ಆಹಾರ ಭದ್ರತೆ ದೇಶದ ರೈತರಿಂದ ಮಾತ್ರ ಸಾಧ್ಯ : ಲೋಕೇಶ
ಲೋಕದರ್ಶನ ವರದಿ
ಹೂವಿನಹಡಗಲಿ 06: ಆಹಾರ ಭದ್ರತೆ ಈ ದೇಶದ ರೈತರಿಂದ ಮಾತ್ರ ಸಾಧ್ಯ.ವಿಶ್ವದಲ್ಲೇ ಭಾರತವು ಸ್ವಾವಲಂಬಿದೇಶವಾಗಲು ರೈತರು ಶ್ರಮಿಸುತ್ತಿದ್ದಾರೆ ಎಂದು ಎಐಕೆಎಸ್ ರಾಜ್ಯ ಉಸ್ತುವಾರಿ ಪಿ.ವಿ.ಲೋಕೇಶ ಹೇಳಿದರು.
ಪಟ್ಟಣದ ಗವಿಸಿದ್ದೇಶ್ವರ ಮಠದಲ್ಲಿ ಸೋಮವಾರ ಅಖಿಲ ಭಾರತ ಕಿಸಾನ್ ಸಭಾ ತಾಲೂಕು ಘಟಕ ಆಯೋಜಿಸಿದ್ದ 2ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ರೈತರು ಉತ್ಪಾದಿಸಿರುವ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗುತ್ತಿಲ್ಲ ಜತೆಗೆ ಕೃಷಿ ಭೂಮಿಗಳು ಬಹುರಾಷ್ಟ್ರೀಯ ಕಂಪನಿಗಳು ಒಪ್ಪಿಸಲಾಗಿದ್ದು, ಇದೀಗ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಎಐಕೆಎಸ್ ರಾಜ್ಯ ಉಪಾಧ್ಯಕ್ಷ ಹೊಸಳ್ಳಿ ಮಲ್ಲೇಶ ಬಿಜೆಪಿ ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳನ್ನು ಆಹ್ವಾನಿಸಿರುವ ಹಿನ್ನೆಲೆಯಲ್ಲಿ ಕಾರ್ೋರೇಟ್ ಕಂಪನಿಗಳಲ್ಲಿ ರೈತರು ಕೃಷಿ ಕೂಲಿ ಕಾರ್ಮಿಕರಾಗಿ ದುಡಿವಂತಹ ಅನಿವಾರ್ಯತೆ ಇದೆ ಎಂದು ವಿಷಾಧ ವ್ಯಕ್ತಪಡಿಸಿದ ಅವರು ಎ.ಟಿ.ರಾಮಸ್ವಾಮಿ ಆಯೋಗ ವರದಿ ಸಲ್ಲಿಸಿರುವ ರಾಜ್ಯದಲ್ಲಿ 10ಲಕ್ಷ ಎಕರೆ ಭೂಮಿಯಲ್ಲಿ ಬೆಂಗಳೂರಿನಲ್ಲಿ 40ಸಾವಿರ ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿದೆ ಎಂದು ಎ.ಟಿ.ರಾಮಸ್ವಾಮಿ ಆಯೋಗ ವರದಿ ಸಲ್ಲಿಸಿದೆ ಎಂದರು.
ಎಐಕೆಎಸ್ ವಿಜಯನಗರ ಜಿಲ್ಲೆಯ ಉಸ್ತುವಾರಿ ಆದಿಮೂರ್ತಿ, ಜಿಲ್ಲಾ ಸಂಚಾಲಕ ಗುಡಿಹಳ್ಳಿ ಹಾಲೇಶ ಮಾತನಾಡಿದರು. ರಾಜ್ಯ ಸಮಿತಿ ಸದಸ್ಯ ಎಚ್.ವೀರಣ್ಣ, ತಾಲೂಕು ಸಂಚಾಲಕ ಸುರೇಶ ಹಲಗಿ,ಶಾಂತರಾಜ್ ಜೈನ್ ಇದ್ದರು.