ಇಂದಿನಿಂದ ಪುಟ್ಬಾಲ್ ಟೂರ್ನಾಮೆಂಟ್: ಡಾ. ಪ್ರವೀಣ
ರಾಣಿಬೆನ್ನೂರ 22: ಮೊದಲ ಬಾರಿಗೆ ಖನ್ನೂರ ಕಫ್-2021 ರಾಜ್ಯ ಮಟ್ಟದ ಪುಟ್ಬಾಲ್ ಟೂರ್ನಾಮೆಂಟ್ ಆಯೋಜಿಸಲಾಗಿದೆ ಎಂದು ಮ್ಯಾನೆಜಿಂಗ್ ಡೈರೆಕ್ಟರ್ ಡಾ.ಪ್ರವೀಣ ಖನ್ನೂರ ಹೇಳಿದರು.
ಖನ್ನೂರು ಸ್ಪೋಟ್ಸ್ ಅಕಾಡೆಮಿ ಭವನದಲ್ಲಿ ಗುರುವಾರ ರಾತ್ರಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ಜ.23 ಮತ್ತು 24 ರಂದು 2 ದಿವಸಗಳ ಕಾಲ ಹುಣಸಿಕಟ್ಟಿ ರಸ್ತೆಯ ಖನ್ನೂರ ಸಮೂಹ ಶಾಲೆಗಳ ಕ್ರೀಡಾಂಗಣದಲ್ಲಿ ನಡೆಯಲಿದೆ. ಶನಿವಾರ ಮುಂಜಾನೆ 1 ಗಂಟೆಗೆ ಸಾಂಕೇತಿಕವಾಗಿ ಕೆಎಸ್ಎಫ್ಐ ದ ಮುಖ್ಯಸ್ಥ ರಂಜೀತ್ ಅವರು ಉದ್ಘಾಟಿಸಿ ಚಾಲನೆ ನೀಡುವರು ಎಂದರು.
ಪುರುಷರ ಬಾಲಕರ ಮತ್ತು ಬಾಲಕೀಯರ ಸೇರಿದಂತೆ ಒಟ್ಟು 52 ತಂಡಗಳು ಭಾಗವಹಿಸಲಿವೆ. ನಾಡಿನ ಧಾರವಾಡ, ಹುಬ್ಬಳ್ಳಿ, ಭಾಗಲಕೋಟೆ, ವಿಜಾಪುರ, ರಾಯಚೂರು, ಗುಲ್ವರ್ಗ, ಕಾರವಾರ, ಉತ್ತರ ಕನ್ನಡ, ಉಡುಪಿ, ಮಂಗಳೂರು, ಬೆಂಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ, ದಾವಣಗೇರಿ, ಚಿತ್ರದುರ್ಗ, ತುಮಕೂರು, ಹಾವೇರಿ ಸೇರಿದಂತೆ ಮತ್ತಿತರೆ ಜಿಲ್ಲೆ ಮತ್ತು ತಾಲೂಕುಗಳಿಂದ ತಂಡಗಳು ಭಾಗವಹಿಸಲಿವೆ.
ಕ್ರೀಡಾಪಟುಗಳಿಗೆ ಊಟ, ಉಪಹಾರ, ವಸತಿಯ ಜೊತೆಗೆ ಸ್ತ್ರೀ ಪುರುಷರಿಗೆ ಪ್ರತ್ಯೇಕವಾಗಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಕ್ರೀಡಾಂಗಣದಲ್ಲಿ ಏಕಕಾಲಕ್ಕೆ ಮೂರು ತಂಡಗಳು ಆಟವಾಡುವರು. 24ರಂದು ಸಮಾರೋಪ ಸಮಾರೋಪ ನಡೆಯಲಿದೆ. ಸ್ಪರ್ಧಾ ವಿಜೇತರಿಗೆ ಬಹುಮಾನ ಹಾಗೂ ಆಕರ್ಷಕ ಪಾರಿತೋಷಕ ಟ್ರೋಫಿ ವಿತರಿಸಿ ಗೌರವಿಸಲಾಗುವುದು ಎಂದರು.
ಮಾಧ್ಯಮಗೋಷ್ಠಿಯಲ್ಲಿ ಖನ್ನೂರ ಸೊಸೈಟಿ ಸಂಸ್ಥಾಪಕ ಅಧ್ಯಕ್ಷ ಪ್ರೊ. ಮಹಾದೇವಪ್ಪ ಖನ್ನೂರ, ಸಂಸ್ಥೆಯ ಅಧ್ಯಕ್ಷ ಡಾ. ಶೈಲಶ್ರೀ ಪಿ ಖನ್ನೂರ, ಕಾರ್ಯದರ್ಶಿ ಅನುರಾಗ ಪಿ ಖನ್ನೂರ ಸೇರಿದಂತೆ ಸಂಸ್ಥೆಯ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.