ಜನಪದ ಗಾಯನ ಗಾರುಡಿಗ ಹುಕ್ಕೇರಿ ಬಾಳಪ್ಪ: ಆಶಾ ಪರೀಟ
ಯರಗಟ್ಟಿ 13: ಕಂಚಿನ ಕಂಠದ ಗಾಯಕ ಹುಕ್ಕೇರಿ ಬಾಳಪ್ಪ ಅವರು ಜನಪದ ಗಾಯನ ಗಾರುಡಿಗರಾಗಿದ್ದರು ಎಂದು ಯರಗಟ್ಟಿಯ ಬಾಲಕಿಯರ ವಸತಿ ನಿಲಯದ ಮೇಲ್ವಿಚಾರಕಿ ಆಶಾ ಪರೀಟ ಹೇಳಿದರು.
ಸಮೀಪದ ಸೊಪ್ಪಡ್ಲ ಗ್ರಾಮದ ಮಹಾಂತೇಶ ಪ್ರೌಢ ಶಾಲಾಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಯರಗಟ್ಟಿ ತಾಲೂಕು ಘಟಕವು ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಪ್ರಯುಕ್ತ ಆಯೋಜಿಸಿದ ನಾಲ್ಕನೆಯ ಸರಣಿ ಉಪನ್ಯಾಸ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ‘ಹುಕ್ಕೇರಿ ಬಾಳಪ್ಪನವರ ಜೀವನ ಹಾಗೂ ಸಾಧನೆಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು ಪಾಶ್ಚಾತ್ಯ ಸಂಸ್ಕೃತಿಯ ಅಬ್ಬರ ಮೀತಿಮೀರಿದ್ದು, ಸ್ಥಳೀಯರ ಸಾಂಸ್ಕೃತಿಕ ಶೈಲಿ, ಆಹಾರ ಶೈಲಿ ಹಾಗೂ ಜೀವನಶೈಲಿಯಲ್ಲಿ ಸಾಕಷ್ಟು ವ್ಯತ್ಯಾಸ್ಕ್ೃವಾಗಿದೆ. ನಮ್ಮದು ಭವ್ಯ ಸಾಹಿತ್ಯಿಕ ಪರಂಪರೆ ಹೊಂದಿದ ನಾಡು. ಆದರೆ, ಇಂದಿನ ಜನರಲ್ಲಿ ಅದರಲ್ಲೂ ಯುವಕ, ಯುವತಿಯರಲ್ಲಿ ಸಾಹಿತ್ಯ, ಸಂಗೀತ್ಕ್ೃಸಕ್ತಿಯೇ ಕ್ಷೀಣಿಸಿದೆ. ತಕ್ಷಣವೇ ಇದಕ್ಕೆ ಕಡಿವಾಣ ಹಾಕಿ ಸಾಹಿತ್ಯ, ಸಂಗೀತದತ್ತ ಯುವಕರನ್ನು ಸೆಳೆಯಲು ಪ್ರಯತ್ನಿಸ್ಕ್ೃಬೇಕಾಗಿದೆ’ ಎಂದು ತಿಳಿಸಿದರು.
ಸಂಸ್ಥೆಯ ನಿರ್ದೇಶಕರಾದ ಅಶೋಕ ಅಂಗಡಿಯವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಕ.ಸಾ.ಪ. ಯರಗಟ್ಟಿ ತಾಲೂಕು ಘಟಕದ ಗೌರವ ಕಾರ್ಯದರ್ಶಿ ದೇವೇಂದ್ರ ಕಮ್ಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು.ಯರಗಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಯನಗೌಡ ಮರಿಗೌಡರ, ನಿವೃತ್ತ ಮುಖ್ಯೋಪಾಧ್ಯಾಯರಾದ ಆರ್.ಎಲ್. ಜೂಗನವರ, ಎಸ್.ಎಸ್. ಕುರುಬಗಟ್ಟಿಮಠ ಮಾತನಾಡಿದರು.
ಇತ್ತೀಚೆಗೆ ಪಿಎಚ್.ಡಿ. ಪದವಿ ಪಡೆದ ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ವಿಜಯ ರಾಯರ ಅವರನ್ನು ಸತ್ಕರಿಸಲಾಯಿತು.ಕ.ಸಾ.ಪ. ಯರಗಟ್ಟಿ ತಾಲೂಕು ಘಟಕದ ಅಧ್ಯಕ್ಷರಾದ ತಮ್ಮಣ್ಣ ಕಾಮಣ್ಣವರ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಮುಖ್ಯಗುರುಗಳಾದ ಎಚ್.ವಾಯ್. ಸುಳ್ಳದ, ಜಿ.ಎಸ್. ಕಮತಗೌಡರ, ಜಿ.ಬಿ. ಗೌಡರ, ಶಿವಾನಂದ ಮಿಕಲಿ, ಡಾ. ರಾಜಶೇಖರ ಬಿರಾದಾರ, ಮಹೇಶ ಮಗದುಮ್ಮ ಸೇರಿದಂತೆ ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.ಆರ್.ಬಿ. ಹುಣಶ್ಯಾಳ ಅವರು ನಿರೂಪಿಸಿದರು, ಎಂ.ಎಸ್. ಅಳಗೋಡಿ ಸ್ವಾಗತಿಸಿದರು, ಬಿ.ಎಸ್. ಗೌಡರ ವಂದಿಸಿದರು.