ಹೂವಿನ ಹಡಗಲಿ

ಗ್ರಾಮೀಣ ಭಾಗದಲ್ಲಿ ಜಾನಪದ ಕಲೆಗಳು ಇನ್ನು ಜೀವಂತವಾಗಿದೆ

ಗ್ರಾಮೀಣ ಭಾಗದಲ್ಲಿ ಜಾನಪದ ಕಲೆಗಳು ಇನ್ನು ಜೀವಂತವಾಗಿದೆ

ಜಾನಪದ ಕಲೆಗಳು ಸಂಸ್ಕೃತಿಯ ಪ್ರತಿಬಿಂಬ;

ಹೂವಿನಹಡಗಲಿ 04: ಗ್ರಾಮೀಣ ಭಾಗದಲ್ಲಿ ಇಂದಿಗೂ ಹಬ್ಬ ಹರಿದಿನ ಹಾಗು ಸಭೆ ಸಮಾರಂಭಗಳಲ್ಲಿ ಮನೋರಂಜನೆಗಾಗಿ ರೈತಾಪಿ ವರ್ಗದ ಜನ ಜಾನಪದ ಕಲೆ ಸಂಸ್ಕೃತಿ ನಾಟಕ ಬಯಲಾಟ ತೊಗಲುಗೊಂಬೆ, ದಪ್ಪಿ ನಾಟ ಮೊದಲಾದ ಜಾನಪದ ಕಲೆಗಳು ಪ್ರದರ್ಶನ ಗೊಳಿಸಿ ನಮ್ಮ ಪುರಾತನ ಸಂಸ್ಕೃತಿಯನ್ನು ಮೆಲುಕು ಹಾಕುವುದರ ಜೊತೆಗೆ ಜಾನಪದ ಕಲೆಗಳು ಸಂಸ್ಕೃತಿಯ ಪ್ರತಿಬಿಂಬವಾಗಿ ಹೊರ ಸೂಸಲು ಸಹಕಾರಿ ಆಗಲಿವೆ.  

ಕರ್ನಾಟಕ ಜಾನಪದ ಪರಿಷತ್ತಿನ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷರಾದ ಕೆಸಿ ಪರಶುರಾಮ್ ಅಂಗೂರ್ ಅಭಿಪ್ರಾಯ ಪಟ್ಟರು ತಾಲೂಕಿನ ಮಾಗಳ ಗ್ರಾಮದಲ್ಲಿ ಗಾಳಿ ದುರ್ಗಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯನಗರ ಹಾಗೂ ಸ್ಪೂರ್ತಿ ಸಾಂಸ್ಕೃತಿಕ ಸಂಘ ಇವರ ಪ್ರಾಯೋಜನ ಅಡಿ ಆಯೋಜಿಸಿದ ಹಗಲುವೇಷ ಹಾಗೂ ಕೀಲು ಕುದುರೆ ಮೆರವಣಿಗೆ ಕಲಾತಂಡಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ಜಾನಪದ ಸಾಹಿತ್ಯ ಸಂಸ್ಕೃತಿಯ ತಾಯಿ ಬೇರು ಗ್ರಾಮೀಣ ಭಾಗದಲ್ಲಿ ಜಾನಪದ ಕಲೆಗಳು ಇನ್ನು ಜೀವಂತವಾಗಿದೆ.  

ಸರ್ಕಾರ ಸಂಘ ಸಂಸ್ಥೆಗಳು ಗ್ರಾಮೀಣ ಭಾಗದ ಜಾನಪದ ಕಲಾವಿದರನ್ನು ಪ್ರೋತ್ಸಾಹಿಸಿದರೆ ಕಲೆಗಳು ಉಳಿಯಲು ಸಾಧ್ಯ ಎಂದು ಹೇಳಿದರು.  ಕಾರ್ಯಕ್ರಮದ ಘನ ಉಪಸ್ಥಿತಿಯನ್ನು ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ಡಾಕ್ಟರ್ ಮಂಜುನಾಥ್ ವೇಷಗಾರ ವಹಿಸಿದ್ದರು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಮಾಜಿ ಉಪಾಧ್ಯಕ್ಷರಾದ ಕೆ ರವಿಕುಮಾರ್ ಕಲಾಪೋಷಕ ಹುಸೇನ್ ಸಾಬ್ ಕೆ ಅಶೋಕ್ ನಿಲಯ ಪಾಲಕ ಮಾರುತಿ ಉಪಸ್ಥಿತರಿದ್ದರು ನಂತರ ಮಾಗಳ ಗ್ರಾಮದ ಪ್ರಮುಖ ಬೀದಿಗಳ ಮುಖಾಂತರ ಹಗಲುವೇಷ ಪ್ರದರ್ಶನ ಮಂಜುನಾಥ್ ಮೋತಿ ವೇಷದಾರ್ ಮತ್ತು ತಂಡ ಹರಪನಹಳ್ಳಿ ಕಿಲುಕುದುರೆ ಕುಣಿತ ಎಚ್ ಬಿ ಬಸವರಾಜ್ ಮತ್ತು ತಂಡ ಹಲಿಗೆವಾದನ ಹಲಗೆ ಗಣೇಶ್ ಮತ್ತು ತಂಡ ದವರು ಪ್ರದರ್ಶನಗೊಳಿಸಿ ನೆರೆದ ಜನಸ್ತೋಮವನ್ನು ರಂಜಿಸಿದರು ಆರಂಭದಲ್ಲಿ ಕೆ ಭೀಮೇಶ್ ಸ್ವಾಗತಿಸಿ ನಿರೂಪಿಸಿದರು. 


ಸುದ್ದಿ ಓದಿ