ತಾಲೂಕಿನ ಯುವ ಕಲಾವಿದರಿಗೆ ಸನ್ಮಾನ
ಶಿಗ್ಗಾವಿ 11: ಪಟ್ಟಣದ ವಿರಕ್ತಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವ-2021 ಲಿಂ.ಮನಿಪ್ರ ಸಂಗನಬಸವ ಮಹಾಸ್ವಾಮಿಗಳ ಪುಣ್ಯಾರಾಧನೆಯ ಕಾರ್ಯಕ್ರಮದಲ್ಲಿ ತಾಲೂಕಿನ ಯುವಗಾಯಕಿ ಗೌರಮ್ಮ ಮರಡಿ, ಭರತನಾಟ್ಯ ಕಲಾವಿದರಾದ ಶಾಂಭವಿ ಹಿರೇಮಠ, ಮನು ಯಲಿಗಾರ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು, ಡಾ. ಬಸವನಾಂದ ಶ್ರೀಗಳು ಮತ್ತು ಬಸವ ದೇವರು ಉಪಸ್ಥಿತರಿದ್ದರು.