ಬೈಲಹೊಂಗಲ

ಅನ್ವರಹುಸೇನ ಪಾಟೀಲಗೆ ಸನ್ಮಾನ

ಅನ್ವರಹುಸೇನ ಪಾಟೀಲಗೆ ಸನ್ಮಾನ

ಬೈಲಹೊಂಗಲ 14:  ನಗರದ  ಉದ್ಯಮಿ   ಹಾಗೂ ಶ್ರೀ ಮಹಾಲಕ್ಷ್ಮಿ ಪಟ್ಟಣ ಸಹಕಾರಿ ಬ್ಯಾಂಕಿನ ನಿರ್ದೇಶಕ  ಅನ್ವರಹುಸೇನ ಪಾಟೀಲ ದಂಪತಿಗಳು  ಮಕ್ಕಾ-ಮದೀನಾ (ಉಮ್ರಾ) ಯಾತ್ರೆಗೆ ತೆರಳುತ್ತಿರುವ ನಿಮಿತ್ತ  ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕ ಘಟಕದ ವತಿಯಿಂದ  ಅವರನ್ನು ಸತ್ಕರಿಸಿ ಪ್ರಯಾಣ ಯಶಸ್ವಿಯಾಗಲಿ ಎಂದು ಶುಭ ಹಾರೈಸಲಾಯಿತು 

ಕಸಾಪ ತಾಲೂಕು ಅಧ್ಯಕ್ಷ ಎನ್‌.ಆರ್‌.ಠಕ್ಕಾಯಿ, ಚಂದ್ರಶೇಖರ ಕೊಪ್ಪದ  ಎಂ.ಟಿ.ಶೇಖ್, ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ  ಮೋಹನ ಪಾಟೀಲ, ಕವಿ, ಡಾ.ಮಲ್ಲಿಕಾರ್ಜುನ ಛಬ್ಬಿ(ಅರವಳ್ಳಿ), ಕ್ಷತ್ರಿಯ ಸಮಾಜದ ಮುಖಂಡ ಬಸವರಾಜ ಬಡಿಗೇರ ಅನೇಕರು ಇದ್ದರು. 


ಸುದ್ದಿ ಓದಿ