‘ಚುನಾವಣೆಗಳಲ್ಲಿ ಮಹಿಳಾ ಸದಸ್ಯರಿಗೆ ಪ್ರಾಶಸ್ತ್ಯ ಸಿಗುತ್ತಿಲ್ಲ’
ಲೋಕದರ್ಶನ ವರದಿ
ಶಿಗ್ಗಾವಿ 02: ಸ್ಥಳೀಯ ಚುನಾವಣೆಗಳಲ್ಲಿ ಮಹಿಳಾ ಸದಸ್ಯರಿಗೆ ಪ್ರಾಶಸ್ತ್ಯ ಸಿಗುತ್ತಿಲ್ಲ, ಈ ಬಿಜೆಪಿ ಸರ್ಕಾರದಿಂದ ಏನನ್ನೂ ನೀರೀಕ್ಷಿಸಲು ಸಾಧ್ಯವಿಲ್ಲ ಎಂದು ಎಐಸಿಸಿ ಯೂತ್ ಮಹಿಳಾ ಕಾರ್ಯದರ್ಶಿ ಸ್ವಾತಿ ಮಾಳಗಿ ಹೇಳಿದರು.
ಶಿಗ್ಗಾವಿ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ಥಳೀಯ ಸಂಸ್ಥೆಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಜೊತೆಗೆ ಶೇ. 50 ರಷ್ಟು ಮಹಿಳಾ ಸದಸ್ಯರಿರುವ ಸ್ಥಳೀಯ ಚುನಾವಣೆಗಳಲ್ಲಿ ಸರಿಯಾದ ಪ್ರಾಶಸ್ತ್ಯ ಸಿಗಬೇಕಿದೆ, ಸ್ಥಳೀಯ ಚುನಾವಣೆಯಲ್ಲಿ ಆಯ್ಕೆಯಾದ ಮಹಿಳಾ ಸದಸ್ಯರಿಗೆ ಅಧಿಕಾರಿಗಳಿಂದ ಸ್ಥಳೀಯವಾಗಿ ಪ್ರಾಶಸ್ಥ್ಯ ಸಿಗುತ್ತಿಲ್ಲ, ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ, ತಾಲೂಕಿನಲ್ಲಿ ನರೇಗಾ ಬಿಲ್ ಬಾಕಿ ಇವೆ, ಬಿದ್ದ ಮನೆಗಳ ಪರಿಹಾರ ಕಾರ್ಯ ಇನ್ನೂ ಆಗಿಲ್ಲ, ಹೊಸದಾಗಿ ಮತ್ತೆ ಅಕಾಲಿಕ ಮಳೆಗೆ 1680 ಮನೆಗಳು ಬಿದ್ದಿವೆ, ಈ ಎಲ್ಲ ಸಮಸ್ಯೆಗಳಿಗೆ ಸ್ಪಂದನೆಯೇ ಇಲ್ಲವಾಗಿದೆ, ಖಂಡಿಸುವ ಬದಲಾಗಿ ಮಹಿಳೆಯರಿಗೆ ಅವಮಾನಿಸಲಾಗುತ್ತಿದೆ ಆದ್ದರಿಂದ ಇಂದು ವಿ.ಪ ಚುನಾವಣೆಯಲ್ಲಿ ಮತದಾನ ಮಾಡುತ್ತಿರುವ ಮಹಿಳಾ ಸದಸ್ಯರು ಅಭಿವೃದ್ದಿಗೆ ಜೈ ಎನ್ನುವ ನಿಟ್ಟಿನಲ್ಲಿ ರಾಜಕಾರಣದಲ್ಲಿ ಪ್ರಭುದ್ದ ರಾಜಕಾರಣಿ ಎನಿಸಿಕೊಂಡಿರುವ ಸಲೀಂ ಅಹ್ಮದ್ ಅವರ ರಾಜಕಾರಣದ ಅನುಭವವನ್ನು ಪರಿಗಣನೆಗೆ ತೆಗೆದುಕೊಂಡು ಮತದಾನ ಮಾಡುವ ಅವಶ್ಯಕತೆ ಇದೆ ಎಂದರು.
ಕಾಂಗ್ರೇಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಪಾಟೀಲ್ ಮಾತನಾಡಿ ವಿ. ಪ ಚುನಾವಣೆ ಅಭ್ಯರ್ಥಿ ಅಲೀಂ ಅಹ್ಮದ ಅವರ ಗೆಲವು ನಿಶ್ಚಿತ ಅಲ್ಲದೆ ಅವರು ಪ್ರಥಮ ಪ್ರಶ್ಯಸ್ಥದಲ್ಲಿ ಗೆದ್ದು ಬರಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಸಂತಾ ಬಾಗೂರ, ಮಮತಾಜ ಗೋಟಗೋಡಿ, ಕಾಂಜನಾ ಗಾಟಗೆ, ಶಕ್ಕುಬಾಯಿ ಗೊಟಗೋಡಿ, ಮುದ್ದಮ್ಮ ವಡ್ಡರ, ನಸ್ರೀನಾಬಾನು ತಿಮ್ಮಾಪೂರ, ಮೈಮುನ್ನಿಸಾ ಲಕ್ಷೇಶ್ವರ ಸೇರಿದಂತೆ ಇತರರು ಇದ್ದರು.