ಬಿ.ಕೆ. ಲಕ್ಷಾಣಿಗೆ ಸನ್ಮಾನ
ಮುಂಡಗೋಡ 29: ಪದೋನ್ನತಿ ಹೊಂದಿ ಶಿರಸಿ ಎ.ಪಿ.ಎಮ್.ಸಿ ಸಹಾಯಕ ನಿರ್ದೇಶಕರಾಗಿ ತೆರಳುತ್ತಿರುವ ಪಟ್ಟಣದ ತಾಲೂಕಾ ಕೃಷಿ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಬಿ.ಕೆ ಲಕ್ಷಾಣಿ ಅವರಿಗೆ ಶುಕ್ರವಾರ ಇಲ್ಲಿಯ ತಾಲೂಕಾ ಕೃಷಿ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಆಡಳಿತ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.
ಎ.ಪಿ.ಎಮ್.ಸಿ ಅಧ್ಯಕ್ಷ ಮಂಜುನಾಥ ವೆರ್ಣೇಕರ, ಉಪಾಧ್ಯಕ್ಷ ನಿಂಗನಗೌಡ ಪಾಟೀಲ, ಬಾಬಣ್ಣ ಕೋಣನಕೇರಿ, ಬಾಬುರಾವ್ ಲಾಡನವರ, ಶಿವಪ್ಪ ನಾಯ್ಕ, ಡಿ.ಎಸ್ ಮಹಾಲೆ ಮುಂತಾದವರು ಉಪಸ್ಥಿತರಿದ್ದರು.