ವಿಜಯಪುರ

ನಿವೃತ್ತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸನ್ಮಾನ

ನಿವೃತ್ತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸನ್ಮಾನ

 ದೇವರಹಿಪ್ಪರಗಿ 04 : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ ದೇವರಹಿಪ್ಪರಗಿ ವತಿಯಿಂದ ನಿವೃತ್ತಿ ಹೊಂದಿದ ಶಿಕ್ಷಕರುಗಳಾದ ಎನ್‌.ಎಸ್‌. ಹಿರೇಮಠ ಹಾಗೂ ಬಿ.ಬಿ.ತಿಳಗೂಳ ಶಿಕ್ಷಕರನ್ನು ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಕರ ಸಂಘದ ಗೌರವಾಧ್ಯಕ್ಷರಾದ ಎಂ.ಎಚ್‌. ವಾಲಿಕಾರ, ಮುಖ್ಯ ಅತಿಥಿಗಳಾಗಿ ಪಿ. ಎಸ್‌. ಮಿಂಚಿನಾಳ, ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಸಿ. ತಳಕೇರಿ, ಕೋಶಾಧ್ಯಕ್ಷ ಧಾನು ರಾಠೋಡ, ಅತಿಥಿಗಳಾಗಿ ಎಸ್‌.ಜಿ. ತಾವರಖೇಡ, ಎಂ.ಕೆ.ನಂದಿ, ಎಂ.ಎಚ್‌.ಪಟೇಲ, ಹಳ್ಳಿ, ಆರಿ​‍್ಜ.ಕೋಟಿನ, ಮಹಾದೇವಪ್ಪ ಯಂಕಂಚಿ,ಗೊಲ್ಲಾಳ ಬಿರಾದಾರ ಸೇರಿದಂತೆ ಹಲವಾರು ಜನ ಶಿಕ್ಷಕರು ಇದ್ದರು. ಕಾರ್ಯಕ್ರಮದ ನಿರೂಪಣೆ ಅಣ್ಣಾರಾಯ ಭಜಂತ್ರಿ, ಎಸ್‌.ವಿ. ಕೋಟಿನ ಸ್ವಾಗತಿಸಿದರೆ, ಆರಿ​‍್ಜ.ಕೋಟಿನ ವಂದಿಸಿದರು. 


ಸುದ್ದಿ ಓದಿ