ಶಿಗ್ಗಾವ್

ಡಾ. ಹನುಮಂತಪ್ಪರವರಿಗೆ ಸನ್ಮಾನ

ಡಾ. ಹನುಮಂತಪ್ಪರವರಿಗೆ ಸನ್ಮಾನ

ಶಿಗ್ಗಾವಿ 1: ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿರುವ, ಬಡವರ ಪಾಲಿನ ಆಶಾಕಿರಣ, ಜನ ಮೆಚ್ಚಿದ ಜನ ಸೇವಕರು ಹಾಗೂ ತಾಲೂಕಿನ ಎಲ್ಲ ಜನತೆಯೊಂದಿಗೆ ಬೆರತುಕೊಂಡು , ಹಗಲು ರಾತ್ರಿ ಎನ್ನದೆ ಎಲ್ಲಾ ರೋಗಿಗಳಿಗೆ ಚಿಕಿತ್ಸೆ ಕೊಡುವ ಮೂಲಕ,  ಅಧಿಕಾರಿಗಳ ಜೊತೆ, ರಾಜಕಾರಣಿಗಳ ಜೊತೆ, ಸಂಘ ಸಂಸ್ಥೆಗಳ ಜೊತೆ, ಎಲ್ಲಾ ಸಮಾಜದ ಗುರು- ಹಿರಿಯರ ಜೊತೆ,  ಪ್ರೀತಿ ವಿಶ್ವಾಸದಿಂದ  19 ವರ್ಷಗಳ ಕಾಲ ಕಾರ್ಯನಿರ್ವಹಿಸಿ ವೈದ್ಯೋ ಹರಿ ನಾರಾಯಣ ಎಂದು ಹೆಸರುವಾಸಿಯಾಗಿ ವಯೋ ನಿವೃತ್ತಿ ಹೊಂದಿದ  ಡಾ. ಹನುಮಂತಪ್ಪ.ಪಿ.ಎಚ್ ರವರಿಗೆ ಶಿಗ್ಗಾವಿ ತಾಲೂಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸನ್ಮಾನಿಸಿ ಗೌರವದೊಂದಿಗೆ ಬಿಳ್ಕೊಡಲಾಯಿತು.           

ದಲಿತ ಸಮಾಜದ ಹಿರಿಯರಾದ ಕರೆಪ್ಪ ಕಟ್ಟಿಮನಿ, ವಕೀಲರು ಹಾಗೂ ಮಾಜಿ ಜಿ.ಪಂ ಅಧ್ಯಕ್ಷ ಡಾ.ಮಲ್ಲೇಶಪ್ಪ ಹರಿಜನ, ಬಿಜೆಪಿ ಎಸ್ಸಿ ಮೋರ್ಚಾ ಶಿಗ್ಗಾವಿ ತಾಲೂಕ ಅಧ್ಯಕ್ಷ ಹನುಮಂತಪ್ಪ.ಫ.ಹರಿಜನ, ಮಾಜಿ ತಾ.ಪಂ ಸದಸ್ಯ ಮಲ್ಲೇಶಪ್ಪ ದೊಡ್ಡಮನಿ, ಜೀತ ವಿಮುಕ್ತಿ ನಿರ್ಮೂಲನಾ ಹಾವೇರಿ ಜಿಲ್ಲಾಧ್ಯಕ್ಷ ಸುರೇಶ ಹರಿಜನ, ಬಿಜೆಪಿ ಎಸ್ಸಿ ಮೋರ್ಚಾ ಪ್ರಧಾನಕಾರ್ಯದರ್ಶಿ ಸುರೇಶ ಮುಡೆಣ್ಣವರ, ಮರಾಠ ಸಮಾಜದ ಮುಖಂಡ ದೇವೇಂದ್ರ​‍್ಪ ಜಾದವ, ಅಲೆಮಾರಿ ಸಮಾಜದ ನಿರ್ದೇಶಕ ಪರಶುರಾಮ ದೊಡ್ಡಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ