ಕಡು ಬಡವರಿಗೆ ಮನೆ ಕಟ್ಟಿಕೊಳ್ಳಲು ಆರ್ಥಿಕ ಸಹಾಯ
ಶಿಗ್ಗಾವಿ 04: ನೆರೆಗೆ ಮನೆ ಕಳೆದುಕೊಂಡ ತಾಲೂಕಿನ ಏಳು ಜನ ಬಡವರಿಗೆ ಮನೆ ಕಟ್ಟಿಕೊಳ್ಳಲು ತಲಾವೊಬ್ಬರಿಗೆ 50ಸಾವಿರ ರೂ.ಗಳಂತೆ ಅಂಬುಜಾ ಎಕ್ಸ್‌ಪೋರ್ಟ್ ಕಂಪನಿ ನೀಡಿದ ಚೆಕ್, ಫಲಾನುಭವಿಗೆ ಜಿಲ್ಲಾ ಉಸ್ತುವಾರಿ ಬಸವರಾಜ ಬೊಮ್ಮಾಯಿ ಗುರುವಾರ ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಸಚಿವ ಬೊಮ್ಮಾಯಿ, ನೆರೆಗೆ ಮನೆ ಕಳೆದುಕೊಂಡಿದ್ದ ಫಲಾನುಭವಿಗಳಿಗೆ ಕಾನೂನಾತ್ಮಕವಾಗಿ ಪರಿಹಾರ ಕಲ್ಪಿಸಲಾಗಿಲ್ಲ ಅಂತಹ ಕಡು ಬಡವರಿಗೆ ಮನೆ ಕಟ್ಟಿಕೊಳ್ಳಲು ಆರ್ಥಿಕ ಸಹಾಯ ನೀಡಲು ತಮ್ಮ ಕಂಪನಿ (ಸಿಆರ್) ಅನುದಾನದಲ್ಲಿ ಸಹಾಯ ಮಾಡಿದ್ದಾರೆ ಎಂದು ಕಂಪನಿಗೆ ಕೃತಜ್ಞೆ ಸಲ್ಲಿಸಿದರು. ಕಂಪನಿಯ ಸಹ ಹೃದಯಿಗಳಾದ ಮನೀಷ್, ಸಂದೀಪ ಹಾಗೂ ಉಮೇಶ ಪಾಂಡೆ ಅವರು ಕ್ಷೇತ್ರದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಿಗ್ಗಾವಿ ಸರಕಾರಿ ತಾಲೂಕು ಆಸ್ಪತ್ರೆಗೆ ಐಸಿಯೂ, ಆಕ್ಸಿಜನ್ ಕಾನ್ಸೆಂಟ್ರೇಟರ್‌ಗಳು ದಾನವಾಗಿ ನೀಡಿದ್ದಾರೆ. ಶಿಗ್ಗಾವಿ, ಸವಣೂರು ತಾಲೂಕು ಆಸ್ಪತ್ರೆಗೆ ಆಕ್ಸಿಜನ್ ಜನರೇಟರ್ ನೀಡಲು ಮುಂದಾಗಿದ್ದಾರೆ. ನೆರೆಗೆ ಮನೆ ಕಳೆದುಕೊಂಡವರಿಗೆ ಕಾನೂನಾತ್ಮಕವಾಗಿ ಪರಿಹಾರ ನೀಡಲು ಸಾಧ್ಯವಾಗಿಲ್ಲ ಅಂತಹ 100 ಜನರಿಗೆ ಮುಂದಿನ ದಿನದಗಳಲ್ಲಿ ಮನೆ ಕಟ್ಟಿಕೊಳ್ಳಲು ಆರ್ಥಿಕ ಸಹಾಯ ನೀಡಲು ಕಂಪನಿ ನಿರ್ಣಯಿಸಿದೆ. ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಕಾನ್ಸೆಂಟ್ರೇಟರ್‌ಗಳನ್ನು ನೀಡಿ ಸಹಾಯ ಮಾಡಿದ ಕಂಪನಿಗೆ ಕ್ಷೇತ್ರದ ಜನರ ಪರವಾಗಿ ಸಚಿವರು ಕೃತಜ್ಞತೆ ಸಲ್ಲಿಸಿದರು. ಮನೆ ಕಟ್ಟಿಕೊಳ್ಳಲು ಬಡವರಿಗೆ ಕಡಿಮೆ ದರದಲ್ಲಿ ಸಾಮಾಗ್ರಿ ಪೂರೈಸಲಾಗುವುದು. ಸಿಮೇಂಟ್ ಸಹಾಯ ಮಾಡಲು ಸಿಮೇಂಟ್ ಕಂಪನಿಗೆ ಈಗಾಗಲೇ ಮಾತನಾಡಿದ್ದೇನೆ ಎಂದು ಭರವಸೆ ನೀಡಿದ ಬೊಮ್ಮಾಯಿ, ಕೋವಿಡ್ ಮುಗಿದ ಬಳಕ ಸಿಮೇಂಟ್ ಸಹಾಯ ಮಾಡುವುದಾಗಿ ತಿಳಿಸಿದರು.
ಗುಜರಾತ್ ಅಂಬುಜಾ ಕಂಪನಿ ಸಿಇಓ ಉಮೇಶ ಪಾಂಡೆ ಮಾತನಾಡಿ, ಗುಜರಾತ್ ಗೋವಿನ ಜೋಳ ಕಂಪನಿ ಇಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಸ್ಥಳೀಯರ ಸಹಕಾರದಿಂದ ಸಾಧ್ಯವಾಗಿದೆ. ಹಲುವು ಓಷಧಿಗಳಿಗೆ ಪೂರಕವಾಗಿ ವಸ್ತುಗಳನ್ನು ಕಂಪನಿ ಸಿದ್ಧಗೊಳಿಸುತ್ತಿದೆ ಎಂದರು. ಬರುವ ದಿನದಲ್ಲಿ ಕಂಪನಿ ಇನ್ನಿಷ್ಟು ಬೆಳವಣೆಗೆಗೆ ಸಹಕಾರ ನೀಡಿ. ಕಂಪನಿ ಬಡವರ ಜೊತೆಗಿರುತ್ತದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಬಡ ಜನ ಕಲ್ಯಾಣ ಕಾರ್ಯಗಳಿಗೆ ಸಹಾಯ ಮಾಡಲು ಸಿದ್ಧವಿದೆ ಎಂದರು.
ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ, ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ, ಸದಸ್ಯ ಪರಶುರಾಮ ಸೊನ್ನದ, ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಆನಂದ ಸುಭೇದಾರ, ಶರೀಫ ನದಾಫ್, ಉಧ್ಯಮಿ ರಾಘವೇಂದ್ರ ಮೇಲಗೇರಿ, ಹನುಮಂತಪ್ಪ ಮಾದರ, ಹೊನ್ನಪ್ಪ ಹೂಗಾರ, ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.