ಎಂ ಎಸ್ ಪಾಟೀಲ್ ಹುಟ್ಟು ಹಬ್ಬ ನಿಮಿತ್ತ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ
ಬ್ಯಾಡಗಿ :ಕೊರೋನಾ ಎಮರ್ಜೆನ್ಸಿ ಸಂದರ್ಭದಲ್ಲಿ ತಮ್ಮ ಜೀವದ ಭಯವನ್ನು ಬಿಟ್ಟು ಸ್ವಯಂ ಪ್ರೇರಿತವಾಗಿ ಜನಸೇವೆ ಮಾಡಿದ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಬಿಜೆಪಿ ಮುಖಂಡ ಎಂ ಎಸ್ ಪಾಟೀಲ್ ಅವರ ಹುಟ್ಟು ಹಬ್ಬದ ಅಂಗವಾಗಿ ಅವರ ಅಭಿಮಾನಿಗಳ ಬಳಗದಿಂದ ಪಟ್ಟಣದ ಶ್ರೀ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ವಿಶೇಷ ಸನ್ಮಾನ ಮಾಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಎಂಎಸ್ ಪಾಟೀಲ್, ಕೊರೋನಾ ಸಂದರ್ಭದಲ್ಲಿ ತಮ್ಮ ಜೀವದ ಭಯವನ್ನು ಬಿಟ್ಟು ನೀವೆಲ್ಲರೂ ನಮ್ಮ ಸೇವೆ ಮಾಡಿದ್ದೀರಿ. ಆ ಸೇವೆಯ ಮುಂದೆ ನಾವು ಮಾಡುತ್ತಿರುವ ಸನ್ಮಾನ ದೊಡ್ಡದಲ್ಲ ಆದರೆ ನಿಮ್ಮ ದೊಡ್ಡ ತ್ಯಾಗಕ್ಕೆ ನಮ್ಮ ಚಿಕ್ಕ ಗೌರವ ಸಮರೆ್ಣ ಎಂದರು ಹಾಗೂ ಸಂದರ್ಭದಲ್ಲಿ ಮಾಜಿ ಶಾಸಕ ಹಾಗೂ ಉಗ್ರಾಣ ನಿಗಮ ಮಂಡಳಿಯ ಅಧ್ಯಕ್ಷರಾದ ಯುಬಿ ಬಣಕಾರ ಮಾತನಾಡಿ, ಎಂ ಎಸ್ ಪಾಟೀಲ ಅವರು ಹುಟ್ಟು ಹೋರಾಟಗಾಗಿರುವುದರಿಂದ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಯೋಗ್ಯವಾದ ವ್ಯಕ್ತಿ ಹಾಗೂ ಅವರ ಚಿಕ್ಕ ವಯಸ್ಸಿನ ಈ ಸಮಾಜಮುಖಿ ಕೆಲಸಗಳನ್ನು ನೋಡಿದರೆ ಮುಂದೊಂದು ದಿನ ದೊಡ್ಡ ವ್ಯಕ್ತಿ ಆಗುವ ಸಂದೇಹವೇ ಇಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.ಮಾಜಿ ಶಾಸಕರು ಸುರೇಶಗೌಡ ಪಾಟೀಲ್ ಮಾತನಾಡಿ, ಕೋರನ ವಾರಿಯರ್ಸ್ಗೆ ನೈತಿಕವಾಗಿ ಬೆಂಬಲ ಸೂಚಿಸುವ ಮೂಲಕ ಎಂ ಎಸ್ ಪಾಟೀಲ್ ಉತ್ತಮ ಸಾರ್ವಜನಿಕ ಕೆಲಸದಲ್ಲಿ ತೊಡಗಿರುವುದು ಶ್ಲಾಘನೀಯ ಸಮಾಜಮುಖಿಯಾಗಿ ಇನ್ನಷ್ಟು ಕೆಲಸಗಳನ್ನು ಮಾಡಲಿ ಎಂದು ಹಾರೈಸಿದರು.ಮುಪ್ಪನೇಶ್ವರ ಮಠದ ಚನ್ನಮಲ್ಲಿಕಾರ್ಜುನ ಶ್ರೀಗಳು ಮುರುಘರಾಜೇಂದ್ರ ಮಹಾಸ್ವಾಮಿಗಳು ಮಡ್ಲೂರು ಶ್ರೀಗಳು ಆಶೀರ್ವದಿಸಿದರು.ಈ ವೇಳೆ ಮಾಜಿ ಬಿಜೆಪಿ ತಾಲೂಕ ಅಧ್ಯಕ್ಷ ಸುರೇಶ್ ಅಸಾದಿ, ಹಿರಿಯ ಮುಖಂಡರಾದ ವಿವಿ ಹಿರೇಮಠ, ಮುರಿಗೆಪ್ಪ ಶೆಟ್ಟರ್ ,ಮರಡಪ್ಪ ಹಡಿಯಾಲ್, ಬಸವರಾಜ್ ಚತ್ರದ, ತಿರಕಪ್ಪ ಮರ ಬಸಣ್ಣನವರ್, ಮಲ್ಲೇಶ್ ಬಣಕಾರ್, ಮಂಜುಳಾ ಮಾಸುರ್ ಸೇರಿದಂತೆ ಕಾರ್ಯಕರ್ತ ಬಂಧುಗಳು ಅಭಿಮಾನಿಗಳು ಇನ್ನಿತರದಿದ್ದರು.