ಇಂಡಿ

ಹಾಲು ಒಕ್ಕೂಟದ ನೂತನ ನೀರ್ದೆಶಕರಾಗಿ ಆಯ್ಕೆಯಾದ ರೇಷ್ಮಾ ಪೂಜಾರಿಗೆ ಸನ್ಮಾನ

ಹಾಲು ಒಕ್ಕೂಟದ ನೂತನ ನೀರ್ದೆಶಕರಾಗಿ ಆಯ್ಕೆಯಾದ ರೇಷ್ಮಾ ಪೂಜಾರಿಗೆ ಸನ್ಮಾನ

ಇಂಡಿ 13:  ತಾಲೂಕಿನ ಹೋರ್ತಿ ಗ್ರಾಮದ ಸೋಮೇಶ್ವರ ಶಿಕ್ಷಣ ಸಂಸ್ಥೆಯ ಹೋರ್ತಿ ಇದರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಲ್ಲಿಕಾರ್ಜುನ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್, ಸೋಮೇಶ್ವರ ಪ್ರೌಢ ಶಾಲೆ ಹಾಗೂ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಬಾಗಲಕೋಟೆ ಹಾಗೂ ವಿಜಯಪೂರ ಅವಳಿ ಜಿಲ್ಲೆಯ ಹಾಲು ಒಕ್ಕೂಟದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ರೇಷ್ಮಾ ಅಣ್ಣಪ್ಪ ಪೂಜಾರಿ ಇವರನ್ನು ಇಂದು ಶಾಲೆಗೆ ಕೂರಿಸಿಕೊಂಡು ಸನ್ಮಾನಿಸಿ ಗೌರವಿಸಲಾಯಿತು. 

ಸಂಸ್ಥೆಯ ಅಧ್ಯಕ್ಷೆ ಅನೀತಾ ಬೋಸಗಿ ಹಾಗೂ ಉಪಾಧ್ಯಕ್ಷರಾದ ಸುಮಂಗಲಾ ಬೋಸಗಿ, ಶಾಲೆಯ, ಪ್ರಾಚಾರ್ಯ ಅಬೀಜೀತ್ ಗಾಯಕವಾಡ ಮುಖ್ಯ ಗುರುಗಳಾದ ಬಿ ಬಿ ಗಡ್ಡದ ಶಿಕ್ಷಕರಾದ ಡಿ ಎಲ್ ಸಿಂಧೆ, ಎಮ್ ಆರ್ ತೇಲಿ, ಚನ್ನವೀರ ಹೀರೇಮಠ, ಅಜೀತ್ ಮಲ್ಲಾಡಕರ, ರೇವಣ್ಣ ಅಂಕಲಿಗಿ, ವಿ ಎ ಬಿರಾದಾರ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು ರೇಷ್ಮಾ ಅಣ್ಣಪ್ಪ ಪೂಜಾರಿ ಅವರು ಜೂನ್ ತಿಂಗಳಲ್ಲಿ ನಡೆದ ಬಾಗಲಕೋಟ ಹಾಗೂ ವಿಜಯಪುರ ಅವಳಿ ಜಿಲ್ಲೆಗಳ ಹಾಲು ಒಕ್ಕೂಟದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾರುವುದು ಇಲ್ಲಿ ಸ್ಮರಿಸಬಹುದಾಗಿದೆ ಹಾಗೂ ಇವರು ಈ ಸಂಸ್ಥೆಯ ನಿರ್ದೇಶಕಿಯಾಗಿ ಕಾರ್ಯನಿರ್ವಸುತ್ತಿದ್ದಾರೆ. 


ಸುದ್ದಿ ಓದಿ