ಯರಗಟ್ಟಿ

ಜಾನಪದ ವೈಭವ ಮತ್ತೆ ಮರುಕಳಿಸುತ್ತಿದೆ: ಬಂಡಿವಡ್ಡರ

ಜಾನಪದ ವೈಭವ ಮತ್ತೆ ಮರುಕಳಿಸುತ್ತಿದೆ: ಬಂಡಿವಡ್ಡರ

ಯರಗಟ್ಟಿ 28: ಜಾನಪದ ಕಲೆ-ಸಾಹಿತ್ಯ ಪುರಾತನವಾಗಿದ್ದು, ಜಾನಪದ ವೈಭವ ಮತ್ತೆ ಮರುಕಳಿಸುತ್ತಿದೆ. ಅದರಿಂದ ನಾಡಿನ ಖ್ಯಾತಿ ಜಗತ್ತಿನಲ್ಲಿ ಇನ್ನಷ್ಟು ಹೆಚ್ಚಿಸಲಿದೆ ಎಂದು ಎಸ್‌.ಡಿ.ಎಂ.ಸಿ ಅಧ್ಯಕ್ಷ ಲಕ್ಕಪ್ಪ ಬಂಡಿವಡ್ಡರ ಹೇಳಿದರು.  

ಸಮೀಪದ ತಾವಲಗೇರಿ ಗ್ರಾಮದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಡಾ. ಬಿ. ಆರ್‌. ಅಂಬೇಡ್ಕರ ಜಾನಪದ ಕಲಾ ಪೋಷಕ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಜಾನಪದ ಕಲಾ ಸೌರಭ ನಾಡಿನಲ್ಲೊಂದು ಅಪರೂಪದ ಜಾನಪದ ನೃತ್ಯ ಕಾರ್ಯಕ್ರಮವನ್ನು  ಡೊಳ್ಳು ಬಾರಿಸಿ  ಉದ್ಘಾಟಿಸಿ ಅವರು ಮಾತನಾಡಿದರು. 

ದೇಶದ ಅಭಿವೃದ್ಧಿಯ ಸಂಕೇತ ಅಲ್ಲಿನ ಸಂಸ್ಕೃತಿಯಾಗಿದೆ. ಹೀಗಾಗಿ ಜಗತ್ತಿನಲ್ಲಿ ಉತ್ತಮ ಸಂಸ್ಕೃತಿಗೆ ಭಾರತ ದೇಶ ಶ್ರೀಮಂತವಾಗಿದೆ ಎಂದರು. 

ಯುವಕರು ಟಿ.ವಿ.ಮಾಧ್ಯಮದಿಂದ ದೂರಾಗಿ ನಮ್ಮ ಗ್ರಾಮೀಣ ಪ್ರದೇಶ ಮೂಲ ಜಾನಪದ ಸೂಗಡಿನತ್ತ ಸಾಗುತ್ತಿದ್ದಾರೆ. ಅದರಿಂದ ಜಾನಪದ ಸಾಹಿತ್ಯಕ್ಕೆ ಪುನಶ್ಚೇತನ ನೀಡಿದಂತಾಗಿದೆ.  ಜಾನಪದ ವಿಶ್ವ ವಿದ್ಯಾಲಯ ಆರಂಭದಿಂದ ಪ್ರತಿಯೊಬ್ಬರಿಗೆ ಭೂಮಿಕೆ ಹಾಗೂ ವೇದಿಕೆಗಳನ್ನು ಸಜ್ಜುಗೊಳಿಸುತ್ತಿದೆ. ಹೀಗಾಗಿ ಜಾನಪದ ವಿವಿ ಜನಸಾಮಾನ್ಯರ ಹತ್ತಿರದ ಸಂಬಂಧ ಹೊಂದಿದೆ ಎಂದರು. 

ಈ ಸಂದರ್ಭದಲ್ಲಿ ಗ್ರಾ. ಪಂ. ಸದಸ್ಯ ಗೌಡಪ್ಪ ತಳನಟ್ಟಿ, ಅಂಬೇಡ್ಕ ಯುವ ಸಂಘ ಅಧ್ಯಕ್ಷ ಫಕ್ಕೀರ​‍್ಪ ಮಾದರ, ಶಿಕ್ಷಕ ವಾಯ್‌. ಬಿ. ನಂದಿ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಸೋಮಪ್ಪ ಪೂಜೇರ, ವಿಠ್ಠಲ ಪುಡಕಲಕಟ್ಟಿ, ಪ್ರಕಾಶ ಹರಿಜನ, ರುದ್ರ​‍್ಪ ಮಾದರ, ಬಸವರಾಜ ಹರಿಜನ, ಲಕ್ಷ್ಮೀ ಹರಿಜನ, ಮುತ್ತವ್ವ ಹರಿಜನ, ಸತ್ಯವ್ವ ಹರಿಜನ ಸೇರಿಂದ ಅನೇಕರು ಇದ್ದರು. 


ಸುದ್ದಿ ಓದಿ