ಕಂಪ್ಲಿ

ಗೊಬ್ಬರ ಬೆಲೆ ಹೆಚ್ಚಳ : ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಯೂತ್ ಕಾಂಗ್ರೆಸ್ ಪ್ರತಿಭಟನೆ

ಗೊಬ್ಬರ ಬೆಲೆ ಹೆಚ್ಚಳ : ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಯೂತ್ ಕಾಂಗ್ರೆಸ್ ಪ್ರತಿಭಟನೆ

ಗೊಬ್ಬರ ಬೆಲೆ ಹೆಚ್ಚಳ : ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಯೂತ್ ಕಾಂಗ್ರೆಸ್ ಪ್ರತಿಭಟನೆ  

ಕಂಪ್ಲಿ 31: ಗೊಬ್ಬರ ಬೆಲೆ ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ, ಕಂಪ್ಲಿ ವಿಧಾನಸಭಾ ಕ್ಷೇತ್ರ ಮತ್ತು ಕಂಪ್ಲಿ ಬ್ಲಾಕ್ ಯುವ ಕಾಂಗ್ರೇಸ್ ಸಮಿತಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಪ್ರತಿಭಟಿಸಿ, ನಂತರ ತಹಶೀಲ್ದಾರ್ ಮಂಜುನಾಥ ನಾಯಕಗೆ ಮನವಿ ಪತ್ರ ಸಲ್ಲಿಸಿದರು.ಕವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ರಿಯಾಜ್ ಅಹಮ್ಮದ್ ಮಾತನಾಡಿ, ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿದ ಬಿಜೆಪಿ ಆರಂಭದಿಂದಲೂ ಜನಸಾಮಾನ್ಯರ ಮೇಲೆ ಗದಾ ಪ್ರಹಾರ ಮಾಡುತ್ತಲೇ ಬಂದಿದೆ. ಇದೀಗ ರೈತರಿಗೆ ಬೆಳೆಗಳಿಗೆ ವಿತರಿಸುವ ರಸಗೊಬ್ಬರದ ಬೆಲೆಗಳನ್ನು ಹೆಚ್ಚಿಸಿರುವುದನ್ನು ಯುವ ಕಾಂಗ್ರೆಸ್ ಘಟಕ ತೀವ್ರವಾಗಿ ಖಂಡಿಸುತ್ತಿದೆ. ಕಳೆದ ವರ್ಷ 15 15 15 ರಸಗೊಬ್ಬರದ ಬೆಲೆ 1250 ಈ ವರ್ಷ 1650 ಗಳಿಗೆ ಹೆಚ್ಚಳವಾಗಿದೆ.  15 15 15 ಗೊಬ್ಬರ ಬೆಲೆ 1470 ರೂಪಾಯಿ ಈ ವರ್ಷ 1650 ದರ ಹೆಚ್ಚಿದೆ. 10 26 26 ಕೆಳದ ವರ್ಷ 1470 ಗಳಿದ್ದು, ಈಗ 1725 ಕ್ಕೆ ಏರಿಕೆಯಾಗಿದೆ. 1450 ರೂಪಾಯಿ ಇದೆ. 20 20 0 13 ರ ಬೆಲೆ 1300 ಗಳಿಗೆ 12 32 16 ರ ಬೆಲೆ 1470 ಗಳಿದ್ದು, 1720 ರೂ  ಏರಿಕೆಯಾಗಿದೆ. 20 20 20 ರ ಬೆಲೆ 1020 ಗಳಿಗೆ 1360 ರೂ ಗಳಿಗೆ ಮತ್ತು ಯೂರಿಯಾ ಬೆಲೆ ರೂ. 266 ರಿಂದ 280 ರೂಪಾಯಿ ಹಾಗೂ ಎಂಓಪಿ ಪೊಟ್ಯಾಪ್ 1550 ರಿಂದ 1750 ಕ್ಕೆ ರೂ. 200 ಹೆಚ್ಚಳ ಮಾಡಿದೆ. ರಸಗೊಬ್ಬರಗಳ ಬೆಲೆ ಹೆಚ್ಚಳ ಮಾಡುತ್ತಿರುವ ಕೇಂದ್ರ ಬಿ.ಜೆ.ಪಿ. ಸರ್ಕಾರ ರೈತರ ಮೇಲೆ ಗದ ಪ್ರಯೋಗ ಮಾಡುತ್ತಿದ್ದೆ. ಇದು ಖಂಡನೀಯವಾಗಿದೆ. ರೈತರಿಗೆ ಕಿಸಾನ್ ಸಮ್ಮಾನ್ ಎಂದು ವರ್ಷಕ್ಕೆ 4000 ಗಳನ್ನು ನೀಡಿ ಹಿಂಬಾಗಿಲಿನಿಂದ ಗೊಬ್ಬರ ಓಷದಿ ಬಿತ್ತನೆ ಬೀಜಗಳ ಬೆಲೆ ಏರಿಕೆ ಮಾಡುವ ಹಣವನ್ನು ರೈತರಿಂದ ವಸೂಲಿ ಮಾಡುತ್ತಿದೆ. ಮಳೆಯ ಅತೀವೃಷ್ಠಿ ಮತ್ತು ಅನಾವೃಷ್ಟಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ ಬೆಳೆ ಹಾನಿ ಮುಂತಾದ ಕಾರಣಗಳಿಗೆ ರೈತರು ಆತ್ಮಹತ್ಯೆಗಳು ನಡೆಯುತ್ತದೆ. ಇದರ ಮದ್ಯ ಕೇಂದ್ರ ಬಿ.ಜೆ.ಪಿ. ಸರ್ಕಾರ ಏಕಾ ಏಕಿ ಅವೈಜ್ಞಾನಿಕವಾಗಿ ರಸಗೊಬ್ಬರಗಳ ಬೆಲೆ ಏರಿಸಿದ್ದಾರೆ. ಮೊದಲೇ ಸಂಕಷ್ಟದಲ್ಲಿರುವ. ಕೇಂದ್ರ ಸರ್ಕಾರವು ರಸಗೊಬ್ಬರಗಳ ಬೆಲೆ ಮಾಡದಿದ್ದಲ್ಲಿ ಯುವ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಆದ್ದರಿಂದ ಗೌರವಾನ್ವಿತ ರಾಷ್ಟ್ರಪತಿಗಳು ಮದ್ಯ ಪ್ರವೇಶಿಸಿ ಕೇಂದ್ರ ಸರ್ಕಾರ ಹೆಚ್ಚಳ ಮಾಡುತ್ತಿರುವ ರಸಗೊಬ್ಬರಗಳ ಬೆಲೆ ಇಳಿಕೆ ಮಾಡುವಂತೆ ಸೂಕ್ತ ನಿರ್ದೇಶನ ಮಾಡಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಸದಸ್ಯರಾದ ಸಿ.ಆರ್‌.ಹನುಮಂತ, ವೀರಾಂಜೀನೀಯಲು, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಕಂಪ್ಲಿ ಬ್ಲಾಕ್ ಯುವ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಗುರು, ಮುಖಂಡರಾದ ಬಿ.ಸಿದ್ದಪ್ಪ, ಕರೇಕಲ್ ಮನೋಹರ, ಸೈಯದ್‌ಉಸ್ಮಾನ ರಘುನಾಯಕ, ಜಾಫರ್, ಪೇಂಟರ್ ಮಸ್ತಾನ್, ಸುಧಾಕರ, ನಾಗರಾಜ, ರುದ್ರಮನಿ, ಹುಲುಗಪ್ಪ,  ಯು.ಖಾಜಾ ಹುಸೇನ್, ಸಿರಾಜ್, ಜಿಲಾನ್, ಆದಿಲ್ ಭಾಷಾ, ಮುಸ್ತಾಕ್, ಶಫಿ, ವಾಹೀದ್, ರಾಜ, ಮಹ್ಮದ್, ಮಂಜು, ಮೈಬು, ರಾಘು, ಸಾದಿಕ್, ವಿಬಿ ನಾಗರಾಜ, ಲಬೇದ್ ವಿರೇಶ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು. 


ಸುದ್ದಿ ಓದಿ