ಧಾರವಾಡ - ಹುಬ್ಬಳ್ಳಿ

ಖ್ಯಾತ ವೈದ್ಯ ಡಾ. ಧನಪಾಲ್ ಹೆಗಡೆಯವರಿಗೆ ಮಾಲಾರ್ಪಣೆ

ಖ್ಯಾತ ವೈದ್ಯ ಡಾ. ಧನಪಾಲ್  ಹೆಗಡೆಯವರಿಗೆ ಮಾಲಾರ್ಪಣೆ

ಹುಬ್ಬಳ್ಳಿ 02 : ವೈದ್ಯರ ದಿನಾಚರಣೆ ಅಂಗವಾಗಿ ವಿದ್ಯಾನಗರದಲ್ಲಿ ಪ್ರಸಿದ್ದ ಶಾರದಾ ಕ್ಲಿನಿಕ್ ಮೂಲಕ ಕಳೆದ ಮೂವತ್ತಕ್ಕು ಹೆಚ್ಚು ವರ್ಷಗಳಿಂದ ಸಾವಿರಾರು ರೋಗಿಗಳಿಗೆ ಶ್ರೇಷ್ಟ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಾ ಬಂದಿರುವ, ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ, ಜನರ ಪ್ರೀತಿಗೆ ಪಾತ್ರರಾಗಿರುವ, ಪ್ಯಾಮಿಲಿ ಡಾಕ್ಟರ್ ಎಂದೇ ಹೆಸರಾದ, ಸೌಮ್ಯ, ಶಾಂತ ಸ್ವಭಾವ, ಉತ್ತಮ ಚಿಕಿತ್ಸಕ ಬುದ್ದಿ ಹೊಂದಿರುವ, ಖ್ಯಾತ ವೈದ್ಯೆರಾದ ಡಾ. ಧನಪಾಲ್ ಹೆಗಡೆ  ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಶಾಲು, ಗ್ರಂಥ ನೀಡಿ ಮಾಲಾರ್ಪಣೆ ಮಾಡಿ, ಗೌರವದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಹುತ್ಪೂರ್ವಕವಾಗಿ ಅಭಿನಂದನೆ ಸಲ್ಲಿಸಿದರು. ಶುಭ ಕೋರಿದರು. ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ,  ಶಿವರುದ್ರ ಟ್ರಸ್ಟನ ನಿರ್ದೇಶಕ ಡಾ. ಬಸವಕುಮಾರ ತಲವಾಯಿ, ನಿವೃತ್ ಶಿಕ್ಷಕ ಎಸ್‌.ಐ.ನೇಕಾರ, ಚುಟುಕು ಸಾಹಿತ್ಯ ಪರಿಷತ್ತಿನ ಚನ್ನಬಸಪ್ಪ ಧಾರವಾಡಶೆಟ್ಟರ, ಮುಂತಾದವರು ಇದ್ದರು. 


ಸುದ್ದಿ ಓದಿ