ಐದನೇ ವರ್ಷದ ಸಸ್ಯಶ್ರಾವಣ ಕಾರ್ಯಕ್ರಮ
ಶಿಗ್ಗಾವಿ 26: ಆಧುನಿಕತೆ ಬೆಳೆದಂತೆ ರಸ್ತೆ ಕೈಗಾರಿಕೆ. ವಸತಿ ವಿನ್ಯಾಸ ಅಭಿವೃದ್ಧಿ ಹೆಸರಿನಿಂದ ತಿಳುವಳಿಕೆ ಇರುವವರಿಂದಲೇ ಗಿಡಮರಗಳ ಸಾಮೂಹಿಕ ಮಾರಣ ಹೋಮ ನಡೆಯುತ್ತಿದೆ. ತಂಪು ಪರಿಸರದ ಗಿಡಮರಗಳು, ಕಾಡು ಇಲ್ಲದೇ ನಾಡು, ನಾಗರೀಕತೆ ನಾಶವಾಗುತ್ತಿದ್ದೆ ಪರಿಸರ ಸಮತೋಲನ ಕಾಯ್ದುಕೊಳ್ಳಲು ಮತ್ತೆ ಸಸ್ಯ ಶ್ರಾವಣದಂತಹ ಸಮೂದಾಯ ಭಾಗಿತ್ವದ ಸಮರೋಪಾಧಿಯಲ್ಲಿ ಮತ್ತೆ ಪರಿಸರ ರಕ್ಷಣೆ ಮಾಡಬೇಕಾಗಿದೆ ಎಂದು ವಿರಕ್ತಮಠದ ಸಂಗನವಬಸವ ಶ್ರೀಗಳು ಹೇಳಿದರು.
ಐದನೇ ವರ್ಷದ ಸಸ್ಯಶ್ರಾವಣ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಹಳೆಬಂಕಾಪೂರ, ಮೂಕಬಸರೀಕಟ್ಟಿ ಗ್ರಾಮದ ಹಿರಿಯ ಪ್ರಾಥಮಿಕ ಕನ್ನಡ ಗಂಡುಮಕ್ಕಳ ಶಾಲೆಯ ಆವರಣದಲ್ಲಿ ಸಸಿಗಳನ್ನು ವಿತರಿಸಿ ಮಾತನಾಡಿದ ಅವರು ಅತಿವೃಷ್ಠಿ, ಅನಾವೃಷ್ಠಿ, ಮೇಘಸ್ಪೋಟದಂತ ಮಾರಣಾತಿಕ ಪ್ರಾಕೃತಿಕ ಅನಾಹುತಗಳು ಸಂಬವಿಸಿ ನಾಗರೀಕತೆಗಳೇ ನಾಶವಾಗುವ ಸಂದರ್ಬ ಬಂದಿದ್ದು ವಿಚಾರವಂತರು ಒಟ್ಟುಗೂಡಿ ಪರಿಸರ ಸಮತೋಲನೆ ಕಾಯ್ದುಕೊಳ್ಳುವಂತೆ ಪ್ರತಿವರ್ಷ ಗಿಡಮರಗಳನ್ನು ಬೆಳಸಿ ಭೂಮಿ ತಾಪ ತಗ್ಗಿಸಬಹುದಾಗಿದೆ. ಪ್ರಸಕ್ತ ಸಾಲಿನಲ್ಲಿ ಬಿಸನಳ್ಳಿ,ಮುನವಳ್ಳಿ, ಕಲ್ಯಾಣ ನಾರಾಯಣಪೂರ, ಸದಾಶಿವಪೇಠೆ. ಕುರ್ಷಾಪೂರ. ಹತ್ತು ಗ್ರಾಮಗಳಿಗೆ ತೆರಳಿ ಮನೆಮನೆಗೆ ಸಸ್ಯಗಳನ್ನು ಸಾರ್ವಜನಿಕರಿಗೆ ವಿತರಿಸಿ ಸಮೂದಾಯ ಬಾಗೀತ್ವ ಅರಿವು ಮೂಡಿಸುತ್ತಿದ್ದೇವೆ ಎಂದರು.
ಗ್ರಾಮದ ಎಸ್ಡಿಎಂಸಿ ಅಧ್ಯಕ್ಷ ಚನ್ನವೀರಯ್ಯಾ ಚಿಗರಿಮಠ, ನಾಗರಾಜ ಪಾಟೀಲ, ಮಾಲತೇಶ ಬಾವಿಕಟ್ಟಿ, ಮಂಜುನಾಥ ಹಾವೇರಿ. ನಿಂಗಣ್ಣ ದೇವಗಿರಿ, ಶಿಕ್ಷಕ ಗಣೇಶ ಮಾಳಮ್ಮನವರ, ಶಿವಾನಂದ ಸವಣೂರು. ಆರ್. ಎಚ್,ಕೊಪ್ಪದ, ಎಂ.ಸಿ.ಸಿದ್ದನಗೌಡ್ರ ಅಲ್ಲದೇ ಕಲಾವಿದರ ತಂಡದ ಬಸವರಾಜ ಗೊಬ್ಬಿ, ಬಸವರಾಜ ಶಿಗ್ಗಾವಿ ಅಲ್ಲದೇ ಹಲವಾರು ಹಿರಿಯರು, ಮಹಿಳೆಚಿುರು ಶಾಲಾ ಮಕ್ಕಳು ಪಾಲ್ಗೊಂಡಿದ್ದರು.