ರಾಣೆಬೆನ್ನೂರ

ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕಮಲಾಕರ್ ಗೌರವ ಸನ್ಮಾನ

ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕಮಲಾಕರ್ ಗೌರವ ಸನ್ಮಾನ

ರಾಣೆಬೆನ್ನೂರು 15:  ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿದ್ದ,ತಾಲೂಕಿನ ಗಂಗಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರಾದ, ಕಮಲಾಕರ  ಶಿ. ಮರಡೇರ ಅವರನ್ನು ತಾಲೂಕ ಚಿತ್ರಕಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು, ಶಾಂತಿ ನಗರದ ಅವರ  ಗ್ರಹ ಸಭಾದಲ್ಲಿ ಅಭಿನಂದಿಸಿ, ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ, ಬಸವರಾಜ ಗುಡಿಹಿಂದ್ಲರ, ಉಪಾಧ್ಯಕ್ಷ, ಪಿ.ಬಿ. ಐರಣಿ, ಸುನೀತಾ ಹುಲಿಹಳ್ಳಿ, ಎನ್‌. ಎನ್‌.ಪಾಟೀಲ್, ಎಸ್‌ಎಫ್ ಕುರಿಯವರ, ಜಿ. ಎನ್‌.ಪಾರ್ವತೇರ, ವಿ. ಐ.ಲಮಾಣಿ, ಎಂ.ಎಸ್‌. ಕನಕಣ್ಣವರ್, ಎಂ.ಎಸ್ ಚಕ್ರಸಾಲಿ,ಸುಖದೇವ್ ಕಾಂಬಳೆ  ಸೇರಿದಂತೆ ಸಂಘಟನೆಯ ಮತ್ತಿತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು. 


ಸುದ್ದಿ ಓದಿ