ತಾಳಿಕೋಟಿ

ಸಮಾಜ ಸೇವಕ ಆನಂದ ದೊಡಮನಿಗೆ ಸನ್ಮಾನ

ಸಮಾಜ ಸೇವಕ ಆನಂದ ದೊಡಮನಿಗೆ ಸನ್ಮಾನ

ತಾಳಿಕೋಟಿ 24: ಸಮಾಜ ಸೇವಕ ಹಾಗೂ ದೇ.ಹಿಪ್ಪರಗಿ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ಆನಂದಗೌಡ .ಭೀ. ದೊಡಮನಿ ಇವರನ್ನು ಚಬನೂರು ಗ್ರಾಮದಲ್ಲಿ ಜರುಗಿದ ಧರ್ಮ ಸಭೆ ಸಮಾರಂಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. 

ಇತ್ತೀಚಿಗೆ ಸುಕ್ಷೇತ್ರ ಚಬನೂರು ಗ್ರಾಮದಲ್ಲಿ ಲಿಂಗೈಕ್ಯ ಪರಮಪೂಜ್ಯ ಕಾಸಯ್ಯಸ್ವಾಮಿ ಹಿರೇಮಠ ಇವರ 18ನೇ ವರ್ಷದ ಪೂಣ್ಯಾರಾಧನೆ, ಪ್ರವಚನ ಹಾಗೂ ಧರ್ಮ ಸಭೆಯಲ್ಲಿ ಸಮಾಜ ಸೇವಕ ಕಾಂಗ್ರೇಸ್ ಮುಖಂಡ ಆನಂದಗೌಡ ಭೀ ದೊಡಮನಿ ಇವರನ್ನು ಅವರು ಮಾಡುತ್ತಿರುವ ಸಮಾಜ ಸೇವಾ ಕಾರ್ಯಗಳಿಗಾಗಿ ಸನ್ಮಾನಿಸಿ ಗೌರವಿಸಲಾಯಿತು. 

ಈ ಸಂದರ್ಭದಲ್ಲಿ ಚಬನೂರು ಕಾಶಿಲಿಂಗೇಶ್ವರ ಮಠದ ಪರಮ ಪೂಜ್ಯ ರಾಮಲಿಂಗಯ್ಯ ಮಹಾಸ್ವಾಮಿಗಳು, ಖ್ಯಾತ ನೇತ್ರತಜ್ಞ ಡಾ. ಪ್ರಭುಗೌಡ ಲಿಂಗದಳ್ಳಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್ ಎಸ್ ಪಾಟೀಲ ಕೂಚಬಾಳ, ಜಿ.ಪಂ ಮಾಜಿ ಸದಸ್ಯ ಶಿವಾನಂದ ದೇಸಾಯಿ, ಅಮಿಥಗೌಡ, ಆನಂದ ಮದರಕಲ, ಸಂಗನಗೌಡ ಅಸ್ಕಿ, ಮಂಜುನಾಥ ಕವಡಿಮಟ್ಟಿ, ಸೋಮು ಆನೇಸುರ ಇದ್ದರು. 


ಸುದ್ದಿ ಓದಿ