ರಜೆಯನ್ನು ವಿದ್ಯಾರ್ಥಿಗಳೊಂದಿಗೆ ಕಳೆದ ಕ್ಷೇತ್ರ ಶಿಕ್ಷಣಾಧಿಕಾರಿ
ಗೋಕಾಕ 17: ರಜೆಯಂದರೆ ಸಾಕು ವಿಶ್ರಾಂತಿ, ಪಿಕನಿಕ,ಪ್ರವಾಸ,ಮಾರ್ಕೆಟ್ ಎಂದೆಲ್ಲಾ ಯೋಜನೆರೂಪಿಸುವವರ ನಡುವೆ ಸ್ಥಳೀಯ ಗೋಕಾಕ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳೆಗಾರ ಅವರು “ರಜಾ ವಿತ್ತ ಮಜಾ” ಎಂಬ ವಿನೂತನ ಕಾರ್ಯಕ್ರಮದೊಂದಿಗೆ ಸ್ಥಳೀಯ ಪ್ರತಿಷ್ಠಿತ ಶ್ರೀ ಶಂಕರಲಿಂಗ ಪ್ರೌಢ ಶಾಲೆಯ ಎಸ್.ಎಸ್.ಎಲ್.ಸಿ ಮಕ್ಕಳೊಂದಿಗೆ ತಮ್ಮ ದಿನವನ್ನು ಕಳೆದರು.
ತಿಳಿಹಾಸ್ಯ ಕಥೆ ಹಿಉಪಕತೆ ದೃಷ್ಟಾಂತಗಳನ್ನು ಹೇಳುತ್ತಾ ಮಕ್ಕಳಲ್ಲಿ ರಂಜನೆಯ ಜೊತೆ-ಜೊತೆಗೆ ಮಕ್ಕಳಲ್ಲಿ ಹುದಗಿರುವ ಛಲ,ಆತ್ಮ-ವಿಶ್ವಶಸ,ಸ್ವ ನಂಬಿಕೆ ಕಲಿಕಾ ಆಸಕ್ತಯನ್ನು ಹೆಚ್ಚಿಸುವಂತಹ ಮಾತುಗಳನ್ನಾಡಿ ಪ್ರೇರಣೆ ತುಂಬಿದರು ಅನೇಕ ಸಾಧಕರ ಕಥೆಯನ್ನು ಹೇಳಿ ಅವರ ಸಾಧನೆಯ ಮಾರ್ಗವನ್ನು ಮನಮುಟ್ಟುವಂತೆ ತಿಳಿಸುವಲ್ಲಿ ಯಶಸ್ಸಿಯಾದರು ಮೂರು ಗಂಟೆಯವರೆಗೆ ನಡೆದ ಈ ಸಂವಾದದಲ್ಲಿ ಮಕ್ಕಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಜೊತೆಗೆ ಮನಬಿಚ್ಚಿ ಮಾತನಾಡಿ ಪ್ರಶ್ನೇಗಳನ್ನು ಕೇಳಿ ಉತ್ತರ ಪಡೆದುಕೊಂಡರು ಒಟ್ಟು 50 ವಿದ್ಯಾರ್ಥಿಗಳಲ್ಲಿ 48 ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.
ಮುಖ್ಯೋಪಾಧ್ಯಾಯ ಆರ್.ಎಸ್.ಹಬ್ಬಳೆ ಶಿಕ್ಷಕರುಗಳಾದ ರಾಮಚಂದ್ರ ಕಾಕಡೆ, ಆರ್.ಬಿ. ಹಿರೇಮಠ, ಅಲ್ಲದೆ ಸಂಸ್ಥೆಯ ಅಧ್ಯಕ್ಷರಾದ ಬಿ.ಎಂ.ಹಿಂಡಿಹೊಳಿ,ವ್ಹಿ.ಬಿ.ಗಚ್ಚಿ ಉಪಸ್ಥಿತರಿದ್ದರು