ಶಿಗ್ಗಾವ್

ಜಾವೀದ ಜನ ಸೇವಾ ಟ್ರಸ್ಟ್‌ ವತಿಯಿಂದ ಉಪಹಾರ, ನೀರಿನ ಬಾಟಲ್ ವಿತರಣೆ

ಜಾವೀದ ಜನ ಸೇವಾ ಟ್ರಸ್ಟ್‌ ವತಿಯಿಂದ ಉಪಹಾರ, ನೀರಿನ ಬಾಟಲ್ ವಿತರಣೆ

ಶಿಗ್ಗಾವಿ 04: ಕಠಿಣ ಕರ್ಫ್ಯೂ ಹಿನ್ನಲೆಯಲ್ಲಿ ಅಲೆಮಾರಿ ಜನಾಂಗ ಸೇರಿದಂತೆ ಕಾರ್ಮಿಕರಿಗೆ ಜಾವೀದ ಜನ ಸೇವಾ ಟ್ರಸ್ಟ್‌ ನಿತ್ಯೆ ಉಪಹಾರ ಮತ್ತು ಕುಡಿಯವ ನೀರಿನ ಬಾಟಲ್ ವಿತರಿಸುತ್ತಿದೆ. ಕಳೆದ ಒಂದು ವಾರದಿಂದ ಕೋವಿಡ್ ರೋಗಿಗಳು ಸೇರಿದಂತೆ ಕೃಷಿ ಕಾರ್ಮಿಕರಿಗೆ ಉಪಹಾರ ವಿತರಿಸುತ್ತಿರುವ ಟ್ರಸ್ಟ್‌, ಕಠಿಣ ಕರ್ಫ್ಯೂ  ಮುಗಿಯವರೆಗೂ ವಿತರಿಸುತ್ತದೆ ಎಂದು ಟ್ರಸ್ಟ್‌ ಅಧ್ಯಕ್ಷರು, ಕಾಂಗ್ರೆಸ್ ಮುಖಂಡ ಎಂ.ಜಾವೀದ, ಕೋವಿಡ್ ಅಬ್ಬರ ಹೆಚ್ಚಿದ್ದರೂ ಆಡಳಿತ ಸರಕಾರಗಳು ಜನ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹಣ ಇಲ್ಲದ ಬಡ ಕೋವಿಡ್ ಸೋಂಕಿತರಿಗೆ ಖಾಸಗಿ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆಯೂ ಸಿಗುತ್ತಿಲ್ಲ. ಸರಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸೌಲಭ್ಯ ಇಲ್ಲ. ಹೀಗಾಗಿ ಹೆಚ್ಚು ಜನರು ಕೋವಿಡ್‌ನಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸರಕಾರ ಮಾತ್ರ ಎಲ್ಲ ಸೌಲಭ್ಯ ಕಲ್ಪಿಸಿದ್ದಾಗಿ ಸುಳ್ಳು ಹೇಳಿ ಸಾವಿನ ಸಂಖ್ಯೆ ಮುಚ್ಚಿಡುತ್ತಿದೆ ಎಂದು ಜಾವೀದ ದೂರಿದ್ದಾರೆ. ಶಿಗ್ಗಾವಿ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸೌಲಭ್ಯ ಕಲ್ಪಿಸುವಂತೆ ಸರಕಾರವನ್ನು ಆಗ್ರಹಿಸಿದ ಜಾವೀದ, ಟ್ರಸ್ಟ್‌ ವತಿಯಿಂದ ಬರುವ ದಿನದಲ್ಲಿ ಬಡವರಿಗೆ ನೆರುವಾಗುವ ಯೋಜನೆಗಳನ್ನು ಕಾರ್ಯಗತಗೊಳಿಸಲು ನಿರ್ಣಯಿಸಿದ್ದೇವೆ. ಸೋಂಕಿತರು ಅಧೈರ್ಯರಾಗಬೇಡಿ ಎಂದು ಮನವಿ ಮಾಡಿದ್ದಾರೆ. 


ಸುದ್ದಿ ಓದಿ