ಮಹಿಳೆಯರಿಗೆ ಸನ್ಮಾನ
ಶಿಗ್ಗಾವಿ 09: ಪಟ್ಟಣದ ತಾಲೂಕ ಮಟ್ಟದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆಸ್ಪತ್ರೆಯಲ್ಲಿರುವ ಎಲ್ಲ ಗೌರವ್ಹಾನಿತ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ. ಹನುಮಂತಪ್ಪ ಪಿ.ಹೆಚ್, ತಜ್ಞ ವೈದ್ಯರಾದ ಡಾ. ಲಕ್ಷ್ಮಣ ನಾಯಕ, ಡಾ. ಗುರುರಾಜ, ಡಾ. ಸುಭಾಸ ಲೋಖ್ರೆ, ಡಾ.ವಿವೇಕ ಜೈನಕೇರಿ, ಡಾ. ಮಹೇಶ ಜಹದವರ, ಡಾ. ತಬುಸುಮ್, ಡಾ.ವಿಧ್ಯಾವತಿ ಹಾಗೂ ಪ್ರಭಾರಿ ಶುಶ್ರೂಷಾ ಅಧೀಕ್ಷರಾದ ಆರ್ ಸಾರಮ್ಮ, ಹಿರಿಯ ಶುಶ್ರೂಷಾ ಅಧಿಕಾರಿ ಉಮಾ ಮುಳಗುಂದ, ವನಿತಾ ಕುರಂದವಾಡ, ಶಕುಂತಲಾ, ಯಶೋದಾ, ಸುಧಾ, ರತ್ನ ಕಮ್ಮಾರ, ನೀಲಮ್ಮ ಹಿರೇಮಠ, ಸೇರಿದಂತೆ ಆಸ್ಪತ್ರೆಯ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.