ಪ್ರಥಮ ಪ್ರಾಶಸ್ತದ ಮತ ಶೆಟ್ಟರಗೆ: ಮ್ಯಾಗೇರಿ
ಲೋಕದರ್ಶನ ವರದಿ
ಶಿಗ್ಗಾವಿ 07: ವಿಧಾನ ಪರಿಷತ್ತಚುನಾವಣೆ ಹಿನ್ನಲೆಯಲ್ಲಿ ತಾಲೂಕಿನ 28 ಗ್ರಾಮಪಂಚಾಯತಿಗಳಲ್ಲಿ ಇಂದು 28 ವಿವಿಧ ಗ್ರಾಮಪಂಚಾಯತಿಗಳ ಅಧ್ಯಕ್ಷರು ಮತ್ತು ಸರ್ವಸದಸ್ಯರಿಗೂ ಬೇಟಿಯಾಗಿ ಪ್ರಥಮ ಪ್ರಾಶಸ್ತದ ಮತವನ್ನು ಭಾರತೀಯ ಜನತಾ ಪಕ್ಷದಅಭ್ಯರ್ಥಿ ಪ್ರದೀಪ ಶೆಟ್ಟರಗೆ ಮತ ನೀಡಬೇಕುಎಂದುತಾಲೂಕ ಭಾಜಪಅಧ್ಯಕ್ಷ ಶಿವಾನಂದ ಮ್ಯಾಗೇರಿ ನೇತೃತ್ವದಲ್ಲಿ ಮತಯಾಚಿಸಿದರು.
ಮತಯಾಚನೆ ಮಾಡಿ ಮಾತನಾಡಿದ ಅವರು ಪ್ರಧಾನಮಂತ್ರಿ ನರೇಂದ್ರ ಮೋದೀಜೀಯವರ ಜನಸಾಮಾನ್ಯರಿಗಾಗಿ, ದೀನದಲಿತರಿಗಾಗಿ, ಕಾರ್ಮೀಕರಿಗಾಗಿ, ಬಡವ ಬಲ್ಲಿದನಿಗಾಗಿ ದೂರದೃಷ್ಟಿಯುಳ್ಳ ಅನೇಕ ಯೋಜನೆಗಳು ಕಾರ್ಯರೂಪಕ್ಕೆ ತರುತ್ತಿರುವುದು ಶ್ಲಾಘನೀಯ ವಿಷಯಅಲ್ಲದೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರ್ಪ ಅವರ ಜನಪ್ರೀಯ ಯೋಜನೆಗಳು ಹಾಗೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಅನೇಕ ಜನಪರ ಹಾಗೂ ರೈತಪರ ಮತ್ತು ಸಾಮಾನ್ಯ ರಪರ ಅನೇಕ ಯೋಜನೆಗಳು ಅದರಲ್ಲಿ ಮುಖ್ಯವಾಗಿ ಗ್ರಾಮ ಅಮೃತ ಯೋಜನೆ ಇಡೀ ಗ್ರಾಮದ ಸರ್ವತೋಮುಖ ಅಭಿವೃದ್ದಿಯನ್ನು ಹೊಂದುವ ಯೋಜನೆಯಾಗಿದ್ದು ಇದು ಬಸವರಾಜ ಬೊಮ್ಮಾಯಿಯವರ ದೂರದೃಷ್ಟಿಯುಳ್ಳ ಯೋಜನೆಗಳಾಗಿವೆ ಆದ್ದರಿಂದ ಭಾಜಪ ಅಭ್ಯರ್ಥಿ ಪ್ರದೀಪ ಶೆಟ್ಟರಗೆ ಮತ ನೀಡಿ ಪ್ರಚಂಡ ಬಹುಮತದಿಂದ ಆರಿಸಿತರಬೇಕು ಎಂದು ಮತಯಾಚಿಸಿದರು.
ಈ ಸಂದರ್ಭದಲ್ಲಿ ತಿಪ್ಪಣ್ಣಾ ಸಾತಣ್ಣವರ, ಬಿ.ಟಿ.ಇನಾಮತಿಗೌಡ್ರ, ದೇವಣ್ಣಾ ಚಾಕಲಬ್ಬಿ, ಶರೀಫಸಾಬ ನಧಾಪ, ಬಸನಗೌಡರಾಮನಗೌಡ್ರ, ರೇಣುಕನಗೌಡ ಪಾಟೀಲ, ಹನುಮಂತಪ್ಪ ಮಾದರ, ಹನುಮಂತಪ್ಪ ಗುಳೇದ, ಬಸವರಾಜ ನಾರಾಯಣಪೂರ, ಡಾ. ಮಲ್ಲೇಶಪ್ಪ ಹರಿಜನ, ಪಕ್ಕೀರಗೌಡ್ರ ಭರಮಗೌಡ್ರ, ರವಿ ಬಿಶೆಟ್ಟಿ, ಮಲ್ಲಿಕಾರ್ಜುನ ಹಡಪದ, ಮುತ್ತಣ್ಣ ಪಾಟೀಲ, ಶೇಖಣ್ಣಾ ನಂಜಪ್ಪನವರ, ರೇವಣಸಿದ್ದಪ್ಪ ಸುರಟೂರ, ಎಂ.ಎಸ್.ಪಾಟೀಲ, ವಿರೇಶಆಜೂರ, ವಿಶ್ವನಾಥ ಹರವಿ, ಶಶೀಧರ ಹೊನ್ನಣ್ಣವರ, ಉಮೇಶ ಅಂಗಡಿ, ಶಿವಣ್ಣಾ ಬಿಳಿಕುದರಿ ಸೇರಿದಂತೆಆಯಾಗ್ರಾಮ ಪಂಚಾಯತಿಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯರು ಉಪಸ್ಥಿತರಿದ್ದರು.