ಶಿಗ್ಗಾವ್

ಸಂಗಮೇಶ ಕಂಬಾಳಿಮಠಗೆ ಸನ್ಮಾನ

ಸಂಗಮೇಶ ಕಂಬಾಳಿಮಠಗೆ ಸನ್ಮಾನ

ಶಿಗ್ಗಾವಿ 11 : ಪಟ್ಟಣದ ಕೆಸಿಸಿ ಬ್ಯಾಂಕ್‌ನಲ್ಲಿ ಧಾರವಾಡ ಕೆಸಿಸಿ ಬ್ಯಾಂಕ್‌ಗೆ ಶಿಗ್ಗಾವಿಯಿಂದ ನೂತನ ನಿರ್ದೇಶಕರಾಗಿ ಆಯ್ಕೆಯಾದ ಸಂಗಮೇಶ ಕಂಬಾಳಿಮಠ ಅವರನ್ನ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ನೌಕರರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 

ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅದ್ಯಕ್ಷ ತಿಪ್ಪಣ್ಣಾ ಸಾತಣ್ಣವರ, ಶಿವಾನಂದ ಕಮಡೂಳ್ಳಿ, ರವಿ ಕಳ್ಳಿಮನಿ, ನೌಕರರಾದ ಎಂ ಎಸ್ ಪಾಟೀಲ, ಎನ್ ಸಿ ಸಿದ್ದಣ್ಣವರ, ಬಿ ಎನ್ ಪಾಟೀಲ, ಯಲ್ಲಪ್ಪಾ ಹಂಚಿನಮನಿ, ಈರಣ್ಣ ಗಡೆಣ್ಣವರ, ಈರಣ್ಣಾ ಸುರಪಗಟ್ಟಿ ಹಾಗೂ ಬ್ಯಾಂಕ್ ನೀರೀಕ್ಷಕರು, ಶಾಖಾ ವ್ಯವಸ್ಥಾಪಕರು, ತಾಲೂಕಿನ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ನೌಕರರು ಹಾಗೂ ಬ್ಯಾಂಕಿನ ಶಿಬ್ಬಂದಿಗಳು ಹಾಜರಿದ್ದರು ಉಪಸ್ಥಿತರಿದ್ದರು. 


ಸುದ್ದಿ ಓದಿ