ಹೂವಿನ ಹಡಗಲಿ

ಹೂವಿನಹಡಗಲಿ : ನೂತನ ಶಾಸಕರ ಭಾವಚಿತ್ರ ತೆರವು: ಬಿಜೆಪಿ ಆಕ್ಷೇಪಣೆ

ಹೂವಿನಹಡಗಲಿ : ನೂತನ ಶಾಸಕರ ಭಾವಚಿತ್ರ ತೆರವು: ಬಿಜೆಪಿ ಆಕ್ಷೇಪಣೆ

ಲೋಕದರ್ಶನ ವರದಿ

ಹೂವಿನಹಡಗಲಿ 22: ಪಟ್ಟಣದ ಹೊರ ವಲಯದ ಎರಡು ಕಡೆಗಳಲ್ಲಿ ಸ್ವಾಗತ ಕಾಮಾನುಗಳಲ್ಲಿ ಪುರಸಭೆಯಿಂದ ನೂತನ ಶಾಸಕರ ಭಾವಚಿತ್ರವನ್ನು ಅಂಟಿಸಲಾಗಿತ್ತು.ಕೆಲ ರಾಜಕಾರಣಿಗಳ ಒತ್ತಡದಿಂದ ದಿಢೀರ ಪುರಸಭೆ ಅಧಿಕಾರಿಗಳು ತೆರವುಗೊಳಿಸಲು ಮುಂದಾದಗ ಬಿಜೆಪಿ ಪಕ್ಷದವರು ಆಕ್ಷೇಪಿಸಿ ಬುಧವಾರ ಬೆಳಿಗ್ಗೆ ಸ್ಥಳದಲ್ಲೇ ಪ್ರತಿಭಟನೆ ನಡೆಸಿದ ಘಟನೆ ಜರುಗಿತು.

ಮದಲಗಟ್ಟ ರಸ್ತೆ ಮತ್ತು ಹರಪನಹಳ್ಳಿ ರಸ್ತೆಯ ಸ್ವಾಗತ ಕಮಾನುಗಳಲ್ಲಿ ಪುರಸಭೆಯಿಂದ ಹಿಂದಿನ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಭಾವಚಿತ್ರ ತೆರವುಗೊಳಿಸಿ ಈಚೆಗೆ ನೂತನ ಶಾಸಕ ಕೃಷ್ಣನಾಯ್ಕರ ಭಾವಚಿತ್ರ ಅಳವಡಿಸಿದ್ದರು.ಬುಧವಾರ ಬೆಳಿಗ್ಗೆ ಪುರಸಭೆ ಸಿಬ್ಬಂದಿ ಶಾಸಕರ ಭಾವಚಿತ್ರ ತೆರವಿಗೆ ಬಂದಾಗ ಬಿಜೆಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟಿಸಿದರು.

ಸುಪ್ರೀಂ ಕೋರ್ಟ್ ಆದೇಶದಂತೆ ಜನಪ್ರತಿನಿಧಿಗಳ ಭಾವಚಿತ್ರ ತೆರವುಗೊಳಿಸಿದ್ದೇವೆ ಎಂದು ಸಿಬ್ಬಂದಿ ಸಮಥರ್ಿಸಿಕೊಂಡಾಗ ಬಿಜೆಪಿ ಕಾರ್ಯಕರ್ತರ ಮಧ್ಯ ಪ್ರತಿಭಟನೆ ನಡೆಯಿತು.ನಂತರ ಹಿಂದಿನ ಶಾಸಕರ ಭಾವಚಿತ್ರ ಫಲಕದಲ್ಲಿದ್ದಾಗ ನಿಮಗೆ ನ್ಯಾಯಾಲಯ ಆದೇಶ ನೆನಪಿರಲಿಲ್ಲವೇ? ಎಂದು ಪ್ರಶ್ನಿಸಿದ ಬಿಜೆಪಿ ಕಾರ್ಯಕರ್ತರು ಕೃಷ್ಣನಾಯ್ಕನ ಭಾವಚಿತ್ರ ನಿವೇ ಹಾಕಿ,ನಿವೇ ತೆರವುಗೊಳಿಸಲು ಯಾರು ಒತ್ತಡ ಇದೆ ಎಂದು ತರಾಟೆಗೆ ತೆಗೆದುಕೊಂಡರು. ಗಲಾಟೆ ಮಾಹಿತಿ ತಿಳಿದು ಪಿಎಸ್ಐ ಸಂತೋಷ ಡಬ್ಬಿನ,ಎಎಸ್ಐ ರಾಜೇಂದ್ರನಾಯ್ಕ ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಿಸಿದರು. 

ಹರಪನಹಳ್ಳಿ ರಸ್ತೆಯಲ್ಲಿ ತೆರವುಗೊಳಿಸಿರುವ ಭಾವಚಿತ್ರ ಮರಳಿ ಹಾಕುವಂತೆ ಕಾರ್ಯಕರ್ತರು ಪಟ್ಟು ಹಿಡಿದಾಗ ಪುರಸಭೆಯವರು ಮತ್ತೆ ಶಾಸಕರ ಭಾವಚಿತ್ರ ಅಳವಡಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಸಂಜೀವರೆಡ್ಡಿ, ಈಟಿಲಿಂಗರಾಜ, ,ಪುರಸಭೆ ಸದಸ್ಯ ಎ.ಜೆ.ವೀರೇಶ,ಮಾಜಿ ಸದಸ್ಯ ವಿಲ್ಸನ್ ಸ್ವಾಮಿ,ಸಿರಾಜ ಬಾವಿಹಳ್ಳಿ, ಜೆ.ಪರಶುರಾಮ ಇದ್ದರು 

ಸುದ್ದಿ ಓದಿ