ಸಮಾಜದ ಸೇವಾ ಸಾಧಕ ಅಶೋಕಗೆ ಸನ್ಮಾನ
ರಾಣಿಬೆನ್ನೂರ 22: ಪಿಬಿ ರಸ್ತೆಯ ವೇಮನ ವಿಧ್ಯಾರ್ಧಕ ಸಂಘದ ಸಭಾಭವನದಲ್ಲಿ ಮಹಾ ಯೋಗಿ ವೇಮನವರ 609ನೇ ಜಯಂತ್ಯೋತ್ಸವ ಧಾರ್ಮಿಕ ಸಮಾರಂಭವು ಇತ್ತೀಚಿಗೆ ನಡೆಯಿತು. ಸಮಾರಂಭದಲ್ಲಿ ಸಮಾಜದ ಸೇವಾ ಸಾಧಕರಾದ ಹೂಲಿಹಳ್ಳಿಯ ಗುತ್ತಿಗೆದಾರ ಅಶೋಕ ಬೆಳವಗಿ ಅವರನ್ನು ಸಮಾಜದ ಗಣ್ಯರು ಅವರ ಸೇವಾ ಕಾರ್ಯವನ್ನು ಶ್ಲ್ಯಾಘಿಸಿ ಅಭಿನಂದಿಸಿ ಸನ್ಮಾನಿಸಿದರು. ರಾಮಚಂದ್ರಪ್ಪ ರಾಯರಡ್ಡಿ, ಏಕನಾಥ ಭಾನುವಳ್ಳಿ, ಆರ್.ಡಿ.ಹೊಂಬರಡಿ, ಯಲ್ಲಪ್ಪ ರಡ್ಡಿ ರಡ್ಡೇರ, ಆರ್.ಎಸ್.ಹೊಸಳ್ಳಿ, ಮಧು ಸಾವುಕಾರ, ಡಾ. ಎಂ.ಎಂ.ಅನಂತರಡ್ಡಿ, ಸುಭಾಸ್ ಸಾವುಕಾರ ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.