ನೂತನ ಎಪಿಎಂಸಿ ಪದಾಧಿಕಾರಿಗಳಿಗೆ ಸನ್ಮಾನ
ಯರಗಟ್ಟಿ 07: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ನಾಮನಿರ್ದೇಶಿತ ಅಧ್ಯಕ್ಷರಿಗೆ ಹಾಗೂ ಸರ್ವಸದ್ಯರಾಗಿ ಆಯ್ಕೆಯಾದ ಹಿನ್ನಲೆ ಅಭಿನಂದನಾ ಸಮಾರಂಭ ಎಪಿಎಂಸಿ ಸಭಾಭವನದಲ್ಲಿ ಜರುಗಿತು.
ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಶಾಸಕ ವಿಶ್ವಾಸ ವೈಧ್ಯ ಯರಗಟ್ಟಿ ಕೃಷಿ ಉತ್ಪನ್ನ ಮಾರುಕಟ್ಟೆಗೆ 2 ಕೋಟಿ 50 ಲಕ್ಷ ಅನುದಾನ ಮಂಜೂರಾತಿಗಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಶೀಘ್ರದಲ್ಲಿ ಎಪಿಎಂಸಿ ಅಭಿವೃದ್ಧಿ ಮಾಡಲಾಗುವುದು. ಹಾಗೂ ಹಂತ ಹಂತವಾಗಿ ಯರಗಟ್ಟಿ ನೂತನ ತಾಲೂಕನ್ನು ಅಭಿವೃದ್ಧಿಮಾಡಲಾಗುವುದು ಮತ್ತು ಶೀಘ್ರವೇ ಎಲ್ಲಾ ತಾಲೂಕು ಕಛೇರಿಗಳನ್ನು ಮಾಡಲಾಗುವುದು ಎಂದು ಹೇಳಿದರು
ಎಪಿಎಂಸಿ ನಾಮನಿರ್ದೇಶಿತ ಅಧ್ಯಕ್ಷರಾಗಿ ನೀಲಕಂಠ ಶಿದಬನ್ನವರ, ಉಧ್ಯಾಕ್ಷರಾಗಿ ಬಸವರಾಜ ಆರಿಬೆಂಚಿ, ನಾಮನಿರ್ದೇಶಿತ ಸದಸ್ಯರುಗಳಾಗಿ ಬನಪ್ಪಗೌಡ ಬಿ.ಪಾಟೀಲ, ಮಹಾದೇವ ದಾಸಪ್ಪನವರ, ಮುಬಸೀರ ಬಾಗವಾನ, ಬಸವರಾಜ ಮಾಳಕ್ಕನವರ, ಸಿದ್ದಾರೂಢ ಬಿಲಕಂಚಿ, ಸುಶೀಲಾ ಖಂಡ್ರಿ, ರೇಖಾ ಯರಡ್ಡಿ, ಮೊಹ್ಮದರಫೀ ದಿಲಾವರನಾಯ್ಕ ಆಯ್ಕೆಯಾದ ಹಿನ್ನೆಲೆ ಶಾಸಕರು ಇವರನ್ನು ಸನ್ಮಾನಿಸಲಾಯಿತು.
ನಿಖಿಲ ದೇಸಾಯಿ, ರಾಜಶೇಖರ ಖಾರದಗಿ, ಆರ್. ಬಿ. ರೆಬ್ಬನ್ನವರ, ಮಲಿಕಸಾಬ ಬಾಗವಾನ, ಮಾಜಿ ಜಿ. ಪಂ. ಸದಸ್ಯ ಫಕ್ಕೀರ್ಪ ಹದ್ದನ್ನವರ, ಅಶ್ವಥ ವೈಧ್ಯ, ಮಹಾಂತೇಶ ಉಪ್ಪಿನ, ನಿಖಿಲ ಪಾಟೀಲ, ಸುರೇಶ ಭಜಂತ್ರಿ, ಪ್ರಕಾಶ ವಾಲಿ, ಉಮೇಶ ಮಾಗುಂಡನ್ನವರ, ಟಿ. ಟಿ. ಟೋಪೋಜಿ, ಸುರೇಶ ಬಡಗಿಗೌಡ್ರ ಹಾಗೂ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಸೇರಿದಂತೆ ಅನೇಕರು ಇದ್ದರು.