ಕಾಂಗ್ರೇಸ ಬೆಂಬಲಿತ ಅಭ್ಯರ್ಥಿ ಪಾಟೀಲಗೆ ಸನ್ಮಾನ
ಶಿಗ್ಗಾವಿ 02: ತಾಲೂಕಿನ ಹನುಮರಹಳ್ಳಿ ಗ್ರಾಮ ಪಂಚಾಯತಿಗೆ ನೆಡೆದ ಚುನಾವಣೆಯಲ್ಲಿ ಕಾಂಗ್ರೇಸ ಬೆಂಬಲಿತ ಅಭ್ಯರ್ಥಿ ಬಿ.ಸಿ.ಪಾಟೀಲ ಆಯ್ಕೆಯಾದ ಹಿನ್ನಲೆಯಲ್ಲಿ ಅವರನ್ನು ಪಟ್ಟಣದ ಗೌಸಖಾನ ಮಳಿಗೆಯಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ವಕ್ತಾರ ಮಂಜುನಾಥ ಮಣ್ಣಣ್ಣವರ, ಪುರಸಭೆ ಸದಸ್ಯ ಗೌಸಖಾನ ಮುನಶಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹನುಮಂತ ಬಂಡಿವಡ್ಡರ, ಕಾಂಗ್ರೇಸ ಮುಖಂಡರಾದ ಮುಕ್ತಿಯಾರ ತಿಮ್ಮಾಪೂರ, ಮುನ್ನಾ ಲಕ್ಷ್ಮೇಶ್ವರ, ನೂರಹ್ಮದ ಮಾಳಗಿ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.