ದೈಹಿಕ ಶಿಕ್ಷಕ ಈರಣ್ಣರಿಗೆ ಸನ್ಮಾನ
ತಾಳಿಕೋಟೆ 01: ಪಟ್ಟಣದ ಸೆಕ್ರೆಡ್ ಹಾರ್ಟ್ ಹಾಗೂ ವಿಪಿಎಂ ಶಾಲೆಯ ದೈಹಿಕ ಶಿಕ್ಷಕ ಈರಣ್ಣ ಸಜ್ಜನ ಅವರಿಗೆ ಸಿರಿಗನ್ನಡ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಹಿನ್ನಲೆಯಲ್ಲಿ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮ್ಯಾನೇಜರ್ ರಾಬರ್ಟ್ ಕ್ರಾಸ್ತ, ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಐರಿನ್ ಹಾಗೂ ಶಿಕ್ಷಕರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಇದ್ದರು.