ಜಾನಪದ ಕಲೆಗಳು ಜನರ ಜೀವನಾಡಿ: ಹನುಮಂತಪ್ಪ
ಹೂವಿನಹಡಗಲಿ : ಕಲೆ,ಸಾಹಿತ್ಯ ಸಂಗೀತ ಪರಂಪರೆ ಹೆಸರಾದ ಮಲ್ಲಿಗೆ ನಾಡು ತನ್ನದೇ ಆದ ವೈವಿದ್ಯಮಯ ಇತಿಹಾಸವನ್ನು ಹೊಂದಿದೆ.ಆದರಲ್ಲೂ ಜಾನಪದ ಕಲೆಗಳು ಜನರ ಜೀವನಾಡಿಯಾಗಿವೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ನಿಗಮದ ಮಾಜಿ ಅಧ್ಯಕ್ಷ ಹೆಚ್.ಹನುಮಂಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಜಿಬಿಆರ್ ಕಾಲೇಜಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವಿಜಯನಗರ ಜಿಲ್ಲೆ ಹಾಗೂ ಚಂದ್ರಶೇಖರ ಕಲಾಬಳಗ ಅಂಗೂರು ಆಯೋಜಿಸಿದ್ದ ನಗೆ ಸುಗ್ಗಿ ಹಾಗೂ ಜಾನಪದ ಗೀತಾ ಗಾಯನ ಉದ್ಘಾಟಿಸಿ ಮಾತನಾಡಿ ಸುಗ್ಗಿಯ ಹಾಡುಗಳು,ಹಂತಿಪದಗಳು,ಕುಟ್ಟುವ ಬೀಸುವ ಸಂಪ್ರದಾಯದ ಪದಗಳು,ಬೈಲಾಟ,ಗೊಗಲು ಗೊಂಬೆ ಇನ್ನು ಗ್ರಾಮೀಣ ಪ್ರದೇಶದಲ್ಲಿ ಜಾನಪದ ಜೀವಂತವಾಗಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮಾತನಾಡಿ ಜಾನಪದ ಕಲೆ ಸಾಹಿತ್ಯ ಸಾಂಸ್ಕೃತಿಯ ತಾಯಿ ಬೇರಾಗಿದ್ದು, ಗ್ರಾಮೀಣ ಜನತೆ ತಮ್ಮ ಬಿಡುವಿನ ವೇಳೆಯಲ್ಲಿ ದಣಿದ ಮನಸ್ಸುಗಳಿಗೆ ಮನೋರಂಜನೆಗಾಗಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಿರುವುದು ಶ್ಲಾಘನೀಯ ಎಂದರು.
ಚಂದ್ರಶೇಖರ ಕಲಾ ಬಳಗದ ಕಾರ್ಯದರ್ಶಿ ಕಲಾವಿದ ಕೆ.ಸಿ.ಪರಶುರಾಮ ಪ್ರಾಸ್ತಾವಿಕ ಮಾತನಾಡಿದರು.ಬಿಜೆಪಿ ಮುಖಂಡರಾದ ಸುರೇಶ ಶಿವಪುರ, ಎಲ್.ಮಧುನಾಯ್ಕ,ಎಲ್.ಕೊಟ್ರೇಶನಾಯ್ಕ, ಎಲ್.ಕೆ.ರವಿಕುಮಾರ, ಎಲ್.ಶ್ರೀಧರನಾಯ್ಕ, ಕೃಷ್ಣನಾಯ್ಕ, ಡಿ.ಹರೀಶ,ಗಳಗನಾಥ ಹಾಲೇಶ, ಬೀರಬ್ಬಿ ಬಸವರಾಜ, ವಕೀಲ ಎಸ್.ಬಸವರಾಜ,ಕೆ.ಲಲಿತಮ್ಮ, ಐನಳ್ಳಿ ಭಾಗ್ಯಮ್ಮ ಇದ್ದರು. ಜಾನಪದ ಗೀತಾ ಗಾಯನ ಕಾರ್ಯಕ್ರಮದಲ್ಲಿ ಜೆ.ದುರುಗಪ್ಪ,ಕೆ.ಅಶೋಕ, ಖಾದರ ,ಎನ್.ಮಂಜುನಾಥ, ಜವಳಿ ಕೊಟ್ರೇಶ, ಎ.ಎಂ.ಪಿ.ಪ್ರಶಾಂತ, ಸಿದ್ದು, ಲತಾ,ಪಲ್ಲವಿ,ಕಾವ್ಯ,ಬಳ್ಳಾರಿ ಯರಿಸ್ವಾಮಿ ನಡೆಸಿಕೊಟ್ಟರು. ಮಂಜುನಾಥ ಪ್ರಾರ್ಥಿಸಿದರು. ವಿಶಾಲನಾಯ್ಕ ಸ್ವಾಗತಿಸಿದರು.ವಿಜಿ.ಆಗ್ರಹಾರ ನಿರೂಪಿಸಿದರು.ಪ್ರಭು ವಂದಿಸಿದರು.