ರಾಣೆಬೆನ್ನೂರ

ಸುಗಮ ಸಂಗೀತ ಕಲೆಗೆ ಭವ್ಯ ಪರಂಪರೆಯಿದೆ: ಹಡಗಲಿ

ಸುಗಮ ಸಂಗೀತ ಕಲೆಗೆ ಭವ್ಯ ಪರಂಪರೆಯಿದೆ: ಹಡಗಲಿ

ರಾಣಿಬೆನ್ನೂರ 22: ಕಲಾ ಪರಂಪರೆಗೆ ಮತ್ತು ದೇಶೀಯ ಸಂಸ್ಕೃತಿಯ ಕಲೆಗೆ ಭವ್ಯ ಇತಿಹಾಸ ಪರಂಪರೆ ಇದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಭರಾಟೆಯಿಂದಾಗಿ ಸುಗಮ ಸಂಗೀತ ಮತ್ತು ಶಾಸ್ತ್ರೀಯ ಸಂಗೀತ ಕಲೆ ಮತ್ತು ಕಲಾವಿದರು ನೆಪತ್ಯಕ್ಕೆ ಸರಿಯುವಂತಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲೆ ಮತ್ತು ಕಲಾವಿದರನ್ನು ಪೋಷಿಸಲು ಮುಂದಾಗಿರುವುದು ಸುಗಮ ಸಂಗೀತ ಕಲಾವಿದರು, ಉಳಿಯುವಂತಾಗಿದೆ ಎಂದು ವರ್ತಕ ಸೋಮಣ್ಣ ಹಡಗಲಿ ಹೇಳಿದರು. 

ಈಶ್ವರ ನಗರದ  ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ನಡೆದ ವಿಶೇಷ ಪೂಜಾ ಧಾರ್ಮಿಕ ಕಾರ್ಯಕ್ರಮದ ನಿಮಿತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದ ಸ್ಥಳೀಯ ಅನುಪಲ್ಲವಿ ಸಂಗೀತ ಕಲಾ ಸಂಸ್ಥೆ ಮತ್ತು ಕಲಾವಿದ ಶ್ರೀಧರ ಚಲವಾದಿ ಸಂಗಡಿಗರು ಆಯೋಜಿಸಿದ್ದ ಸುಗಮ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಕಲೆ, ಸಾಹಿತ್ಯ ಮತ್ತು ಸಂಗೀತ ಈ ದೇಶದ ಸಂಸ್ಕೃತಿಯ ಕಲೆಗಳು ಅವುಗಳನ್ನು ಮೂಲೆಗುಂಪು ಮಾಡದೆ ಕಲಾವಿದರನ್ನು ಉಳಿಸಿ ಅವರಲ್ಲಿರುವ ಮಹತ್ವಪೂರ್ಣ ಕಲೆಯನ್ನು ಭವಿಷ್ಯದ ಜನಾಂಗಕ್ಕೆ ಹಸ್ತಾಂತರಿಸುವ ಕಾರ್ಯದಲ್ಲಿ ಪ್ರತಿಯೊಬ್ಬ ಸಂಗೀತ ಪ್ರೇಮಿಗಳು ಪ್ರೋತ್ಸಾಹಿಸಲು ಮುಂದಾಗಬೇಕು ಅಂದಾಗ ಮಾತ್ರ ಇತಿಹಾಸದ ಕಲೆಗಳು ಉಳಿದು ಬೆಳೆಯಲು ಸಾಧ್ಯ ಎಂದರು. 

ಅಯ್ಯಪ್ಪಸ್ವಾಮಿ ದೇವಸ್ಥಾನದ ಅಧ್ಯಕ್ಷ  ಮಂಜುನಾಥ ಸ್ವಾಮಿ ಮಣಿಗಾರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗುರುಸ್ವಾಮಿ ಕಲ್ಲಪ್ಪ ಸ್ವಾಮಿ ಎಂ.ಜಿ, ರಾಜಶೇಖರ ಸಿಂಧೂರ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. 

ಸುಗಮ ಸಂಗೀತ ಕಲಾವಿದರಾದ ಯಶೋಧಾ ಜಿ ಗುಡಗುಡಿ ಮತ್ತು ಶ್ರೀಧರ ಚಲವಾದಿ ಸಂಗಡಿಗರಿಂದ ನಡೆದ ಸುಗಮ ಸಂಗೀತ ಕಾರ್ಯಕ್ರಮವು ಸೇರಿದ ಸಹಸ್ರಾರು ಸಂಗೀತ ಪ್ರೇಮಿಗಳ ಮತ್ತು ಶ್ರೀಸ್ವಾಮಿಯ ಭಕ್ತರ ಗಮನ ಸೆಳೆದರು. 

ಸುದ್ದಿ ಓದಿ