ಬೈಲಹೊಂಗಲ

ಕಬ್ಬಿನ ಗದ್ದೆಗೆ ಬೆಂಕಿ: ನಂದಿಸಿ ಹೆಚ್ಚಿನ ಅನುಹುತ ತಪ್ಪಿಸಿದ ಅಗ್ನಿಶಾಮಕ ಸಿಬ್ಬಂದಿ

ಕಬ್ಬಿನ ಗದ್ದೆಗೆ ಬೆಂಕಿ: ನಂದಿಸಿ ಹೆಚ್ಚಿನ ಅನುಹುತ ತಪ್ಪಿಸಿದ ಅಗ್ನಿಶಾಮಕ ಸಿಬ್ಬಂದಿ

ಲೋಕದರ್ಶನ ವರದಿ 


ಬೈಲಹೊಂಗಲ 10: ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಅಲ್ಪಸ್ವಲ್ಪ ಹಾನಿಯಾದ  ಘಟನೆ ಸಮೀಪದ ಸೊಗಲ ಕ್ರಾಸ ಹತ್ತಿರ ಗುರುವಾರ ಮಧ್ಯಾಹ್ನ ಜರುಗಿದೆ. 

     ಹೊಸೂರ ಗ್ರಾಮದ ರೈತ ಮಡಿವಾಳಪ್ಪ ಈರ​‍್ಪ ಚಳಕೊಪ್ಪ ಅವರ ಜಮೀನಿನಲ್ಲಿ ಕಬ್ಬು ಕಟಾವು ಮಾಡಿದ ಜಮೀನಿನಲ್ಲಿ ಉಳಿದಿರುವ ರವದಿಗೆ ಬೆಂಕಿ ಹಚ್ಚಿದ್ದರು. ಬೆಂಕಿ ಕೆನ್ನಾಲಿಗೆ ಗಾಳಿ ತೂರಿ ಸನಿಹದ ಕಬ್ಬಿನ ಪಡಕ್ಕೆ ಬೆಂಕಿ ತಗುಲಿದೆ. ದಾರಿಹೋಕರ ಮಂಜಾಗ್ರತೆಯಿಂದ ಬೈಲಹೊಂಗಲ ಅಗ್ನಿಶಾಮಕ ಠಾಣೆಗೆ ಸೂಕ್ತ ಸಮಯಕ್ಕೆ ಆಗಮಿಸಿ ಮುಂದಾಗುವ ದೊಡ್ಡ ಅನಾಹುತವನ್ನು ತಪ್ಪಿಸಿ ಸಂಪೂರ್ಣ ಬೆಂಕಿ ನಂದಿಸಿದರು. ಸುಮಾರು 7 ಏಕರೆ ಕಬ್ಬು ಉಳಿಯಿತು.  

  ಠಾಣಾಧಿಕಾರಿ ತಿಪ್ಪಣ್ಣ ನಾವದಗಿ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಚನ್ನಯ್ಯ ಹಿರೇಮಠ, ಮಹಾಂತೇಶ ಸಂಗೊಳ್ಳಿ, ಅರುಣ ಅಂಗಡಿ, ಬಾಳೇಶ ಅಂಗಡಿ, ಬಾಳೇಶ ನಾಗನೂರ ಬೆಂಕಿ ನಂದಿಸುವಲ್ಲಿ ಸಫಲರಾದರು. ರೈತರು ನಿಟ್ಟುಸಿರು ಬಿಟ್ಟು ಅಗ್ನಿಶಾಮಕ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. 


ಸುದ್ದಿ ಓದಿ