರೂಪಾಯಿಯಂತೆ ಸಂಬಳವನ್ನು ಹೆಚ್ಚಿಸುತ್ತಿದ್ದಾರೆ. ಅವರಿಗೂ ಸಂಬಳ ಹೆಚ್ಚಿಸುವುದಾಗಲಿ ಎಂದರು.ಅಶೋಕ ಕಾಳೆ, ವೆಂಕಮ್ಮ ಬಂಡಿವಡ್ಡರ, ನಿರ್ಮಲಾ ಎಸ್ ಪಾಟೀಲ, ಶೋಭಾ ಬಸನಾಳ, ಸುಮಂಗಲಾ ಬಡಿಗೇರ, ರೇಖಾ ಸಿ ಪಾಟೀಲ, ನಿರ್ಮಲಾ ಚ ಪಾಟೀಲ, ರೇಣಮ್ಮಾ ಕಾಳೆ, ಭಾರತಿ ಚಲವಾದಿ, ರತ್ನವ್ವಾ ಈಟಿ, ಸರೋಜಾ ಅತ್ತೀಗೇರಿ, ಸರಸ್ವತಿ ನೇಕಾರ, ಮೌಲಾಲಿ ಶೇಖಲ್ಲಿ, ರಮೆಶ ಈಟಿ ಸೇರಿದಂತೆ ಇತರರು ಇದ್ದರು.



ಸುದ್ದಿ ಓದಿ