ಪಡಿತರ ಚೀಟಿದಾರರಿಗೆ ಇ-ಕೆವೈಸಿ ಮಾಡಲು ಅಂತಿಮ ಅವಕಾಶ
ಕಾರವಾರ :ನ್ಯಾಯಬೆಲೆ ಅಂಗಡಿಗಳಲ್ಲಿ ಇದುವರೆಗೆ ಇ-ಕೆವೈಸಿ ಮಾಡಿಸದೇ ಇರುವ ಪಡಿತರ ಚೀಟಿದಾರರಿಗೆ ಇ-ಕೆವೈಸಿಯನ್ನು ಮಾಡಿಸಿಕೊಳ್ಳಲು ಅಂತಿಮ ಕಾಲವಕಾಶ ನೀಡಲಾಗಿದೆ.
2021 ರ ಆಗಸ್ಟ್ ಮಾಹೆಯಲ್ಲಿ ಇ-ಕೆವೈಸಿ ಮಾಡಲು ಕೊನೆಯ ಅವಕಾಶ ನೀಡಲಾಗಿದ್ದು ನ್ಯಾಯಬೆಲೆ ಅಂಗಡಿಗಳಲ್ಲಿ ಅಗಸ್ಟ್ 1ರಿಂದ 10ರ ವರೆಗೆ ಇ-ಕೆವೈಸಿಯನ್ನು ಮಾಡಲಾಗುವುದು. ನಂತರ ಇ-ಕೆವೈಸಿ ಮಾಡದೇ ಪಡಿತರ ಚೀಟಿದಾರರ ಪಡಿತರವನ್ನು ತಡೆಹಿಡಿಯಲಾಗುವುದು.
ಇ-ಕೆವೈಸಿ ಸಂಗ್ರಹಣೆಗೆ ಯಾರಾದರೂ ಹಣ ಕೇಳಿದ್ದಲ್ಲಿ ಅಥವಾ ದೂರುಗಳಿದ್ದಲ್ಲಿ ಮತ್ತು ಇತರೆ ಮಾಹಿತಿಗೆ ಸಂಬಂಧಪಟ್ಟಂತೆ ಆಯಾ ತಾಲೂಕು ತಹಶೀಲ್ದಾರರು ಮತ್ತು ಜಿಲ್ಲಾ ಆಹಾರ ್ಘ ನಾಗರಿಕ ಸರಬರಾಜು ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಆಹಾರ ್ಘ ನಾಗರಿಕ ಸರಬರಾಜು ಇಲಾಖೆ ಕಾರವಾರ ಕಚೇರಿ ದೂರವಾಣಿ ಸಂಖ್ಯೆ 08382-226464. ಹಾಗೂ ಕಾರವಾರ ತಹಶೀಲ್ದಾರ ಕಚೇರಿ 9448609712, 08382-226331, ಅಂಕೋಲಾ ತಹಶೀಲ್ದಾರ ಕಚೇರಿ, 9845397078 08388-230243, ಕುಮಟಾ 9481557642, 08386-222054, ಹೊನ್ನಾವರ 9980135812, 08387-220262, ಭಟ್ಕಳ 8105180342, 08385-226422, ಶಿರಸಿ 9739717754, 08384-226383, ಸಿದ್ದಾಪುರ 8861641607, 08389-230127, ಯಲ್ಲಾಪುರ 8867113551, 08419-261129, ಮುಂಡಗೋಡ 9448893878, 08301-222122, ಹಳಿಯಾಳ 7483441715, 08284-220134, ದಾಂಡೇಲಿ 7676781182 , ಜೋಯಿಡಾ 9448825842, 08383-282723.ಅನ್ನು ಸಂಪರ್ಕಿಸಬಹುದಾಗಿದೆ ಎಂದು ಆಹಾರ ್ಘ ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಮಂಜುನಾಥ ರೇವಣಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.