ಗ್ರಾಹಕರ ಉಳಿವಿಗಾಗಿ ಜಿ.ಎಸ್.ಟಿ ಶುಲ್ಕ ಕಡಿಮೆ ಮಾಡಲು ಆಗ್ರಹಿಸಿ ಕೇಬಲ್ ಟಿ.ವಿ ಆಪರೇಟರ್ಗಳಿಂದ ಉಗ್ರ ಪ್ರತಿಭಟನೆ
ಬಳ್ಳಾರಿ 24: ಕೇಂದ್ರ ಸರಕಾರ ಮತ್ತು ಟ್ರಾಯ್ ಜಂಟಿಯಾದ ಆದೇಶ ಕೇಬಲ್ ಟಿ.ವಿ ಕೇಬಲ್ ಚನಲ್ ವಿಕ್ಷಿಸುವ ಮಾಸಿಕ ಶುಲ್ಕ ಮತ್ತು ಜಿ.ಎ.ಟಿ ದರವನ್ನು ಕಡಿಮೆ ಮಾಡಬೇಕೆಂದು ಆಗ್ರಹಿಸಿ ಸೋಮುವಾರ ನಗರದಲ್ಲಿ ಕೇಬಲ್ಟಿ.ವಿ ಆಪರೇಟರ್ಗಳ ಉಗ್ರಪ್ರತಿಭಟನೆ ಮೆರವಣಿಗೆ ನಡೆಸಿ ಈ ವಿಷಯ ಕುರಿತಾದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ನೀಡಿದರು. ನಗರದ ಬಿಡಿಎಎ ಮೈದಾನದ ಬಳಿಯಿಂದ ಉಗ್ರಪ್ರತಿಭಟನೆಯ ಮೆರವಣಿಗೆ ಆರಂಭಿಸಿ ನೂರಾರು ಕೇಬಲ್ ಟಿ.ವಿ ಆಪರೇಟರ್ಗಳು ಗಡಗಿ ಚನ್ನಪ್ಪ ವೃತ್ತದ ಮೂಲಕ ಕೇಂದ್ರ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಧಿಕಾರಿಗಳ ಕಛೇರಿಗೆ ಆಗಮಿಸಿ ಮನವಿ ಪತ್ರವನ್ನು ಸಲ್ಲಿಸಿದರು.
ಈ ವರೆಗೆ ನಗರ ಪ್ರದೇಶದಲ್ಲಿ 150 ರೂಗಳಿಂದ 200, 250 ರೂಗಳಿಗೆ ಮತ್ತು ಗ್ರಾಮೀಣ ಪ್ರದೇಶದಲ್ಲಿ 100 ಇಂದ 150ರೂಗಳಿಗೆ ನೂರಾರು ಚನಲ್ ಗಳನ್ನು ಗ್ರಾಹಕರಿಗೆ ನೀಡುತ್ತಾ ಬಂದಿದೆ. ಆದರೆ ಮುಂದಿನ ತಿಂಗಳಿಂದ ಕೇಂದ್ರ ಸರಕಾರ ಕೇಬಲ್ ಮೇಲೆ ತನ್ನ ಹಿಡಿತ ಸಾಧಿಸುವ ಜೊತೆಗೆ ಮಾಸಿಕ ಸಾವಿರಾರು ಕೋಟಿ ರೂ ಆದಾಯವನ್ನು ಜಿ.ಎಸ್.,ಟಿ ಮೂಲಕ ಪಡೆಯುವ ಹುನ್ನಾರು ನಡೆಸಿದೆ. ಇದರಿಂದಾಗಿ ಟ್ರಾಯ್ ಗ್ರಾಹಕರು ನಮಗೆ ಇಷ್ಟ ಬಂದ ಚಾನಲ್ಗಳನ್ನು ಆಯ್ಕೆ ಮಾಡಿಕೊಳ್ಳಬಹುದೆಂದು ತಿಳಿಸಿದ್ದು. ಇಗ ನಾವು ನೀಡುತ್ತಿರುವ ಚಾನಲ್ ಗಳನ್ನು ನೋಡಬೇಕೆಂದರೆ 500 ರೂಗಳಿಂದ 600 ರೂ ಗಳು ಕೊಡಬೇಕಾಗುತ್ತದೆ. ಕನಿಷ್ಠ 1 ಬಾಷೆಯ ಫೆ ಚಾನಲ್ ನ್ನು ನೋಡಬೇಕೆಂದರು 250 ರೂ ಕೊಡಬೇಕಾಗುತ್ತದೆ. ದೂರದರ್ಶನ ಮತ್ತು ಉಚಿತ ಚಾನಲ್ ಗಳಿಗಷ್ಟೆ ನೋಡಲು ಸಹ 130 ರೂ ಜೊತೆಗೆ ಶೇ.18 ರಷ್ಟು ಜಿ.ಎಸ್.ಟಿ ಪಾವತಿಸಬೇಕಾಗುತ್ತದೆ. ಇದು ಗ್ರಾಹಕರು ಟಿ.ವಿಗಳ ಮೂಲಕ ಮನೆಯಲ್ಲೇ ಮನೋರಂಜನೆ ಪಡೆಯಲು ಹೆಚ್ಚಿನ ಹೊರೆಯಾಗಲಿದೆ ಎಂದರು. ಇನ್ನು ಈ ಹೊಸ ಪದ್ದತಿ ಜಾರಿಗೆಯಿಂದ ಕೇಬಲ್ ಟಿ.ವಿ ಆಪರೇಟರ್ಗಳಿಗೆ ಹೆಚ್ಚಿನ ಲಾಭಂಶವಿರುವುದಿಲ್ಲ. ಫೇ ಚಾನಲ್ ಗೆ ಪಾವತಿಸುವ ಹಣದಲ್ಲಿ ಕೇಬಲ್ ಟಿ.ವಿ ಆಪರೇಟರ್ಗಳಿಗೆ ಶೇ.20ರಷ್ಟು ಮಾತ್ರ ಬರಲಿದೆ. ಇದರಿಂದ ಕೇಬಲ್ ನಿರ್ವಹಣೆ ಮಾಡಲು ಕಷ್ಟವಾಗುತ್ತದೆ. ಅದಕ್ಕಾಗಿ ಕೇಂದ್ರ ಸರಕಾರದ ಮೂಲ ದರವನ್ನು ಮತ್ತು ಜಿ.ಎಸ್.ಟಿ ತೆರಿಗೆಯನ್ನು ಶೇ.18ರಿಂದ ಶೇ.5ಕ್ಕೆ ಇಳಿಸಬೇಕು. ಅಲ್ಲದೇ ಗ್ರಾಹಕರ ಅನುಕೂಲಕ್ಕಾಗಿ ಸೆಟ್ ಆಫ್ಬಾಕ್ಸಗಳ ಪೊರ್ಟಬಲಿಟಿ ಮಾಡಬೇಕು. ಈ ಹೊಸ ನಿತಿ ಜಾರಿಗೆಗೆ ಇನ್ನಷ್ಟು ಕಾಲವಕಾಶ ನೀಡಬೇಕು. ಜೊತೆಗೆ ಕೇಬಲ್ ಟಿ.ವಿ ಆಪರೇಟರ್ಗಳಿಗೆ ತರಬೇತಿ ನೀಡಬೇಕು ಎಂದು ಉಗ್ರ ಪ್ರತಿಭಟನೆಯ ಮೆರವಣಿಗೆಯ ಮೂಲಕ ಒತ್ತಾಯಿಸಲಾಯಿತು. ಈ ಪ್ರತಿಭಟನೆಯಲ್ಲಿ ಕೇಬಲ್ ಟಿ.ವಿ ಆಪರೇಟರ್ಗಳಾದ ಚಂದ್ರಮೌಳಿ, ರಾಜೇಶ ಕಾರ್ವ, ರುದ್ರಯ್ಯ, ಚೌದರಿ, ರಾಮಮೋಹನಗೌಡ, ಶ್ರೀದರ್, ಮಂಜುನಾಥ, ಜಮಿರ್ಅಹ್ಮದ್, ಸತೀಶಕುಮಾರ, ಕುಮಾರಸ್ವಾಮಿ, ರಾಘವೇಂದ್ರ.ಬಿ, ಲೋಕೆಶ, ಭಾಷ್ಕರ್, ಭದ್ರಿ, ಸೇರಿದಂತೆ ನೂರಾರು ಕೇಬಲ್ ಟಿ.ವಿ ಆಪರೇಟರ್ಗಳು ಜಿಲ್ಲೆಯ ಮತ್ತು ತಾಲೂಕುಗಳಿಂದ ಆಗಮಿಸಿ ಪ್ರತಿಭಟನೆ ನಡೆಸಿದರು.