ವಿದ್ಯುತ್ ಅವಘಡ: ಎರಡು ಮಳಿಗೆಗಳು ಭಸ್ಮ
ಇಂಡಿ 02: ವಿದ್ಯುತ್ ಶಾಟ್ ಸಕ್ರ್ಯೂಟ್ನಿಂದ ಎರಡು ಅಂಗಡಿಗಳು ಸುಟ್ಟು ಕರಕಲಾಗಿ ಅಂದಾಜು 6 ಲಕ್ಷ ರೂ ಹಾನಿಯಾದ ಘಟನೆ ಇಂಡಿ ತಾಲೂಕಿನ ಹಿರೇಬೇವನೂರ ಗ್ರಾಮದಲ್ಲಿ ಮಂಗಳವಾರ ನಸುಕಿನ ಜಾವ ನಡೆದಿದೆ.
ಹಿರೇಬೇವನೂರ ಗ್ರಾಮದ ಮಲ್ಲಪ್ಪ ಭೀಮಣ್ಣ ಹೂಗಾರ ಅವರಿಗೆ ಸೇರಿದ ಮೋಟಾರ್ ರಿವೈಂಡಿಂಗ್ ಅಂಗಡಿಯಲ್ಲಿ ಶಾಟ್ ಸಕ್ರ್ಯೂಟ್ ಆಗಿದ್ದು ಅಲ್ಲಿರುವ ಲಕ್ಷಾಂತರ ರೂಪಾಯಿ ಮೌಲ್ಯದ ವೈರಿಂಗ, ಸೇರಿದಂತೆ ಇನ್ನಿತರ ವಸ್ತುಗಳು ಸುಟ್ಟು ಕರಕಲಾಗಿವೆ ಎನ್ನಲಾಗಿದ್ದು, ಅದೇ ಅಂಗಡಿಗೆ ಹೊಂದಿಕೊಂಡಿರುವ ರಾಘವೇಂದ್ರ ಹೊನ್ನಮೋರೆ ಅವರಿಗೆ ಸೇರಿದ ಫೋಟೊ ಸ್ಟುಡಿಯೋ, ಟೇಲರಿಂಗ ಅಂಗಡಿ, ಝರಾಕ್ಸ ಮಶಿನ್, ಬಟ್ಟೆಗಳು ಸೇರಿ ಅಂದಾಜು 5 ಲಕ್ಷ ರೂ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಂದು ಅಗ್ನಿ ಆಹುತಿ ಮಾಡಿ, ಮುಂದಾಗಬಹುದಾದ ಅನಾಹುತ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.