ಇಂಡಿ

ಉರ್ದು ಶಾಲಾ ಮಕ್ಕಳಿಗೆ ಆಹಾರ ಧಾನ್ಯ ವಿತರಣೆ

ಉರ್ದು ಶಾಲಾ ಮಕ್ಕಳಿಗೆ ಆಹಾರ ಧಾನ್ಯ ವಿತರಣೆ

ಇಂಡಿ 05: ತಾಲೂಕಿನ ಹಿರೇರೂಗಿ ಗ್ರಾಮದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ದಾಸೋಹದ 55 ದಿನಗಳ ಆಹಾರ ಧಾನ್ಯಗಳಾದ ಪೌಷ್ಟಿಕಾಂಶಯುಕ್ತ ಅಕ್ಕಿ, ಗೋಧಿ, ತೊಗರಿ ಬೇಳೆಯನ್ನು ಎಲ್ಲ ಮಕ್ಕಳಿಗೆ ಶಾಲಾ ಮುಖ್ಯ ಶಿಕ್ಷಕ ಎ ಎಂ ಬೆದ್ರೇಕರ ಹಾಗೂ ಎಸ್ ಡಿ ಎಂ ಸಿ ಪದಾಧಿಕಾರಿಗಳ ನೇತೃತ್ವದಲ್ಲಿ ವಿತರಿಸಲಾಯಿತು. ವಿತರಣೆ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ಎಸ್ ಎಸ್ ಅರಬ, ಬಸವರಾಜ ಕರಜಗಿ, ಸಂತೋಷ ಬಂಡೆ,ಎಸ್ ಎಚ್ ಮೈದರಗಿ, ಎನ್ ಬಿ ಚೌಧರಿ,ಎಸ್ ಬಿ ಹೆಬ್ಬಾಳ ಹಾಗೂ ಎಸ್ ಡಿ ಎಂ ಸಿ ಸದಸ್ಯ ಮಕ್ತುಮಸಾಬ ಜಾತಗಾರ, ಖಾತುನಬಿ ಬಳಮ, ಶಮಶಾದ ಬಾಗವಾನ, ಅಲ್ಲಾಮಾ ಬಾಗವಾನ, ಬೇಗಂ ಮುಲ್ಲಾ, ನರಸಮ್ಮ ದಳವಾಯಿ ಮುಂತಾದವರು ಉಪಸ್ಥಿತರಿದ್ದರು.

ಸುದ್ದಿ ಓದಿ