ಸಿಐಡಿ ತನಿಖೆಗೆ ವಹಿಸಲು ಒತ್ತಾಯ: ಸಂ,ಸಂಚಾಲಕ ಮುತ್ತಣ್ಣ ಮೇತ್ರಿ
ಜಮಖಂಡಿ,08: ಯಾದಗಿರಿ ಪಿಎಸ್ಐ ಪರಶುರಾಮ್ ಚಲವಾದಿ ಅವರ ಸಾವು ನಿಗೂಢವಾಗಿದ್ದು. ಸಾವಿನ ತನಿಖೆಯನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಲು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂ,ಸಂಚಾಲಕ ಮುತ್ತಣ್ಣ ಮೇತ್ರಿ ಒತ್ತಾಯಿಸಿದ್ದಾರೆ.
ಸ್ಥಳೀಯ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಸುಪುತ್ರ ಪಂಪನಗೌಡ ಪಾಟೀಲ್ ಎಂಬುವರು ಹಣಕ್ಕೆ ಕಿರುಕುಳ ನೀಡಿ ಜಾತಿನಿಂದನೆ ಮಾಡಿದ್ದಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು. ಕೂಡಲೇ ತಲೆಮರೆಸಿಕೊಂಡ ಶಾಸಕ ಚೆನ್ನಾರಡ್ಡಿ ಹಾಗೂ ಅವರ ಮಗ ಪಂಪನಗೌಡರನ್ನು ಕೂಡಲೇ ಬಂಧಿಸಿ ಕಾನೂನಿನ ಪ್ರಕಾರ ಉಗ್ರ ಶಿಕ್ಷೆ ನೀಡಬೇಕು. ಯಾದಗಿರಿ ನಗರ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿ ಇನ್ನೂ ಒಂದು ವರ್ಷ ಕೂಡ ಕಳೆದಿಲ್ಲ. ಅಷ್ಟರಲ್ಲಿ ವರ್ಗಾವಣೆ ಮಾಡಿರುವುದು ಪ್ರಭಾವಿ ನಾಯಕರು ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ ಅದಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು. ಪಿಎಸ್ಐ ಪರಶುರಾಮ್ ಚಲವಾದಿ ಸಾವಿನ ಪ್ರಕರಣದ ಬಗ್ಗೆ ಕುಲಂಕುಶವಾಗಿ ತನಿಖೆ ನಡೆಸಬೇಕು ಎಂದರು.
ಸರ್ಕಾರ ರಾಜಕೀಯ ಪ್ರಭಾವಕ್ಕೆ ಮನಿಯದೆ ಕೊಲೆ ಪ್ರಕರಣ ಹಾಗೂ ಜಾತಿನಿಂದನಡಿ ಪ್ರಕರಣ ದಾಖಲೆ ಮಾಡಿಕೊಂಡು ದೂರು ದಾಖಲಾದ ಶಾಸಕ ಚೆನ್ನಾರೆಡ್ಡಿ ಹಾಗೂ ಅವರ ಸುಪುತ್ರ ಪಂಪನಗೌಡರನ್ನು ಬಂಧಿಸಿ ಉಗ್ರವಾದ ಶಿಕ್ಷೆ ನೀಡಬೇಕು ಶಾಸಕ ಚೆನ್ನಾರೆಡ್ಡಿ ಅವರು ಶಾಸಕಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಸರ್ಕಾರ ಇವರನ್ನು ಬಂಧಿಸುವಲ್ಲಿ ವಿಳಂಬ ಮಾಡಿದರೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ರಾಜ್ಯದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಜಿಲ್ಲಾ ಸಂ,ಸಂಚಾಲಕ ಮುತ್ತಣ್ಣ ಮೇತ್ರಿ, ಹನುಮಂತ ಚಿಮ್ಮಲಗಿ, ಆನಂದ ದೊಡಮನಿ, ಸಂಗಣ್ಣ ಮಡ್ಡಿ, ಕೃಷ್ಣಮೂರ್ತಿ ನಾಯ್ಕರ, ಲಕ್ಷ್ಮಣ ಹರಿಜನ, ಮಾರುತಿ ಮರೆಗುದ್ದಿ ಪ್ರಕಟಣೆ ಮೂಲಕ ಸರ್ಕಾರವನ್ನು ಆಗ್ರಹಿಸಿದ್ದಾರೆ.