ಚಿಕ್ಕೋಡಿ

ಅಲೆಮಾರಿ ಚನ್ನದಾಸರ ಸಮುದಾಯಕ್ಕೆ ಟಿಕೇಟ್ ನೀಡಲು ಒತ್ತಾಯ

ಅಲೆಮಾರಿ ಚನ್ನದಾಸರ ಸಮುದಾಯಕ್ಕೆ ಟಿಕೇಟ್ ನೀಡಲು ಒತ್ತಾಯ

ಚಿಕ್ಕೋಡಿ 27: ಬೆಳಗಾವಿ ಜಿಲ್ಲೆಯ ಕುಡಚಿ ಮತಕ್ಷೇತ್ರಕ್ಕೆ ವಿಶ್ವನಾಥ್ ರಾಮಚಂದ್ರ ಗಾಣಿಗೇರ್ ರವರಿಗೆ ಕಾಂಗ್ರೆಸ್ ಪಕ್ಷದಿಂದ 2022-23 ನೇ ಸಾಲಿನ ವಿಧಾನಸಭೆ ಚುನಾವಣೆ ಶಾಸಕರ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿರುವುದರಿಂದ ಅಲೆಮಾರಿ ಚನ್ನದಾಸರ ಸಮುದಾಯ ಇವರಿಗೆ ಬಿ.ಫಾರ್ಮ್‌ ನೀಡಬೇಕೆಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ-ಚನ್ನದಾಸರ-ಹೊಲಿಯದಾಸರ್‌- ಮಾಲದಾಸರ್ ಜನ ಸೇವಾ ಸಮಿತಿ ರಾಜ್ಯಾಧ್ಯಕ್ಷ ಬಸವರಾಜ ನಾರಾಯಣರ ಒತ್ತಾಯಿಸಿದರು. ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಅವರಿಗೆ ಮನವಿ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.  

ಬೆಳಗಾವಿ ಜಿಲ್ಲೆಯ ಕುಡಚಿ ಮತಕ್ಷೇತ್ರಕ್ಕೆ ವಿಶ್ವನಾಥ್ ರಾಮಚಂದ್ರ ಗಾಣಗೇರ ಅವರು ಕಾಂಗ್ರೆಸ್ ಪಕ್ಷದಿಂದ 2022-23ನೇ ಸಾಲಿನ ವಿಧಾನಸಭೆ ಚುನಾವಣೆ ಶಾಸಕರ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿರುವುದರಿಂದ ಅಲೆಮಾರಿ ಚನ್ನದಾಸರ ಸಮುದಾಯ ಇವರು ಸುಮಾರು ವರ್ಷ ಪಕ್ಷಕ್ಕೆ ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ದುಡಿದಿದ್ದು, ಕುಡಚಿ ಮತಕ್ಷೇತ್ರದಲ್ಲಿ , ಕಾಂಗ್ರೆಸ್ ಪಕ್ಷದ 17,000 ಸದಸ್ಯರ ನೋಂದಣಿ ಮಾಡಿಸಿ ಕರ್ನಾಟದಲ್ಲಿ ಪ್ರಥಮಸ್ಥಾನ ಹೊಂದಿರುತ್ತಾರೆ.  

ಇದರಂತೆ ಸಾರ್ವಜನಿಕವಾಗಿ ಬಹಳ ಸೇವೆ ಮಾಡಿಕೊಂಡು ಕ್ಷೇತ್ರದ ಪ್ರತಿ ಮನೆಮನೆಯಲ್ಲೂ ವಿಶ್ವನಾಥ್ ಗಾಣಿಗೇರ ಜನರ ಮನಸ್ಸಿನಲ್ಲಿ ಇದ್ದಾರೆ. ಆದ್ದರಿಂದ ಈ ಅಲೆಮಾರಿ ಚೆನ್ನದಾಸರು ಸಮುದಾಯಕ್ಕೆ ಸೇರಿದ ಇವರ ಜನಸಂಖ್ಯೆ ಸುಮಾರು 18 ರಿಂದ 20 ಸಾವಿರ ಇದ್ದು, ಇದೇ ರೀತಿ ಅಲೆಮಾರಿಗಳ ಇನ್ನುಳಿದ ಸಮುದಾಯಗಳ 15 ರಿಂದ 18 ಸಾವಿರ ಇದ್ದು, ಸರ್ವಸಮುದಾಯಗಳು ಸಹ ಇವರ ಪರವಾಗಿ ನಿಂತಿದ್ದು ಮತ್ತು ಇವರು ಅಲೆಮಾರಿಗಳಾಗಿರುವುದರಿಂದ ಇವರ ಬೆನ್ನಿಗೆ ಅಲೆಮಾರಿಗಳು ಸಹ ಬೆಂಬಲ ವ್ಯಕ್ತಪಡಿಸಿದ್ದು, ಆದ್ದರಿಂದ ತಾವುಗಳು ಕ್ಷೇತ್ರದ ಎಲ್ಲಾ ಅಲೆಮಾರಿ ಮತ್ತು ಕುಡಚಿ ಮತಕ್ಷೇತ್ರದ ಜನಬೆಂಬಲ ಇರುವುದರಿಂದ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬೇಕೆಂದು ಮನವಿ ಮಾಡಿದರು. 


ಸುದ್ದಿ ಓದಿ