ಶಿಗ್ಗಾವ್

ಡಾ.ರಾಣಿ ತಿರ್ಲಾಪೂರಗೆ ಸನ್ಮಾನ

ಡಾ.ರಾಣಿ ತಿರ್ಲಾಪೂರಗೆ ಸನ್ಮಾನ

ಶಿಗ್ಗಾವಿ 18: ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ ಏಕೈಕ ಖಾಸಗಿ ಆಸ್ಪತ್ರೆ ಶಿಗ್ಗಾವಿಯ ಮೃತ್ಯುಂಜಯ ನರ್ಸಿಂಗ ಹೋಮ ಅತ್ತುತ್ಯಮ ಸೇವೆಯನ್ನು ಸಲ್ಲಿಸಿ ಪ್ರಮಾಣ ಪತ್ರವನ್ನು ಪಡೆದಿದ್ದಕ್ಕಾಗಿ ಪಟ್ಟಣದ ಜನತಾ ಬಜಾರ ಉಪಾಧ್ಯಕ್ಷ ಅಶೋಕ ಕಾಳೆ ನೇತೃತ್ವದಲ್ಲಿ ಡಾ.ರಾಣಿ ತಿರ್ಲಾಪೂರ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. 

ಈ ಸಂದರ್ಭದಲ್ಲಿ ಜೀವಿಕ ಜಿಲ್ಲಾ ಸಂಚಾಲಕ ಸುರೇಶ ಹರಿಜನ, ಮಂಜುನಾಥ ಕಂಕಣವಾಡ, ಪರುಶರಾಮ ಈಳಗೇರ, ಗೌಸ ಅಗಸಿನಮಟ್ಟಿ, ರಮೇಶ ಹರಿಗೊಂಡ, ಶೇಖಣ್ಣ ಬನ್ನಿಮಟ್ಟಿ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 


ಸುದ್ದಿ ಓದಿ