ರಾಣೆಬೆನ್ನೂರ

ಎಲ್ಲ ಕನ್ನಡಿಗ ಮರಾಠಿಗರನ್ನು ದೂಷಿಸಬೇಡಿ : ಜಾಧವ್

ಎಲ್ಲ ಕನ್ನಡಿಗ ಮರಾಠಿಗರನ್ನು ದೂಷಿಸಬೇಡಿ : ಜಾಧವ್

ರಾಣೆಬೆನ್ನೂರ 15: ಕನ್ನಡಕ್ಕೆ ಅನ್ಯಾಯವಾದಾಗ ಪ್ರಥಮ ಬಾರಿಗೆ ಹೋರಾಟಕ್ಕೆ ಇಳಿದವರು ಕನ್ನಡಿಗ ಮರಾಠಿಗರು, ಕರ್ನಾಟಕದಲ್ಲಿ ಇರುವವರೆಲ್ಲರೂ ಅಪ್ಪಟ ಕನ್ನಡಿಗ ಮರಾಠಿಗರೇ ಆಗಿದ್ದಾರೆ. ಸರಕಾರವು ಕ್ಷತ್ರೀಯ ಸಮಾಜದ ಅಭಿವೃದ್ದಿ ಪ್ರಾಧಿಕಾರ ರಚಿಸಿದಾಗ ಬೆಳಗಾವಿ ಗಡಿಯಲ್ಲಿರುವ ಕೆಲವೇ ಕೆಲ ಮರಾಠಿಗರಿಂದ ಅಪಸ್ವರ ಬಂದಿತೆಂದು ಇಲ್ಲಿರುವ ಎಲ್ಲ ಕನ್ನಡಿಗ ಮರಾಠಿಗರನ್ನು ದೂಷಿಸಬೇಡಿ ಎಂದು ಮರಾಠ ಸಮಾಜದ ಹಿರಿಯ ಮುಖಂಡ ಡಾವಣಗೇರಿಯ ಯಶವಂತರಾವ್ ಜಾಧವ್ ಹೇಳಿದರು. 

ಸ್ಥಳೀಯ ದೊಡ್ಡಪೇಟೆಯ ತುಕ್ಕಾಭವಾನಿ ದೇವಸ್ಥಾನದಲ್ಲಿ ತಾಲೂಕು ಕ್ಷತ್ರಿಯ ಸಮಾಜದ ವತಿಯಿಂದ ನೂತನ ಗ್ರಾಮ ಪಂಚಾಯತಿ ಸದಸ್ಯರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿದರು. 

ರಾಜ್ಯದಲ್ಲಿ ಇಲ್ಲಿರುವವರೆಲ್ಲರೂ ಯಾರೂ ಸಹ ಮರಾಠಿ ಭಾಷೆ ಮಾತನಾಡುವುದಿಲ್ಲ. ಬದಲಾಗಿ ಕನ್ನಡವನ್ನೇ ಮಾತನಾಡಿ ನಿಜವಾದ ಕನ್ನಡಿಗ ಮರಾಠಿಗರು ಎನಿಸಿಕೊಂಡಿದ್ದಾರೆ. ಅಪಸ್ವರ ಎತ್ತುವವರು ಅವರು ಮಹಾರಾಷ್ಟ್ರದ ಮರಾಠಿಗರಾಗಿದ್ದಾರೆ ಎಂದರು.

ರಾಜ್ಯದಲ್ಲಿ ಮರಾಠ ಸಮಾಜದ ಜನ ಸಂಖ್ಯೆಯು 40 ಲಕ್ಷಕ್ಕೂ ಅಧಿಕವಿದ್ದರೂ ಸಹ ನಾವುಗಳೆಲ್ಲರೂ ಅಲ್ಪಸಂಖ್ಯಾತರಾಗಿದ್ದೇವೆ, ಸರಕಾರದಿಂದ ಸಿಗುವ ಸೌಲಭ್ಯ ಸಮರ್ಪಕವಾಗಿ ಸಿಗುತ್ತಿಲ್ಲ, ಇಂತಹ ಸಂದರ್ಭದಲ್ಲಿ ಮೇಲ್ವರ್ಗದವರು ಮೀಸಲಾತಿಗಾಗಿ ಹೋರಾಟ ಮಾಡಿದರೆ ನಾವೇನು ಪಾಪ ಮಾಡಿದ್ದೇವೆ. ಮೊದಲು ಕಾಲೆಳೆಯುವ ಕೆಲಸ ಬಿಡಬೇಕು, ಸಮಾಜ ಭಾಂದವರು ಅವಲೋಕನ ಮಾಡಬೇಕು, ಸಮಾಜದವರು ಬೇರೆ ಬೇರೆ ಪಕ್ಷಗಳಲ್ಲಿದ್ದರೂ ಸಹ ಸಮಾಜಕ್ಕೆ ಪಕ್ಷಾತೀತವಾಗಿ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಿ ಸಂಘಟನೆಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿಗೆ ನೂತನವಾಗಿ ಆಯ್ಕೆಯಾದ ಸೋಮು ಜಾಧವ್, ಯಮುನೇಶ್ ರಾಜನಹಳ್ಳಿ, ಸಂಜೀವ ನಾಗೇನಹಳ್ಳಿ, ಲಕ್ಷ್ಮೀ ಲೋಕಿಕೇರೆ, ದೇವೇಂದ್ರಪ್ಪ ಎಲಜಿ, ಚಂದ್ರಮ್ಮ ಮರಾಠ, ಬೇಬಕ್ಕ ದುರ್ಗೋಜಿರಾವ್, ಹನುಮಂತಪ್ಪ ಪವಾರ್, ಗೌರಮ್ಮ ಸಣ್ಣಬೋಮ್ಮಾಜಿ, ಹನುಮಂತಪ್ಪ ರಾಜನಹಳ್ಳಿ, ಕಸ್ತೂರೆವ್ವ ಕೊಳಜಿ, ಅಶೋಕ ಸೂರ್ವೆ, ಶೃತಿ ನಾಗರಜ್ಜಿ, ರೇಣುಕವ್ವ ಕೊಪ್ಪದ್, ಶೈಲಜಾ ಮಿಳ್ಳಿ, ಚಂದ್ರಪ್ಪ ಸೂರ್ವೆ, ರಾಜು ಹಲವಾಗಲ, ಅಶ್ವಿನಿ ಬಣಕಾರ, ನಿಂಗಪ್ಪ ಕೊಳಜಿ, ಹಾಲಮ್ಮ ಸಣ್ಣಬೊಮ್ಮಾಜಿ  ಮತ್ತಿತರನ್ನು ಸನ್ಮಾನಿಸಿ ಗೌರವಿಸಲಾಯಿತು. 

ತಾಲೂಕು ಅಧ್ಯಕ್ಷ ಪವಿತ್ರಕುಮಾರ ನಾಗೇನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕ್ಷತ್ರಿಯ ಮರಾಠ ಸಮಾಜದ ನಗರ ಅಧ್ಯಕ್ಷ ಶಿವಮೂರ್ತಿ ದಿಲ್ಲಿವಾಲಾ, ನಿವೃತ್ತ ಡಿವೈಎಸ್‍ಪಿ ಎಂ.ಎಸ್ ಜಾಧವ್, ಮಹಿಳಾ ಅಧ್ಯಕ್ಷೆ ನಾಗವೇಣಿ ಪವಾರ್, ಎಲ್ಲೋಜಿರಾವ್, ರಾಜು ನಲವಾಗಲ, ಉದಯಕುಮಾರ ಗಾವಡೆ, ಬಸವರಾಜಪ್ಪ, ಮಾರ್ತೆಪ್ಪ ಬೋಸ್ಲೆ, ಮಹೇಶಪ್ಪ ಜಾಧವ್, ಪರಶುರಾಮ ಕಾಳೇರ, ಬಿಕೆ ರಾಜನಹಳ್ಳಿ, ಮಾಲತೇಶ ಜಾಧವ್, ನರಸಿಂಹ ಮರಾಠೆ, ಶಿವಾನಂದ ಆರೇರ, ದೊಡ್ಡಗುತ್ತೆಪ್ಪ ತುಮ್ಮಿನಕಟ್ಟಿ, ಶಾಂತಪ್ಪ ಕೊಳಜಿ, ಶಿವಕುಮಾರ ಜಾಧವ್, ಮಾರುತಿರಾÀವ್ ಜಾಧವ್, ವೆಂಕಟೇಶ,  ಪ್ರಕಾಶ ಕೊಳಜಿ, ಶಿವಾಜಿರಾವ್ ಮಾಕನೂರ, ಪರಶುರಾಮ ಕೋಕಾಳೆ, ಸೇರಿದಂತೆ ಸಮಾಜದ ಹಿರಿಯ-ಕಿರಿಯ ಮುಖಂಡರು, ಗ್ರಾಪಂ ಸದಸ್ಯರುಗಳು ಮತ್ತಿತರರು ಪಾಲ್ಗೊಂಡಿದ್ದರು.

ಸುದ್ದಿ ಓದಿ