ಕನರ್ಾಟಕ ಪರಿಷತ್ನಿಂದ ಸಂಭ್ರಮದ ಜಾನಪದ ಕಲರವ

ಕನರ್ಾಟಕ ಪರಿಷತ್ನಿಂದ ಸಂಭ್ರಮದ ಜಾನಪದ ಕಲರವ

ಬಳ್ಳಾರಿ 03: ಕನರ್ಾಟಕ ಜಾನಪದ ಪರಿಷತ್ತು ತಾಲ್ಲೂಕು ಘಟಕ ಹೂವಿನಹಡಗಲಿ ಮತ್ತು ಜಿಲ್ಲಾ ಘಟಕ, ಬಳ್ಳಾರಿ ಇವರು ಸಂಯುಕ್ತವಾಗಿ ಹಡಗಲಿಯ ಜಿ.ಪಿ.ಜಿ. ಪದವಿಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡ ಜಾನಪದ ಕಲರವ, ನೂತನ ತಾಲ್ಲೂಕು ಘಟಕದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಕೆ.ಶಾರದಮ್ಮ ನವರು ಸಮಾಳ ಬಾರಿಸಿ ಉದ್ಘಾಟಿಸಿದರು. ಮುಂದುವರೆದು ಮಾತನಾಡುತ್ತ ಹಡಗಲಿಯಲ್ಲಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಕ್ಕೆ ತಾಲ್ಲೂಕು ಮತ್ತು ಜಿಲ್ಲಾಧ್ಯಕ್ಷರನ್ನು ಅಭಿನಂದಿಸಿದರು. ನಮ್ಮ ಗ್ರಾಮೀಣ ಭಾಗದ ಸೊಗಡನ್ನು ಪ್ರತಿಧ್ವನಿಸುವ ಕಾರ್ಯಕ್ರಮವೆಂದು ಶ್ಲಾಘಿಸಿದರು. ನಂತರ ಕ.ಜಾ.ಪ. ಜಿಲ್ಲಾಧ್ಯಕ್ಷರಾದ ಟಿ.ಹೆಚ್.ಎಂ.ಬಸವರಾಜ ರವರು ತಾಲ್ಲೂಕು ಘಟಕದ ಪದಾಧಿಕಾರಿಗಳಿಗೆ ಪದಗ್ರಹಣ ಮಾಡಿಸಿ, ಇನ್ನೂ ಮುಂದೆ ತಾಲ್ಲೂಕು ಜಾನಪದ ರಥವನ್ನು ಎಳೆಯಲು ಪದಾಧಿಕಾರಿಗಳನ್ನು ಉರಿದುಂಬಿಸಿ, ಸನ್ಮಾನಿಸಿ, ಗೌರವಿಸಿದರು. ತಾಲ್ಲೂಕು ಘಟಕದ ಅಧ್ಯಕ್ಷರಾದ ಎಲ್.ಖಾದರ್ಬಾಷ ರವರು ಪ್ರಾಸ್ತಾವಿಕ ನುಡಿಗಳನ್ನು ಆಡುತ್ತಾ ಮುಂದೆ ಹಮ್ಮಿಕೊಳ್ಳಬಹುದಾದ ಎಲ್ಲಾ ಕಾರ್ಯಕ್ರಮದ ವಿವರಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಜಾನಪದ ವಿ.ವಿ. ಗೊಟಗೋಡಿ ಪ್ರಾಧ್ಯಾಪಕರಾದ ಚಂದ್ರಪ್ಪ ಸೊಪಟಿಯವರು ಡಾ|| ಅಂಜನಾ ಕೃಷ್ಣಪ್ಪ ಮಹಿಳಾ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷರು ಬರೆದ ತವರು ಬಣ್ಣ ಉಟ್ಟುಕೊಂಡು ಎಂಬ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಕೃತಿ ಪರಿಚಯವನ್ನು ಪ್ರೋ|| ಶಾಂತಮೂತರ್ಿ ಡಿ.ಕುಲಕಣರ್ಿ ಮಾಡಿದರು. ಸಕರ್ಾರಿ ಪ್ರೌಢಶಾಲೆ, ಬ್ಯಾಲಹುಣಸಿ, ಸಕರ್ಾರಿ ಪ್ರಾಥಮಿಕ ಶಾಲೆ, ಹಿರೇಕೊಳಚಿ ವಿದ್ಯಾಥರ್ಿಗಳಿಂದ ಜಾನಪದ ನೃತ್ಯ, ಕಾವ್ಯ ಬಡಿಗೇರ ತಂಡದಿಂದ ಕೋಲಾಟ, ಹೆಚ್.ಎಸ್.ರಾಜೇಶ್ವರಿ ತಂಡ ಮತ್ತು ಸ.ಮಾ.ಹಿ.ಬಾ.ಪ್ರಾ.ಶಾಲೆ, ಹೊಳಲು ಇವರಿಂದ ಕಂಸಾಳೆ, ದಿವ್ಯಜ್ಯೋತಿ ಪ್ರಾಥಮಿಕ ಶಾಲಾ ತಂಡ, ಸೋಗಿ ಇವರಿಂದ ಜಾನಪದ ನೃತ್ಯ ನಡೆಯಿತು. ನಿರೂಪಣೆಯನ್ನು ಪಿ.ಎಸ್.ಫಕ್ಕೀರ್ಸಾಬ್, ಸಂತೋಷ್ ರಾಠೋಡ್ ಮಾಡಿದರು. ವಿಶೇಶ ಅತಿಥಿ ಗಣ್ಯರಾದ ಮೇಟಿ ಕೊಟ್ರಪ್ಪ, ಎಂ.ತವನಪ್ಪ, ಡಾ|| ಕೆ.ರುದ್ರಪ್ಪ, ಬಿ.ಸಯ್ಯದ್ ಹುಸೇನ್, ಬಸವರಾಜ ಕೊಳ್ಳಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರ ಪರಿಚಯವನ್ನು ಡಾ|| ಹೆಚ್.ಕೆ.ಮಹೇಶ್, ಯಲ್ಲಪ್ಪ ಅಂದ್ರಾಳ್ ಚಿಕ್ಕದಾಗಿ ಚೊಕ್ಕವಾಗಿ ಮಾಡಿದರು. ಜಿಲ್ಲಾಧ್ಯಕ್ಷರಾದ ಟಿ.ಹೆಚ್.ಎಂ.ಬಸವರಾಜ ತಂಡದಿಂದ ಸಮಾಳ ವಾದ್ಯ, ಹೆಚ್.ಕೊಟ್ರಪ್ಪ ತಂಡ ಶ್ರೀ ದುಗರ್ಾದೇವಿ ಪರಿಶಿಷ್ಟ ಜಾತಿ ಕಲಾಸಂಘ, ಸೋಗಿ ಇವರಿಂದ ಸಂಪ್ರದಾಯದ ಹಾಡುಗಳು, ಕೆ.ಹೆಚ್.ಎಂ.ವೀರಯ್ಯ ತಂಡದಿಂದ ಸಮಾಳವಾದ್ಯ, ಗೋಣಿ ಬಸವೇಶ್ವರ ಸಂಘ, ಹಡಗಲಿ ಇವರಿಂದ ಭಜನೆ ಗೀತೆಗಳು, ಎಂ.ತಿಪ್ಪೇಶ್ ನಾಯಕ್ ತಂಡ, ಕೆ.ಕೆ.ತಾಂಡ ಇವರಿಂದ ಲಂಬಾಣಿ ನೃತ್ಯ, ಪಿ.ಚಮನ್ ಸಾಬ್ ಮತ್ತು ತಂಡದವರಿಂದ ರಿವಾಯಿತಿ ಪದಗಳು, ಶಿವಕುಮಾರ್ ಎಡವಲಿ ತಂಡದವರಿಂದ ಹಗಲುವೇಷ, ಸೋಮಶೇಖರ ತಂಡ ಇಟಿಗಿ ಇವರಿಂದ ತತ್ವಪದಗಳು, ಹಡಗಲಿ ಬಸವರಾಜ ತಂಡ ಮಾಗಳ ಇವರಿಂದ ಲಾವಣಿ ಮತ್ತು ಸುಗ್ಗಿ ಹಾಡುಗಳು, ಕೆ.ಶಿವಾನಂದ ತಂಡ ಹಡಗಲಿ ಇವರಿಂದ ಅಲಾಯಿ ಹೆಜ್ಜೆ ಪದಗಳು, ಜಾನಪದ ಪದಗಳು, ಸುಗ್ಗಿ ಕುಣಿತಗಳು ಬಹಳ ಅದ್ದೂರಿಯಾಗಿ ವಿಜೃಂಭಣೆಯಿಂದ ಜರುಗಿದವು. ನಿರೂಪಣೆಯನ್ನು ಶ್ರೀಮತಿ ಎಲ್.ಎಂ.ಶ್ರೀಲತ ಮತ್ತು ಎಲ್.ತುಳಜಾ ನಾಯ್ಕ ಮಾಡಿದರು. ಎಲ್ಲಾ ಕಲಾವಿದರಿಗೆ ಪ್ರಶಸ್ತಿ ಪತ್ರ ವಿತರಿಸಿದ ಶಾಲು ಹೊದಿಸಿ, ಪುಸ್ತಕ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ದಿವ್ಯ ಸಾನಿಧ್ಯವನ್ನು ಶ್ರೀ ಮಾ.ನಿ.ಪ್ರ.ಅಭಿನವ ಚನ್ನಬಸವ ಮಹಾಸ್ವಾಮಿಗಳು ವಿರಕ್ತಮಠ, ಹಿರೇಮಲ್ಲನಕೇರೆಯವರು ವಹಿಸಿ ಆಶೀರ್ವಚನ ನೀಡಿದರು. ಅನನ್ಯ ಸಂಗೀತ ಪಾಠಶಾಲೆಯ ಮಕ್ಕಳು ಪ್ರಾಥರ್ಿಸಿದರು. ಎಂ.ಪಿ.ಎಂ.ಅಶೋಕ ಸ್ವಾಗತಿಸಿದರು. ಕೆ.ಬನ್ನೆಪ್ಪ ವಂದಿಸಿದರು, ಡಾ|| ಕೆ.ಸತೀಶ್, ಬಸವರಾಜ ನಿರೂಪಿಸಿದರು. ಕೊನೆಯಲ್ಲಿ ಎಲ್ಲರಿಗೂ ಉಪಹಾರ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಎ.ಎಂ.ಹಾಲಯ್ಯ ಶಾಸ್ತ್ರೀಗಳು, ವಾರದ ಗೌಸ್ಮೋಹಿದ್ದಿನ್, ಶ್ರೀಮತಿ ಮದರ್ಾನಬಿ, ಯು.ಹೆಚ್.ಸೋಮಶೇಖರ, ಡಾ|| ಮಲ್ಲಿಕಾಜರ್ುನ, ಹೆಚ್.ಎಂ.ಬೆಟ್ಟಯ್ಯ, ಎಂ.ನಿಂಗಪ್ಪ, ಡಾ|| ಫಣಿರಾಜ, ಎ.ಕೊಟ್ರುಗೌಡು, ತೊ.ಮ.ಶಂಕ್ರಯ್ಯ, ಕರಿವೀರನಗೌಡ ಪಾಟೀಲ್, ಕೋರಿ ಹಾಲೇಶ್ ಮತ್ತು ಕೊಟ್ಟೂರಿನ ತಾಲ್ಲೂಕು ಘಟಕದ ಕಾರ್ಯದಶರ್ಿ ಶ್ರೀಮತಿ ಗೌರಿ ಶ್ರೀಕಾಂತ್ ಪತ್ತಿಕೊಂಡ ಮುಂದಾದವರು ಉಪಸ್ಥಿತರಿದ್ದರು.

ಸುದ್ದಿ ಓದಿ