ವಕೀಲರ ಸಂಘದಿಂದ ಶಾಸಕರ ಅಭಿನಂದನಾ ಸನ್ಮಾನ
ಬೆಳವಣಿಗೆಗೆ ತಕ್ಕಂತೆ ಸೌಕರ್ಯಗಳು ಅಗತ್ಯ: ಶಾಸಕ ಅರುಣಕುಮಾರ
ರಾಣೀಬೆನ್ನೂರ 09: ಬಸ್ಟ್ಯಾಂಡ್ ಹತ್ತಿರದಲ್ಲಿರುವ ನ್ಯಾಯಾಲಯದ ಸಂಕೀರ್ಣವನ್ನು ಉಪಯೋಗಿ ಸಿಕೊಂಡು ಪಕ್ಕದಲ್ಲಿರುವ ತಾಲೂಕು ಪಂಚಾಯತಿಯ ಜಾಗೆ ಯನ್ನು ಪಡೆದುಕೊಂಡು ಬೃಹತ್ ಪ್ರಮಾಣದ ನ್ಯಾಯಾಲಯಗಳ ಸಂಕೀರ್ಣ, ವಕೀಲರ ಭವನ ಹಾಗೂ ವಾಹನಗಳಿಗೆ ಸುಸಜ್ಜಿತ ವಾದ ಪಾರ್ಕಿಂಗ್ ವ್ಯವಸ್ಥೆ ಮಾಡ ಲಾಗುವುದೆಂದು ಶಾಸಕ ಅರುಣ ಕುಮಾರ ಪೂಜಾರ ಹೇಳಿದರು.
ಅವರು ಇಲ್ಲಿನ ವಕೀಲರ ಸಂಘದ ಭವನದಲ್ಲಿ ನಡೆದ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಸಂಘಟನೆ ಪರವಾಗಿ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು. ವಾಣಿಜ್ಯ ನಗರವು ದಿನದಿಂದ ದಿನಕ್ಕೆ ಅತೀ ವೇಗವಾಗಿ ಬೆಳವಣಿಗೆ ಕಾಣುತ್ತಿದ್ದು ಅವಶ್ಯಕ್ಕೆ ತಕ್ಕಂತೆ ಇಲ್ಲಿಲ್ಲ ಆದ್ದರಿಂದ ತಾಲೂಕ ಪಂಚಾಯ್ತಿಯಿಂದÀ ನಿವೇಶನ ಪಡೆದು ಶೀಘ್ರದಲ್ಲಿಯೇ ಬೃಹತ್ ಪ್ರಮಾಣದ ನ್ಯಾಯಾಲಯಗಳ ಸಂಕೀರ್ಣ ನಿರ್ಮಾಣಕ್ಕೆ ಪ್ರಾಮಾ ಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ವಕೀಲರ ಕಲ್ಯಾಣ ನಿಧಿಗೆ ಧನ ಸಹಾಯ ನೀಡುವ ಕುರಿತು ವಕೀಲರ ಸಂಘದ ಅಧ್ಯಕ್ಷ ಬಿ.ಹೆಚ್.ಬುರಡಿಕಟ್ಟಿ ಅವರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಶಾಸಕರು ಕಲ್ಯಾಣ ನಿಧಿ ಅವಶ್ಯವಿದ್ದು ಅದಕ್ಕೆ ತಾವು ಸಹ ಹೆಚ್ಚಿನ ಆರ್ಥಿಕ ನೆರವು ನೀಡುವುದಾಗಿ ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ ಅವರು ವಕೀಲರುಗಳು ಹೇಳಿದ ಯಾವುದೇ ಕೆಲಸವನ್ನು ಚಾಚು ತಪ್ಪದೇ ಪ್ರಾಧಿಕಾರದ ಅಡಿಯಲ್ಲಿ ಬರುವ ಎಲ್ಲ ಕಾರ್ಯ ಗಳನ್ನು ಮಾಡಿಕೊಡುವುದಾಗಿ ಭರವಸೆ ನೀಡಿದರು. ಹಿರಿಯ ನ್ಯಾಯವಾದಿಗಳಾದ ಎಸ್.ಎಸ್. ರಾಮಲಿಂಗಣ್ಣನವರ, ಕೆ.ಶಿವಲಿಂಗಪ್ಪ, ಎಸ್.ಎಸ್.ಶಿರಗಂಬಿ, ಶಿವಕುಮಾರ ಮುದ್ದಪ್ಪಳವರ, ಪಿ.ಆರ್. ಕುಪ್ಪೇಲೂರ ಮಾತನಾಡಿ ಈಗಿರುವ ಕೋರ್ಟ ಕಟ್ಟಡದಲ್ಲಿ ಪಾರ್ಕಿಂಗ್ ವ್ಯವಸ್ಥೆ ಹದಗೆಟ್ಟಿದ್ದು ಜಾಗಾ ಚಿಕ್ಕದಾಗಿರುವುದರಿಂದ ಎಲ್ಲ ವಕೀ ಲರುಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಕಕ್ಷಿದಾರರು ಹೆದ್ದಾರಿಯಲ್ಲಿ ವಾಹನ ನಿಲ್ಲಿಸುವಂತಹ ವಾತಾವರಣವಿದ್ದು ನ್ಯಾಯಾಲಯದ ಪಕ್ಕದಲ್ಲಿರುವ ತಾ.ಪಂ.ನ ಜಾಗಾ ಪಡೆದು ಬೃಹತ್ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಮುಂದಾಗಬೇಕೆಂದು ಮನವಿ ಮಾಡಿದರು.
ಸಂಘದ ಅಧ್ಯಕ್ಷ ಬಿ.ಹೆಚ್.ಬುರಡಿಕಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಯಶೋಧಾ ದೊಡ್ಡಮನಿ ಪ್ರಾರ್ಥಿಸಿ, ಜಿ.ವಿ.ಮುಂಡಾಸದ ಸ್ವಾಗತಿಸಿ, ದಿಲೀಪ್ ಹರಳಹಳ್ಳಿ ನಿರೂಪಿಸಿ, ಕುಮಾರ ಎಳೆಹೊಳಿ ವಂದಿಸಿದರು.